ಗದಗ : ಮೇಕೆದಾಟು ವಿಚಾರವನ್ನು ಕಾಂಗ್ರೆಸ್ ಹಿರಿಯ ಶಾಸಕ ಎಚ್.ಕೆ ಪಾಟೀಲ, ಪಾದಯಾತ್ರೆಯ ಸಮರ್ಥಿಸಿಕೊಂಡು ಸರ್ಕಾರದ ನಿಲುವಿನ ವಿರುದ್ಧ ಗುಡುಗಿದರು.
ಗದಗ ಕಾಂಗ್ರೆಸ್ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೇಕೆದಾಟು ಹಾಗೂ ಕೋವಿಡ್ ವಿಚಾರದಲ್ಲಿ ಸರ್ಕಾರದ ವಿರುದ್ಧ ಗುಡುಗಿದ್ದಾರೆ. ಕಾರಣ, ಕೋವಿಡ್ ನಿಯಮ ಪಾಲಿಸಿ ಪಾದಯಾತ್ರೆ ಮಾಡಿದ್ರೆ ಜನರಲ್ಲಿ ತಪ್ಪು ಸಂದೇಶ ಹೋಗಲ್ಲ. ನಾವು ಸಾಮಾಜಿಕ ಅಂತರ, ಮಾಸ್ಕ್, ಸ್ಯಾನಿಟೈಜರ್ ಇಟ್ಟುಕೊಂಡು ಪಾದಯಾತ್ರೆ ಮಾಡ್ತೀವಿ. ವೀಕೆಂಡ್ ಲಾಕಡೌನ್ ಮಾಡಿದ್ದು, ಇತ್ತೀಚೆಗೆ, ಆದ್ರೆ ನಾವು ಭಾನುವಾರ ಪಾದಯಾತ್ರೆ ನಿಗದಿಯಾಗಿ ಬಹಳ ದಿನ ಕಳೆದಿದೆ.
ಕೋವಿಡ್ ನಿಯಮ ಉಲ್ಲಂಘನೆ ಮಾಡುವುದು ನಮ್ಮ ಉದ್ದೇಶವಲ್ಲ. ಜನ ಜಾಗೃತಿ, ಮೇಕೆದಾಟು ಯೋಜನೆ ಜಾರಿ ನಮ್ಮ ಛಲ, ಹೋರಾಟವಾಗಿದೆ. ನಿದ್ರಾವಸ್ಥೆಯಲ್ಲಿರುವ ಸರ್ಕಾರವನ್ನ ಜಾಗೃತ ಗೊಳಿಸಲು, ಜನರಲ್ಲಿ ಅರಿವು ಮೂಡಿಸಲು ಈ ಪಾದಯಾತ್ರೆ ಅನಿವಾರ್ಯವಾಗಿದೆ. ಈ ಹೋರಾಟವನ್ನ ನಿಲ್ಲಿಸಲು ಮುಂದಾಗುವುದನ್ನು ನಾವು ಒಪ್ಪಲ್ಲ. ಪಾದಯಾತ್ರೆ ಮಾಡೇ ತೀರುತ್ತೆವೆ.
ಜನ ಜಾಗೃತಿ ಮಾಡುವುದು ರಾಜಕೀಯ ಪಕ್ಷಗಳ ಹಕ್ಕು, ಆದ್ಯ ಕರ್ತವ್ಯ ಎಂದ್ರು. ಇನ್ನು ಕೋವಿಡ್ ಬಗ್ಗೆ ಮಾತನಾಡಿ, ಒಮಿಕ್ರಾನ್ ಗೊತ್ತು ಹಿಡಿಯಲು, ಸ್ಪಷ್ಟ ಚಿತ್ರ ಬರಲು ನಮ್ಮ ರಾಜ್ಯದಲ್ಲಿ ಬಹಳ ಸಮಯ ತೆಗೆದುಕೊಳ್ಳುತ್ತಿದೆ. ಅದ್ಯಾಕೆ ವಿಳಂಬವಾಗುತ್ತಿದೆ, ಯಾಕೆ ತಡೆಹಿಡಿಯುತ್ತಿದ್ದಾರೋ ಗೊತ್ತಾಗುತ್ತಿಲ್ಲ. ದಯಮಾಡಿ ಎಲ್ಲವನ್ನು ಪಾರದರ್ಶವಾಗಿಡಿ, ವೈಜ್ಞಾನಿಕ ಗುರುತಿಸುವಿಕೆಯನ್ನು ಮುಚ್ಚಿಡಬೇಡಿ. ೨ನೇ ಅಲ್ಲೆಯಲ್ಲಿ ಸಾವು ನೋವುಗಳನ್ನು ಮುಚ್ಚಿಟ್ರಿ, ಪರಿಹಾರ ಕೊಡಬೇಕಾಗುತ್ತದೆ ಎಂದು ಗಂಭೀರ ಆರೋಪ ಮಾಡಿದರು.