Monday, December 23, 2024

ಪವರ್​ ಟಿವಿ ಎಸ್​ಐಟಿ ತಂಡದಿಂದ ಭರ್ಜರಿ ಭ್ರಷ್ಟರ ಬೇಟೆ

ಒಂದು ಸಧೃಡ ಪ್ರಜಾಪ್ರಭುತ್ವಕ್ಕೆ ನಿರ್ಭೀತ ಪತ್ರಿಕೋದ್ಯಮ ತುಂಬಾ ಅಗತ್ಯ ಆದರೆ ದುರದೃಷ್ಟವೆಂದರೆ ಸದ್ಯ ಭಾರತದಲ್ಲಿ ಅಂತಹ ಪತ್ರಿಕೋದ್ಯಮ ಮಾಯವಾಗಿದೆ ಎಂದು ಸುಪ್ರೀಂಕೋರ್ಟ್​ನ ಮುಖ್ಯ ನ್ಯಾಯಾಧೀಶರು ರಮಣ ಅವರು ಅಭಿಪ್ರಾಯಪಟ್ಟಿದ್ದಾರೆ. ಆದರೆ, ನ್ಯಾಯಾಧೀಶರು ಮಾತನ್ನು ಇಂದು ಪವರ್ ಟಿವಿ ಸುಳ್ಳು ಮಾಡಿದೆ. ನಿರ್ಭೀತ ಪತ್ರಿಕೋದ್ಯಮ ಎಂದರೆ ಏನು ಎನ್ನುವುದನ್ನು ಪವರ್ ಟಿವಿ ಇಂದು ತಾನು ಪ್ರಾದೇಶಿಕ ಸಾರಿಗೆ ಕಛೇರಿಯ (ಆರ್​ಟಿಓ) ಚೆಕ್​ಪೋಸ್ಟ್​ಗಳ ಮೇಲೆ ನಡೆಸಿದ ಕುಟುಕು ಕಾರ್ಯಾಚರಣೆಯಿಂದ ಬ್ರಹ್ಮಾಂಡ ಭ್ರಷ್ಟಾಚಾರವನ್ನು ಬಯಲು ಮಾಡುವ ಮೂಲಕ ಪತ್ರಿಕೋದ್ಯಮದಲ್ಲಿ ನಿರ್ಭೀತತೆ ಇನ್ನೂ ಜೀವಂತವಾಗಿದೆ ಎನ್ನುವುದನ್ನು ಸಾರಿ ಹೇಳಿತು ಇದನ್ನೆ ಪವರ್ ಟಿವಿ ತಾನು ಭ್ರಷ್ಟರನ್ನು ಮಟ್ಟಹಾಕಲು ಆರ್​ಟಿಒ ಚೆಕ್​ಪೋಸ್ಟ್​ಗಳ ಮೇಲೆ ನಡೆಸಿದ ಕುಟುಕು ಕಾರ್ಯಾಚರಣೆಯ ಕಾರ್ಯಕ್ರಮವನ್ನು ಭ್ರಷ್ಟರ ಬೇಟೆ ಎಂಬ ಲೈವ್ ಕಾರ್ಯಕ್ರಮದಲ್ಲಿ ಜಗತ್ತಿಗೆ ಸಾರಿ ಹೇಳಿತು.

ಕಾರ್ಯಕ್ರಮವನ್ನು ನಡೆಸಿಕೊಟ್ಟ ರಾಘವ್ ಸೂರ್ಯ ಅವರು ಆರ್​ಟಿಓ ಚೆಕ್​ಪೋಸ್ಟ್​ನಲ್ಲಿ ನಡೆಯುತ್ತಿರುವ ಕೋಟಿ ಕೋಟಿ ಭ್ರಷ್ಟಾಚಾರವನ್ನು ನಿರ್ಭೀತಿಯಿಂದ ತಮ್ಮದೇ ವಿಶಿಷ್ಟ ಶೈಲಿಯಲ್ಲಿ ಎಳೆಎಳೆಯಾಗಿ ಬಿಚ್ಚಿಟ್ಟ ಪವರ್ ಟಿವಿಯ ಮ್ಯಾನೆಜಿಂಗ್ ಡೈರೆಕ್ಟರ್ ರಾಕೇಶ್ ಶೆಟ್ಟಿ, ಪವರ್ ಟಿವಿಯ ಸಲಹಾ ಸಂಪಾದಕರಾದ ರವೀಂದ್ರ ರೇಷ್ಮೆ ಹಾಗೂ ಪವರ್ ಟಿವಿಗೆ ಅತಿಥಿ ಆಗಿ ಆಗಮಿಸಿದ್ದ ಕೆಆರ್​ಎಸ್​ನ ಭ್ರಷ್ಟಾಚಾರದ ಕಡುವಿರೋಧಿ ರವಿಕೃಷ್ಣಾ ರೆಡ್ಡಿ ಆರ್​ಟಿಓ ಅಧಿಕಾರಿಗಳ ಭ್ರಷ್ಟಾಚಾರವನ್ನು ಬುಡಸಮೇತ ಬಯಲಿಗೆಳೆದರು.

