Sunday, January 19, 2025

ಗಂಟಲು ನೋವಿಗೆ ಇಲ್ಲಿದೆ ಪರಿಹಾರ

ಈ ಬಾರಿ ಚಳಿ ಹೆಚ್ಚಾಗಿಯೇ ಇದೆ. ಚಳಿಗಾಲ ಬಂತು ಅಂದ್ರೆ ಸಾಕು ಎಲ್ಲಿಲ್ಲದ ಕಾಯಿಲೆಗಳು ನಮ್ಮನ್ನ ಹುಡುಕುತ್ತಾ ಬರುತ್ತವೆ. ಜ್ವರ, ಶೀತ  ಕೆಮ್ಮು ಮತ್ತು ಶೀತಗಳ ಹೊರತಾಗಿ, ಅತೀ ನೋವನ್ನುಂಟು ಮಾಡುವ ಗಂಟಲು ನೋವು ಹೆಚ್ಚಾಗಿ ಕಾಣಿಸುತ್ತವೆ. ಚಳಿಗಾಲದಲ್ಲಿ ವೈರಸ್​​​​​ಗಳು ಬೇಗ ಮನುಷ್ಯರನ್ನ ಆವರಿಸುತ್ತವೆ. ಅತಿ ಹೆಚ್ಚು ಗಂಟಲು ನೋವು ಕಾಣಿಸಿಕೊಳ್ಳೋದಕ್ಕೆ ಬ್ಯಾಕ್ಟೀರಿಯಾಗಳು ಸಹ ಕಾರಣ ಎಂದು ಹೇಳಲಾಗುತ್ತೆ. ಸ್ಟ್ರೆಪ್ಟೋಕೊಕಸ್ ಬ್ಯಾಕ್ಟೀರಿಯಾದಿಂದ ಉಂಟಾಗುವ ಸ್ಟ್ರೆಪ್ ಗಂಟಲಿಗೆ ಹೆಚ್ಚು ಅಪಾಯಕಾರಿ. ಸ್ಟ್ರೆಪ್ಟೋಕೊಕಸ್ ಬ್ಯಾಕ್ಟೀರಿಯಾದ ಸೋಂಕಿನಿಂದಲೂ ಹೆಚ್ಚಿನ ಜ್ವರ ಉಂಟಾಗುತ್ತದೆ. ಸ್ಟ್ರೆಪ್ ಥ್ರೋಟ್ ಸೋಂಕು ವೈರಲ್ ಗಂಟಲಿನ ಸೋಂಕಿಗಿಂತ ಹೆಚ್ಚು ತೊಂದರೆ ಉಂಟುಮಾಡಬಹುದು. ಆದರೆ, ಗಾಬರಿಯಾಗಬೇಡಿ, ಗಂಟಲು ನೋವನ್ನು ತೊಡೆದುಹಾಕಲು ನೀವು ಕೆಲವು ಮನೆಮದ್ದುಗಳನ್ನ ಉಪಯೋಗಿಸಬಹುದು.

ಶೀತ ಮತ್ತು ಗಂಟಲು ನೋವು ತೊಡೆದುಹಾಕಲು ಕೆಲವೊಂದು ಪರಿಹಾರಗಳು

1.ಅರಿಶಿನ ಚಹಾ:

 

ಗಂಟಲು ನೋವಿನ ಸಮಸ್ಯೆ ಪ್ರತಿಯೊಬ್ಬರಲ್ಲಿ ಕಾಡೋದು ಸಹಜ, ಗಂಟಲು ನೋವಿನ ವಿರುದ್ಧ ಅರಿಶಿಣ ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತದೆ. ಅರಿಶಿನ ಚಹಾ ಗಂಟಲಿನ ಉರಿಯೂತವನ್ನು ಕಡಿಮೆ ಮಾಡಿ ಗಂಟಲ ನೋವನ್ನು ಕಡಿಮೆ ಮಾಡುತ್ತದೆ. ಜೊತೆಗೆ ಸಾಮಾನ್ಯ ಶೀತವನ್ನು ಗುಣಪಡಿಸಲು ಸಹಾಯ ಮಾಡುತ್ತದೆ. ಅರಿಶಿನ ಚಹಾ ಮಾಡಲು ಸುಮಾರು 5 ಕಪ್​​ ನೀರಿಗೆ ಒಂದು ಟೇಬಲ್ ಚಮಚ ಅರಿಶಿಣ ಪುಡಿಯನ್ನು ಹಾಕಿ ಚೆನ್ನಾಗಿ ಕುದಿಸಿ ನಂತರ ಅದನ್ನ ಸೋಸಿಕೊಂಡು ಸ್ವಲ್ಪ ನಿಂಬೆಹಣ್ಣಿನ ರಸ, ಜೇನು ತುಪ್ಪವನ್ನ ಸೇರಿಸಿ ಕುಡಿಯುವ ಅಭ್ಯಾಸ ಮಾಡಿಕೊಂಡರೆ ಗಂಟಲು ನೋವು ಕಡಿಮೆಯಾಗುತ್ತದೆ. ಆದಷ್ಟು ಈ ಚಹಾವನ್ನ ಬಿಸಿ ಇರುವಾಗಲೇ ಸೇವಿಸಿದರೆ ಉತ್ತಮ.

