Monday, December 23, 2024

ಶಾರ್ಟ್ ಸರ್ಕ್ಯೂಟ್​​ನಿಂದ ಅಂಗಡಿಗಳಿಗೆ ಬೆಂಕಿ

ವಿಜಯಪುರ : ತಡರಾತ್ರಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿಕೊಂಡು ನಾಲ್ಕು ಅಂಗಡಿಗಳು ಸುಟ್ಟು ಭಸ್ಮವಾಗಿರುವ ಘಟನೆ ವಿಜಯಪುರ ಜಿಲ್ಲೆಯ ತಿಕೋಟಾ ಪಟ್ಟಣದ ಬಸವೇಶ್ವರ ಸರ್ಕಲ್ ಬಳಿ ನಡೆದಿದೆ.

ಬೈಕ್ ರಿಪೇರಿ ಗ್ಯಾರೇಜ್, ಮೊಬೈಲ್ ಶಾಪ್, ಪಾನ್ ಶಾಪ್, ಕಟಿಂಗ್ ಶಾಪ್ ಈ ನಾಲ್ಕು ಅಂಗಡಿಗಳಿಕೆ ಬೆಂಕಿ ಹೊತ್ತಿಕೊಂಡು, ಅಂಗಡಿಗಳಲ್ಲಿದ್ದ ಮೂರ್ನಾಲ್ಕು ಬೈಕ್ ಗಳು, ಹಲವು ಮೊಬೈಲ್ ಗಳು, ಫರ್ನಿಚರ್​​ಗಳು ಬೆಂಕಿಗಾಹುತಿಯಾಗಿದೆ. ತಕ್ಷಣ ಬೆಂಕಿ ನಂದಿಸೋದರ ಮೂಲಕ ಅಗ್ನಿಶಾಮಕ ದಳದ ಸಿಬ್ಬಂದಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ. ಐದು ಲಕ್ಷಕ್ಕೂ ಅಧಿಕ ವಸ್ತುಗಳು ಸುಟ್ಟು ಭಸ್ಮವಾಗಿರುವ ಘಟನೆ ತಿಕೋಟಾ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

RELATED ARTICLES

Related Articles

TRENDING ARTICLES