ರಾಘವ್ ಸೂರ್ಯ ತಮ್ಮ ನಿರೂಪಣೆಯಲ್ಲಿ ಪವರ್ ಟಿವಿಯ ನೋ ನಾನ್​ಸೆನ್ಸ್ ಹಾಗೂ ನೊ ಕಾಂಪ್ರಮೈಸ್ ಆದ ಪವರ್ ಟಿವಿಯಿಂದ ಸಮಾಜದ ಅನಿಷ್ಟಗಳನ್ನು, ಪಿಡುಗುಗಳನ್ನು ಪ್ರಶ್ನೆ ಮಾಡುತ್ತ, ಸಮಾಜದ ಸಮಸ್ಯೆಗಳಿಗೆ ಪರಿಹಾರ ಹುಡುಕುತ್ತ, ಜನರ ಸಮಸ್ಯೆಗಳಿಗೆ ದನಿಯಾಗಿ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಸಿಂಹಸ್ವಪ್ನವಾಗುತ್ತ, ಎಚ್ಚರಿಸುತ್ತ, ನಮ್ಮ ಅರಿವನ್ನು ವಿಸ್ತರಿಸುತ್ತ ಒಂದು ಪತ್ರಿಕೋದ್ಯಮಕ್ಕೆ ಜ್ವಲಂತ ಉದಾಹರಣೆ ನಿಮ್ಮ ಪವರ್ ಟಿವಿ ಎಂದು ಅದ್ಭುತವಾದ ಮಾತುಗಳಿಂದ ಭ್ರಷ್ಟರ ಬೇಟೆ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟರು.
ಸರ್ಕಾರದ ವಿವಿಧ ಇಲಾಖೆಗಳಲ್ಲಿ ನಿರಂತರ ಲಂಚಾವತಾರ, ಭ್ರಷ್ಟಾಚಾರವನ್ನು, ಅದಕ್ಕೆ ಒಗ್ಗಿಕೊಂಡಿರುವ ನಮ್ಮ ಹದಗೆಟ್ಟ ಮನಸ್ಸುಗಳನ್ನು ಪ್ರಶ್ನಿಸುತ್ತ, ಆರ್​ಟಿಓ ಚೆಕ್​ಪೋಸ್ಟ್​ಗಳಲ್ಲಿ ನಮ್ಮ ವಿಶೇಷ ತನಿಖಾ ತಂಡದ ಕಾರ್ಯಾಚರಣೆ ಮಾಡಿದ ರೀತಿಯನ್ನು ಎಳೆಎಳೆಯಾಗಿ ಪವರ್​ ಟಿವಿ ಮುಖ್ಯಸ್ಥರಾದ ರಾಕೇಶ್ ಶೆಟ್ಟಿ ಅವರು ಬಿಚ್ಚಿಟ್ಟರು

