ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ವಾಂಡರರ್ಸ್ ಟೆಸ್ಟ್ ಕೊನೆಯ ಘಟ್ಟ ತಲುಪಿದೆ. ಇನ್ನು ಕೇವಲ ಕ್ಲೈಮ್ಯಾಕ್ಸ್ ಬಾಕಿ ಇದೆ. ದಕ್ಷಿಣ ಆಫ್ರಿಕಾ ಗೆಲ್ಲೋದಕ್ಕೆ 240 ರನ್‌ಗುರಿಯನ್ನ ಬೆನ್ನಟ್ಟಿದೆ. ಇನ್ನು 3ನೇ ದಿನದಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು 118 ರನ್‌ಗಳಿಸಿದೆ. ಗೆಲುವಿನ ಗುರಿ ತಲುಪಲು ಇನ್ನೂ 122 ರನ್ ಬೇಕಿದೆ. ಇನ್ನು ಮತ್ತೊಂದು ಕಡೆ ಟೀಂ ಇಂಡಿಯಾಗೆ 8 ವಿಕೆಟ್‌ಗಳ ಪಡೆದು ಗೆಲ್ಲುವ ಗುರಿಯಿದೆ. ಸದ್ಯದ ಸ್ಥಿತಿಗತಿಗಳ ಪ್ರಕಾರ ಆತಿಥೇಯದ,ಆಫ್ರಿಕಾ ತಂಡ ಮೇಲುಗೈ ಸಾಧಿಸಿದೆ. ಅತಿಥೇಯ ತಂಡ ಗೆಲ್ಲುವ ಹಂತದಲ್ಲಿದ್ದರೂ, 4ನೇ ದಿನವಾದ ಗುರುವಾರ ಆರಂಭದಲ್ಲೇ ಎಡವಿದರೇ ಪಂದ್ಯ ಭಾರತದ ಕಡೆಗೂ ವಾಲಬಹುದಾಗಿದೆ.
ಇನ್ನು, 2ನೇ ಇನ್ನಿಂಗ್ಸ್‌ನಲ್ಲಿ ಅಜಿಂಕ್ಯ ರಹಾನೆ ಹಾಗೂ ಚೇತೇಶ್ವರ್ ಪೂಜಾರ ಅವರ ಅರ್ಧಶತಕಗಳು, ಜೊತೆಗೆ ಶಾರ್ದೂಲ್ ಠಾಕೂರ್ ಹಾಗೂ ಹನುಮ ವಿಹಾರಿಯ ಆಕರ್ಷಕ ಬ್ಯಾಟಿಂಗ್ ಕೊಡುಗೆ ಭಾರತ 2ನೇ ಇನ್ನಿಂಗ್ಸ್‌ನಲ್ಲಿ 266 ರನ್‌ಕಲೆಹಾಕಿ ಆಲೌಟ್ ಆಯಿತು. ಇನ್ನು, ದ. ಆಫ್ರಿಕಾ ತಂಡ 2 ವಿಕೆಟ್ ಕಳೆದುಕೊಂಡು 118 ರನ್ ಕಲೆಹಾಕಿದೆ. ಕ್ರೀಸ್ ಕಚ್ಚಿ ನಿಂತಿರುವ ಎಲ್ಗರ್ 46 ರನ್‌ಗಳಿಸಿ 4ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. 11 ರನ್‌ಗಳಿಸಿರುವ ರಾಸಿ ವಾನ್‌ಡೆರ್ ಡುಸ್ಸೆನ್ ಸಹ ಔಟಾಗದೆ ಉಳಿದಿದ್ದಾರೆ. ಪಂದ್ಯ ಇವತ್ತು ಯಾರ ಕಡೆಗೆ ಒಲಿಯಲಿದೆ ಅನ್ನೋ ಕುತೂಹಲವನ್ನು ಮೂಡಿಸಿದೆ.
ಅರುಣ್ ಹೂಗಾರ್, ಪವರ್ ಟಿವಿ