Monday, December 23, 2024

ಮೂವರು ಉಗ್ರರನ್ನ ಹೊಡೆದುರುಳಿಸಿದ ಭದ್ರತಾಪಡೆ

ಶ್ರೀನಗರ : ಜಮ್ಮು ಮತ್ತು ಕಾಶ್ಮೀರದ ಬಡ್ಗಾಮ್‌ ಜಿಲ್ಲೆಯ ಝೋಲ್ವಾ ಕ್ರಾಲ್ಪೋರಾ ಚದೂರ ಪ್ರದೇಶದಲ್ಲಿ ಶುಕ್ರವಾರ ಮುಂಜಾನೆ  ಭದ್ರತಾ ಪಡೆಗಳು ರಾತ್ರಿ ಇಡೀ ನಡೆಸಿದ ಕಾರ್ಯಾಚರಣೆಯಿಂದ ಜೈಶ್-ಎ-ಮೊಹಮ್ಮದ್​ನ ಮೂವರು ಭಯೋತ್ಪಾದಕರು ಹತರಾಗಿದ್ದಾರೆ ಎಂದು ಭದ್ರತಾ ಪಡೆ ಪೊಲೀಸರು ತಿಳಿಸಿದ್ದಾರೆ.

ಭದ್ರತಾ ಪಡೆಗಳೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ಉಗ್ರರು ಹತರಾಗಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ. ಮೃತ ಮೂವರೂ ಉಗ್ರರು ಭಯೋತ್ಪಾದಕ ಸಂಘಟನೆ ಜೆಇಎಂ ಜತೆಗೆ ಸಂಬಂಧ ಹೊಂದಿದ್ದರು. ಎನ್‌ಕೌಂಟರ್ ನಡೆದ ಸ್ಥಳದಲ್ಲಿ ಮೂರು ಎಕೆ–56 ಬಂದೂಕುಗಳು ಮತ್ತು ಇತರ ಶಸ್ತ್ರಾಸ್ತ್ರಗಳು ಪತ್ತೆಯಾಗಿರೋದಾಗಿ ಕಾಶ್ಮೀರದ ಪೊಲೀಸ್ ಮಹಾನಿರೀಕ್ಷಕ ವಿಜಯ್ ಕುಮಾರ್ ಹೇಳಿದ್ದಾರೆ.

ಮೃತ ಉಗ್ರರ ಪೈಕಿ ಒಬ್ಬ ಶ್ರೀನಗರದ ನಿವಾಸಿ ವಸೀಂ ಎಂದು ಗುರುತಿಸಲಾಗಿದ್ದು, ಉಳಿದ ಇಬ್ಬರ ಗುರುತು ಪತ್ತೆ ಮಾಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ. ಈ ಮೂಲಕ 2022 ರಲ್ಲಿ ಒಟ್ಟು 11 ಭಯೋತ್ಪಾಧಕರನ್ನು ಭದ್ರತಾಪಡೆ ಹೊಡೆದುರುಳಿಸಿದೆ.

RELATED ARTICLES

Related Articles

TRENDING ARTICLES