Wednesday, January 22, 2025

ಮುಂಬೈನಲ್ಲಿ ಕೊರೋನಾ ಬ್ಲಾಸ್ಟ್

ಮುಂಬೈನಲ್ಲಿ ಪ್ರತಿದಿನ 20,000 ಕ್ಕೂ ಅಧಿಕ ಪ್ರಕರಣಗಳು ಪತ್ತೆಯಾಗುತ್ತಿದ್ದು, ಜನರಲ್ಲಿ ಆತಂಕ ಮೂಡಿಸಿದೆ. ಮಹಾರಾಷ್ಟ್ರ ಸಿಎಂ ಉದ್ಧವ್​ ಠಾಕ್ರೆ ಇನ್ನೂ ಸಹ ಅಂತಿಮ ಲಾಕ್​ಡೌನ್ ನಿರ್ಧಾರವನ್ನು ಕೈಗೊಂಡಿಲ್ಲ. ಈ ಬಗ್ಗೆ ಆರೋಗ್ಯ ಸಚಿವ ರಾಜೇಶ್​ ಟೋಪೆ ಮಾತನಾಡಿ, ಮುಂಬೈನಲ್ಲಿ ಲಾಕ್​ಡೌನ್​ ಮಾಡುವ ನಿರ್ಧಾರವನ್ನು ಮುಖ್ಯಮಂತ್ರಿ ಉದ್ಧವ್​ ಠಾಕ್ರೆ ತೆಗೆದುಕೊಳ್ಳುತ್ತಾರೆ ಎಂದಿದ್ದಾರೆ.

ಕಳೆದ 24 ಗಂಟೆಗಳಲ್ಲಿ ಮುಂಬೈನಲ್ಲಿ 20,181 ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ. ಇದು ಬುಧವಾರ ಪತ್ತೆಯಾದ ಪ್ರಕರಣಗಳಿಗಿಂತ ಶೇ.33ರಷ್ಟು ಹೆಚ್ಚಾಗಿದೆ. ನಿನ್ನೆ 4 ಸಾವುಗಳು ಸಹ ದಾಖಲಾಗಿವೆ. ಮುಂಬೈನಲ್ಲಿ ಬುಧವಾರ 15,166 ಕೊರೋನಾ ಪ್ರಕರಣಗಳು ಪತ್ತೆಯಾಗಿದ್ದವು.

ಕಳೆದ 24 ಗಂಟೆಗಳಲ್ಲಿ ಪತ್ತೆಯಾದ ಹೊಸ ಪ್ರಕರಣಗಳಲ್ಲಿ, ಶೇ. 85ರಷ್ಟು ಕೇಸ್​​ಗಳಲ್ಲಿ ಯಾವುದೇ ರೋಗ ಲಕ್ಷಣಗಳು ಕಂಡು ಬಂದಿಲ್ಲ. ಆದರೆ 1,170 ಕೊರೋನಾ ಸೋಂಕಿತರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಜೊತೆಗೆ 106 ಮಂದಿ ಆಕ್ಸಿಜನ್​ ಸಪೋರ್ಟ್​ನಲ್ಲಿದ್ದಾರೆ ಎಂದು ತಿಳಿದು ಬಂದಿದೆ.

RELATED ARTICLES

Related Articles

TRENDING ARTICLES