Thursday, December 26, 2024

ಚಲಿಸುತ್ತಿದ್ದ ಕಬ್ಬಿನ ಟ್ರಾಕ್ಟರ್​ಗೆ ಆಕಸ್ಮಿಕ ಬೆಂಕಿ

ಬಾಗಲಕೋಟೆ : ಚಲಿಸುತ್ತಿದ್ದ ಕಬ್ಬಿನ ಟ್ರಾಕ್ಟರ್​​ಗೆ ಆಕಸ್ಮಿಕ ಬೆಂಕಿತಗುಲಿದ ಘಟನೆ ಜಮಖಂಡಿ ನಗರದಲ್ಲಿ ನಡೆದಿದೆ. ವಿದ್ಯುತ್ ತಂತಿ ತಗುಲಿ ಟ್ರಾಕ್ಟರ್​​ಗೆ ಹೊತ್ತಿಕೊಂಡ ಬೆಂಕಿ , ಅದೃಷ್ಟವಶಾತ್ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಬಾಗಲಕೋಟೆ ಜಿಲ್ಲೆ ಜಮಖಂಡಿ ನಗರದಲ್ಲಿ ಘಟನೆ ನಡೆದಿದ್ದು, ವಿದ್ಯುತ್ ತಂತಿ ತಗುಲಿ ಬೆಂಕಿ ಹತ್ತಿಕೊಂಡಿದೆ. ಇದರಿಂದ ಟ್ರ್ಯಾಕ್ಟ್​ರ್​ನಲ್ಲಿದ್ದ ಕಬ್ಬಿನ ಲೋಡ್ ಹೊತ್ತಿ ಉರಿದಿದೆ.ಸ್ಧಳೀಯ ಪೊಲೀಸರ ಸಮಯಪ್ರಜ್ಞೆಯಿಂದ ಭಾರೀ ಅನಾಹುತ ತಪ್ಪಿದೆ.ಬಾಗಲಕೋಟೆಯ ಬಸವೇಶ್ವರ ವೃತ್ತದ ಬಳಿ ಟ್ರ್ಯಾಕ್ಟ್​ರ್​ ನಿಲ್ಲಿಸಿ ಬೆಂಕಿ ಅಗ್ನಿಶಾಮಕ ದಳ ಹಾಗೂ ಪೊಲೀಸ್ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪ್ರಭುಲಿಂಗೇಶ್ವರ ಕಾರ್ಖಾನೆಗೆ ಕಬ್ಬು ಟ್ರ್ಯಾಕ್ಟರ್ ಮೂಲಕ ಕಬ್ಬು ಸಾಗಿಸಲಾಗುತ್ತಿತ್ತು. ಜಮಖಂಡಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

Related Articles

TRENDING ARTICLES