2.ಜೇನುತುಪ್ಪ

ಜೇನು ಎಷ್ಟು ರುಚಿಯಾಗಿದೆಯೋ ಅಷ್ಟೇ ಆರೋಗ್ಯಕ್ಕೆ ಒಳ್ಳೆಯದು. ತುಂಬಾ ಕೆಮ್ಮು ಕಫ ಇದ್ದವರು, ಜೇನುತುಪ್ಪ, ಶುಂಠಿ ರಸದ ಜೊತೆಗೆ ಕಾಳು ಮೆಣಸನ್ನ ಮಿಕ್ಸ್​​ ಮಾಡಿ ಸೇವಿಸಿದರೆ ಕಫ ಕಡಿಮೆ ಮಾಡಿ ಕೆಮ್ಮನ್ನು ಹೋಗಲಾಡಿಸುತ್ತದೆ. ಜೇನುತುಪ್ಪದಲ್ಲಿ ಇರುವ ಪ್ರತಿಜೀವಕ ಗುಣವು ಅನಾರೋಗ್ಯ ಸಮಸ್ಯೆಯನ್ನ ನಿವಾರಿಸುತ್ತದೆ. ಜೇನುತುಪ್ಪವನ್ನ ಆಯುರ್ವೇದದಲ್ಲಿ ಹೆಚ್ಚಾಗಿ ಬಳಸುತ್ತಾರೆ. ಜೇನುತುಪ್ಪವನ್ನ ಚಹಾ ಅಥವಾ ಕಷಾಯದೊಂದಿಗೆ ಸೇವನೆ ಮಾಡಬಹುದು.

3.ತುಳಸಿ ಕಷಾಯ:

ಆಯುರ್ವೇದದಲ್ಲಿ ತುಳಸಿಯನ್ನು ಬಹಳ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ತುಳಸಿಯಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಗುಣವಿದೆ. ತುಳಸಿ ಎಲೆಯಿಂದ ಚಹಾ ಅಥವಾ ಕಷಾಯವನ್ನು ಸೇವಿಸುವುದರಿಂದ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ತುಳಸಿ ಎಲೆಗಳಲ್ಲಿ ವಿಟಮಿನ್ ಎ,ಡಿ ಮತ್ತು ಕಬ್ಬಿಣಾಂಶಗಳು ಇರುತ್ತವೆ.

4.ಪುದಿನಾ ಎಲೆ:

ಪುದಿನಾ ಎಲೆಗಳಲ್ಲಿ ಹೆಚ್ಚಾಗಿ ಪೋಷಕಾಂಶಗಳು ಇರೋದ್ರಿಂದ ಜೀರ್ಣಾಂಗಗಳ ಉರುಯೂತವನ್ನ ವಿವಾರಿಸುವಲ್ಲಿ ಉತ್ತಮವಾಗಿದೆ, ಒಂದಿ ವೇಳೆ ಕಫ ಕಟ್ಟಿಕೊಂಡು ಗಂಟಲಿನಲ್ಲಿ ನೋವು ಹೆಚ್ಚಾಗಿದ್ದರೆ ಪುದಿನಾ ಚಹಾ ಸೇವನೆ ಮಾಡಿದರೆ ಕಫವನ್ ಸಡಿಲಗೊಳಿಸುವ ಮೂಲಕ ಗಂಟಲನೋವನ್ನ ಕಡಿಮೆ ಮಾಡುತ್ತದೆ. ಪುದಿನಾದಲ್ಲಿರುವ ಮೆಂಥಾಲ್​​ ಗಂಟಲಿನ ಉರಿಯೂತವನ್ನ ಕಡಿಮೆ ಮಾಡಿ ತಣ್ಣನೆಯ ಅನುಭವವನ್ನ ನೀಡುತ್ತದೆ.

ರಮ್ಯಾ , ಪವರ್​ ಟಿವಿ

RELATED ARTICLES

Related Articles

TRENDING ARTICLES