ಮೇಕೆದಾಟು ಪಾದಯಾತ್ರೆ ವಿಚಾರವಾಗಿ ಸರ್ಕಾರ ಹಾಗೂ ವಿರೋಧ ಪಕ್ಷದ ನಡುವೆ ಜಲಯುದ್ಧ ಆರಂಭವಾಗಿದೆ. ನಿಗದಿಯಂತೆ ಪಾದಯಾತ್ರೆ ನಡದೇ ನಡೆಯುತ್ತದೆ. ಯಾರ ಪರ್ಮಿಷನ್ ನಮಗೆ ಬೇಕಾಗಿಲ್ಲ. ತಾಕತ್ ಇದ್ರೆ ನಮ್ಮ ರ‍್ಯಾಲಿ ತಡೆಯಲಿ ಅಂತ ಡಿಕೆಶಿ ಸವಾಲು ಹಾಕಿದ್ದಾರೆ.
ಕಾಂಗ್ರೆಸ್ ಪಾದಯಾತ್ರೆ ನಡೆಯುತ್ತೊ ಇಲ್ವೋ ಎಂಬ ಅನಿಶ್ಚಿತತೆ ಕಾಡ್ತಾ ಇತ್ತು. ಅದನ್ನು ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಜಂಟಿ ಸುದ್ದಿಗೊಷ್ಠಿ ಮಾಡುವ ಮೂಲಕ, ಪಾದಯಾತ್ರೆ ಮಾಡಿಯೇ ಮಾಡ್ತೇವೆ. ಕೊರೋನಾ ರೂಲ್ಸ್ ಫಾಲೋ ಮಾಡಿ ನೀರಿಗಾಗಿ ನಡಿಗೆ ಮಾಡ್ತೇವೆ. ಸರ್ಕಾರ ಬಂಧನ ಮಾಡಿದ್ರೂ ಡೊಂಟ್ ಕೇರ್ ಅಂತ ಎಚ್ಚರಿಕೆ ರವಾನಿಸಿದರು. ಯಾವಾಗ, ಗೃಹ ಸಚಿವ ಆರಗ ಜ್ಞಾನೇಂದ್ರ, ಪರ್ಮಿಷನ್ ಇಲ್ಲದೆ, ಅದ್ಹೇಗೆ ಪಾದಯಾತ್ರೆ ಮಾಡ್ತಾರೆ ನೋಡ್ತೀವಿ ಅಂತ ಕಾಂಗ್ರೆಸ್ ನಾಯಕರನ್ನು ಕೆಣಕಿದ್ದಾರೆ.
ಇನ್ನೂ, ಜನರ ಕುಡಿಯುವ ನೀರಿಗಾಗಿ ಕಾಂಗ್ರೆಸ್ ಹೋರಾಟ ಮಾಡುತ್ತಿದೆ. ಅದನ್ನು ತಡೆಯುವ ನಿಟ್ಟಿನಲ್ಲಿ ಕೊರೋನಾ ರೂಲ್ಸ್ ಜಾರಿ ಮಾಡಿದ್ದಾರೆ. ಆದ್ರೆ, ಬ್ಯಾಂಕ್ವೆಟ್ ಹಾಲ್ ಕಾರ್ಯಕ್ರಮದಲ್ಲಿ ಸಾವಿರಾರು ಜನರು ಸೇರಿದ್ರು. ಇದು ಸರ್ಕಾರದ ಕಣ್ಣಿಗೆ ಕಾಣಲಿಲ್ವಾ. ಸರ್ಕಾರಕ್ಕೆ ಒಂದು ನ್ಯಾಯ, ನಮಗೆ ಒಂದು ನ್ಯಾಯವಾ. ನನ್ನ ಪ್ರಾಣ ಹೋದ್ರೂ ಚಿಂತೆಯಿಲ್ಲ. ಪಾದಯಾತ್ರೆ ಮಾಡಿಯೇ ಮಾಡ್ತೀವಿ, ರ‍್ಯಾಲಿ ತಡೆಯಲಿ ಎಂದು ಸರ್ಕಾರಕ್ಕೆ ಸವಾಲು ಎಸೆದಿದ್ದಾರೆ.
ಕಾಂಗ್ರೆಸ್‌ನವರು ಹೇಗೆ ನಡೆದುಕೊಳ್ಳುತ್ತಿದ್ದಾರೆ ಅಂತ ರಾಜ್ಯದ ಜನರು ನೋಡುತ್ತಿದ್ದಾರೆ. ಪ್ರಧಾನಿ ಮೋದಿ ಕೂಡ ಕೊರೋನಾ ಕಾರಣಕ್ಕೆ ರ‍್ಯಾಲಿ ರದ್ದು ಮಾಡಿದ್ದಾರೆ. ತಾಕತ್ತು ಎಲ್ಲರಿಗೂ ಇರುತ್ತದೆ. ಅದನ್ನು ಎಲ್ಲೆಂದರಲ್ಲಿ ಪ್ರದರ್ಶನ ಮಾಡುವ ಅವಶ್ಯಕತೆ ಇಲ್ಲ. ನಾಟಕಗಳಲ್ಲಿ ಡೈಲಾಗ್ ಹೊಡೆಯುವಂತೆ ಶಿವಕುಮಾರ್ ಡೈಲಾಗ್ ಹೇಳುತ್ತಿದ್ದಾರೆ. ಅದಕ್ಕೆಲ್ಲ ಉತ್ತರ ಕೊಡುವುದಿಲ್ಲ ಅಂತ ಗೃಹ ಸಚಿವ ಆರಗ ಜ್ಞಾನೇಂದ್ರ, ಸಿಎಂ ಬೊಮ್ಮಾಯಿಗೆ ತಿರುಗೇಟು ನೀಡಿದ್ರು.
ಒಟ್ಟಿನಲ್ಲಿ ಕಾಂಗ್ರೆಸ್ ಹಾಗೂ ಸರ್ಕಾರದ ನಡುವೆ ಪಾದಯಾತ್ರೆ ಕೊನೆ ಕ್ಷಣದ ಯುದ್ಧ ಪ್ರಾರಂಭವಾಗಿದೆ. ಕೈ ಹಾಗೂ ಕಮಲ ನಾಯಕರ ಮಾತಿನ ಭರಾಟೆ ಜೋರಾಗುತ್ತಿದೆ. ಇದು ರಾಜ್ಯದ ಜನರು ರಾಜಕೀಯದತ್ತ ಗಿರಕಿ ಹೊಡೆಯುವಂತೆ ಮಾಡಿದೆ. ಅಲ್ಲದೆ ಪಾದಯಾತ್ರೆಯಂತೆ ಎಲ್ಲರ ಚಿತ್ತ ನೆಟ್ಟಿದೆ.