ಚೆಕ್​ಪೋಸ್ಟ್​ಗಳಲ್ಲಿಯ ಸಿಬ್ಬಂದಿಯ, ಅಧಿಕಾರಿಗಳ ಭ್ರಷ್ಟಾಚಾರದ ಮುಖವನ್ನು ದಾಖಲೆ ಸಮೇತ ಬಟಾಬಯಲು ಮಾಡಿದ ರಾಕೇಶ್ ಶೆಟ್ಟಿ, ಹೇಗೆ ಚೆಕ್​ಪೋಸ್ಟ್​ನಲ್ಲಿಯ ಅಧಿಕಾರಿಗಳು ನಿರ್ಭೀತಿಯಿಂದ ಎಗ್ಗಿಲ್ಲದೆ ಲಂಚ ತೆಗೆದುಕೊಳ್ಳುತ್ತಾರೆ, ದಿನವೂ ಅಲ್ಲಿಂದ ಸಾಗುವ ಸಾವಿರಾರು ಲಾರಿಗಳಿಂದ ಹೇಗೆ ಗಂಟೆಗಳಲ್ಲೇ ಲಕ್ಷ ಲಕ್ಷ ವಸೂಲು ಮಾಡುತ್ತಾರೆ, ಪವರ್ ಟಿವಿ ಹೇಗೆ ಮಾರುವೇಶದಿಂದ ಚೆಕ್​ಪೋಸ್ಟ್​ಗಳ ಸಿಬ್ಬಂದಿಯ ಬಳಿ ಹೋಗಿ ಅವರನ್ನು ರೆಡ್​ಹ್ಯಾಂಡಾಗಿ ಅವರ ಭ್ರಷ್ಟಾಚಾರವನ್ನು ಶೂಟ್ ಮಾಡಿತು, ಅದಕ್ಕೆ ಅಲ್ಲಿನ ಅಧಿಕಾರಿಗಳು ಹೇಗೆ ಪವರ್ ಟಿವಿಯ ಎಸ್​ಐಟಿಗೆ ಲಂಚದ ಆಮಿಷ ತೋರಿಸಿ ಬುಟ್ಟಿಗೆ ಹಾಕಿಕೊಳ್ಳಲು ನೋಡಿತು, ಹಾಗೂ ಅವರು ತೆಗೆದುಕೊಳ್ಳುವ ಲಂಚದ ಹಣದಲ್ಲಿ ಹೇಗೆ ಮಂತ್ರಿ ಶ್ರೀರಾಮುಲುರಿಂದ ಹಿಡಿದು ಪ್ರತಿಯೊಬ್ಬ ದೊಡ್ಡ ಅಧಿಕಾರಿಯಿಂದ ಸಣ್ಣ ಅಧಿಕಾರಿಯವರೆಗೂ ಪಾಲು ಹೋಗುತ್ತದೆ ಎಂಬುದನ್ನು ದಾಖಲೆಗಳ ಸಮೇತ ವಿವರಿಸಿದರು. ಚೆಕ್​ಪೋಸ್ಟ್​ನ ಅಧಿಕಾರಿಗಳು ಹಾಗೂ ಸಿಬ್ಬಂದಿ ನಿರ್ಭೀತಿಯಿಂದ ಈ ಜಾಗಕ್ಕೆ ಬರಲು ನಾವು ಎಷ್ಟು ಲಕ್ಷ ಕೊಟ್ಟಿದ್ದೇವೆ, ಇಲ್ಲಿಗೆ ಬರಲು ಒಂದು ರೀತಿಯ ಹರಾಜು ನಡೆಸಲಾಗುತ್ತದೆ. ಅಷ್ಟರ ಮಟ್ಟಿಗೆ ಇಲ್ಲಿ ಕಮಾಯಿಯಿದೆ, ನಾವು ಇಲ್ಲಿನ ಲಂಚದ ಕಲೆಕ್ಷನ್​ಅನ್ನು ಎಲ್ಲರಿಗೂ ಹಂಚುತ್ತೇವೆ ಎಂದು ಅವರಾಗಿಯೇ ಒಪ್ಪಿಕೊಂಡಿದ್ದನ್ನು ತಮಾಷೆಯಾಗಿ ವಿಶಿಷ್ಟ ಶೈಲಿಯಲ್ಲಿ ನೋಡುಗರಿಗೆ ವಿವರಿಸಿದರು.

ಗೌರಿಬಿದನೂರು ಚೆಕ್​ಪೋಸ್ಟ್​ನಲ್ಲಿ ಮಧ್ಯರಾತ್ರಿ ಪವರ್​ ಟಿವಿಯ ಎಸ್​ಐಟಿ ತಂಡ ಹೋದಾಗ ಅಲ್ಲಿ RTO ಅಧಿಕಾರಿಗಳು ಬಹಿರಂಗ ವಸೂಲಿಗೆ ನಿಂತಿದ್ದರು. ಆಗ ಲಾರಿ ಚಾಲಕರ ವೇಶದಲ್ಲಿ ಸರತಿ ಸಾಲಿನಲ್ಲಿ ಪವರ್ ಎಸ್​ಐಟಿ ಸಿಬ್ಬಂದಿ ನಿಂತರು. ಆರ್​ಟಿಒ ಸಿಬ್ಬಂದಿ ಪವರ್ ತಂಡದಿಂದಲೂ 500 ರೂಪಾಯಿ ಲಂಚ ಪಡೆದು ರಸೀತಿ ನೀಡದೆ ಕಳುಹಿಸಿದರು. ಆಗ ಪವರ್ ಟಿವಿ ಕ್ಯಾಮೆರಾ ತೆಗೆಯುತ್ತಿದ್ದಂತೆಯೇ RTO ಸಿಬ್ಬಂದಿಗಳು ಅಲ್ಲಿಂದ ಓಟಕಿತ್ತರು. RTO ಇನ್ಸ್​ಪೆಕ್ಟರ್ ದಿಲೀಪ್ ಕ್ಯಾಮೆರಾ ಕಂಡು ಕಛೇರಿಯಲ್ಲೇ ಅಡಗಿ ಕುಳಿತರು. ಇಲ್ಲಿ ಪವರ್ ಟಿವಿಗೆ ಭ್ರಷ್ಟಾಚಾರದ ಸ್ಪಷ್ಟ ಮಾಹಿತಿ ಸಿಕ್ಕಿತ್ತು.

ಬಾಗೇಪಲ್ಲಿ, ಝಳಕಿ ಹೀಗೆ ಹಲವಾರು ಚೆಕ್​ಪೋಸ್ಟ್​ಗಳಲ್ಲಿಯ ಭ್ರಷ್ಟಾಚಾರವನ್ನು ಎಳೆಎಳೆಯಾಗಿ ಬಿಚ್ಚಿಟ್ಟ ರಾಕೇಶ್ ಶೆಟ್ಟಿ ಅವರಿಗೆ ಒಬ್ಬ ಆರ್​ಟಿಒ ಇನ್ಸ್​ಪೆಕ್ಟರ್ ಹೇಳಿದರಂತೆ. ಸರ್, ನೀವು ಹೀಗೆ ನಿಮ್ಮವರನ್ನು ವೇಶ ಮರೆಸಿ ಕಳುಹಿಸಬೇಡಿ. ನೀವು ನೇರವಾಗಿ ಬಂದರೂ ನಾವು ತೆಗೆದುಕೊಳ್ಳುವುದನ್ನು ನಿಲ್ಲಿಸುವುದಿಲ್ಲ. ನೀವು ಇಲ್ಲಿಂದ ಹೋಗಿ ಅರ್ಧಗಂಟೆಯಲ್ಲೆ ನಾವು ಮತ್ತೆ ನಮ್ಮ ಲಂಚ ತೆಗೆದುಕೊಳ್ಳುವ ಕೆಲಸವನ್ನು ಮುಂದುವರೆಸುತ್ತೇವೆ. ಆ ಅಧಿಕಾರಿ ಹೇಳಿದ್ದು ಎಷ್ಟು ಸತ್ಯವಾಗಿತ್ತೆಂದರೆ ನಾವು ಅಲ್ಲಿಂದ ಹೋಗಿ ಒಂದು ಕಪ್ ಕಾಫಿ ಕುಡಿದು ಅರ್ಧಗಂಟೆ ಬಿಟ್ಟು ಅಲ್ಲಿಗೆ ಬಂದರೆ ಅಲ್ಲಿ ಮತ್ತೆ ಅದೇ ಕೆಲಸ ನಡೆದಿತ್ತು!

ಜೀವ ತೆಗೆಯಲೂ ಹೇಸದ ಅಲ್ಲಿನ ಅಧಿಕಾರಿಗಳು, ಸಿಬ್ಬಂದಿಗಳು ಇವರ ವಿರುದ್ಧ ಜೀವದ ಹಂಗು ತೊರೆದು ಪವರ್ ಟಿವಿಯ ಎಸ್​ಐಟಿ ತಂಡ ರಾಕೇಶ್​ಶೆಟ್ಟಿಯವರ ನೇತೃತ್ವದಲ್ಲಿ ನಡೆಸಿದ ಕಾರ್ಯಾಚರಣೆಯ ಇನ್ನೂ ವಿವರಗಳನ್ನು ಮುಂದಿನ ಭಾಗದಲ್ಲಿ ಹೇಳುತ್ತೇವೆ.

RELATED ARTICLES

Related Articles

TRENDING ARTICLES