ನಂಬಿದರೆ ನಂಬಿ ಬಿಟ್ಟರೆ ಬಿಡಿ! ಇಡೀ ಮನೆಯನ್ನೇ ಕೆಡವದೆ ನೆಲದಿಂದ ಮೇಲೆತ್ತಿರುವ ಈ ಸುದ್ದಿ ನಿಮ್ಮ ಕಿವಿಯನ್ನು ನೆಟ್ಟಗಾಗಿಸುವುದಂತೂ ನಿಜ.
ಪ್ರತಿಯೊಬ್ಬರಿಗೂ ತಮ್ಮದೊಂದು ಸ್ವಂತ ಸೂರು ಇರಬೇಕೆಂದು ಆಸೆ ಇದ್ದೆ ಇರುತ್ತೆ. ಸುಂದರವಾದ ಮನೆ ಇದ್ದರು ಕೆಲವು ಸಮಸ್ಯೆಗಳಿಂದ ಮನೆ ಕೆಡವಿ ಮತ್ತೆ ಬೇರೆ ಮನೆ ನಿರ್ಮಿಸಿಕೊಳ್ಳುತ್ತಾರೆ. ಆದರೆ ಇಲ್ಲೊಬ್ಬರು ಮನೆಯನ್ನ ಕೆಡವದೇ ತಂತ್ರಜ್ಞಾನ ಬಳಸಿ ನೆಲದಿಂದ ಆರು ಅಡಿಯಷ್ಟು ಮೇಲಕ್ಕೆತ್ತರಿಕೊಳ್ಳುತ್ತಿದ್ದಾರೆ. ಮನೆ ಮೇಲಕ್ಕೆತ್ತೋದಾ ಅಂತಾ ಆಶ್ಚರ್ಯಪಡಬೇಡಿ. ಇದು ನಿಜ.
ಮನೆಯ ತಳಪಾಯಕ್ಕೆ ಸಾಲು ಸಾಲಾಗಿ ಜೋಡಿಸಿರುವ ಜ್ಯಾಕ್ಗಳು. ಈಗಾಗಲೇ, ನೆಲದಿಂದ 4 ಅಡಿಯಷ್ಟು ಮೇಲಕ್ಕೆ ಎತ್ತಿರುವ ಸುಂದರ ಮನೆ. ಈ ಮನೆಯಲ್ಲಿ ವಾಸವಾಗಿರುವ ಕಾರ್ಮಿಕರು. ಹೌದು, ನೀವು ಓದುತ್ತಿರೋದು ನಿಜ. ನೆಲದಿಂದ ಸುಮಾರು 6 ಅಡಿಯಷ್ಟು ಎತ್ತರಕ್ಕೆ ಮನೆಯನ್ನೇ ಮೇಲಕ್ಕೆತ್ತಲು ಭರದಿಂದ ಸಾಗುತ್ತಿರುವ ಕೆಲಸ. ಇದು ಆಶ್ಚರ್ಯಕರವಾದರೂ ಸತ್ಯ. ಅಂದ ಹಾಗೇ ಇದು ಕಂಡುಬಂದಿದ್ದು ಶಿವಮೊಗ್ಗ ನಗರದ P ಅ್ಯಂಡ್ T ಬಡಾವಣೆಯಲ್ಲಿ.
ಮಂಜುನಾಥ್ ಎಂಬುವವರು ಕೆಲ ವರ್ಷಗಳ ಹಿಂದೆ ಬಹು ವರ್ಷಗಳ ಕನಸಿನಂತೆ ಮನೆ ಕಟ್ಟಿಕೊಂಡಿದ್ದರು. ಇವರ ಮನೆ ಮುಂದೆ ಇದ್ದ ರಸ್ತೆ ವರ್ಷದಿಂದ ವರ್ಷಕ್ಕೆ ಎತ್ತರಿಸುತ್ತ ಬರಲಾಯಿತು. ಪರಿಣಾಮ ಮಳೆ ಬಂದಾಗ ರಸ್ತೆ ಮೇಲೆ ಹರಿಯುವ ನೀರೆಲ್ಲ ಇವರ ಮನೆ ಒಳಗೆ ನುಗ್ಗಿ ಅವಾಂತರವೇ ಸೃಷ್ಠಿಯಾಗುತ್ತಿತ್ತು. ಇದರಿಂದ ಬೇಸತ್ತ ಮನೆ ಮಾಲೀಕ ತಮ್ಮ ಮನೆಯನ್ನ ಪಾಯ ಸಮೇತ ನೆಲದಿಂದ ಆರು ಅಡಿಯಷ್ಟು ಮೇಲಕ್ಕೇತ್ತರಿಸಲು ನಿರ್ಧರಿಸಿದ್ದಾರೆ.
ನೂರಿತ ಎಂಜಿನಿಯರ್ಗಳ ಸಮ್ಮುಖದಲ್ಲಿ ಜಾಕ್ಗಳನ್ನ ಬಳಸಿ ಈಗಾಗಲೇ 4 ಅಡಿಯಷ್ಟು ಮನೆಯನ್ನ ಮೇಲಕ್ಕೇತ್ತರಿಸಲಾಗಿದೆ. ಸುರಕ್ಷಿತವಾಗಿ ಮನೆಗೆ ಯಾವುದೇ ರೀತಿಯ ಡ್ಯಾಮೇಜ್ ಆಗದಂತೆ ಬಿಹಾರ ಮೂಲದ ತಂತ್ರಜ್ಞರು ಮನೆ ಮೇಲಕ್ಕೇತ್ತರಿಸುವ ಕಾರ್ಯ ಕೈಗೊಂಡಿದ್ದಾರೆ. ತಮ್ಮ ಪ್ರೀತಿಯ ಮನೆಗೆ ತಂತ್ರಜ್ಞಾನವನ್ನ ಬಳಸಿಕೊಂಡು, 6 ಅಡಿ ಮೇಲಕ್ಕೆತ್ತಿ ಉಳಿಸಿಕೊಳ್ಳುತ್ತಿದ್ದಾರೆ ಮಾಲೀಕರು. ಇದಕ್ಕಾಗಿ ಬಿಹಾರದ 9 ಎಂಜಿನಿಯರ್ಗಳು ಹಾಗೂ ಕಾರ್ಮಿಕರ ತಂಡ ಸುರಕ್ಷಿತವಾಗಿ ಮನೆ ಮೇಲಕ್ಕೇತ್ತುವ ಕೆಲಸದಲ್ಲಿ ತೊಡಗಿಕೊಂಡಿದ್ದು, ಮಂಜುನಾಥ್ ಅವರ ಮನೆಯನ್ನು ಸೇಫಾಗಿ ಲಿಫ್ಟ್ ಮಾಡುತ್ತಿದ್ದಾರೆ.
ಅಂದಹಾಗೆ, ಪ್ರತಿವರ್ಷವೂ ಮಳೆಗಾಲದಲ್ಲಿ ಮಂಜುನಾಥ್ ಅವರ ಮನೆಗೆ ನೀರು ನುಗ್ಗುತ್ತಿತ್ತು. ಸಮಸ್ಯೆಯಿಂದ ಹೊರಬರಲು ಹಲವು ದಿನಗಳ ಕಾಲ ಯೋಚಿಸಿ ಮನೆ ಲಿಫ್ಟ್ ಮಾಡುವ ಹರಿಯಾಣ ಮೂಲದ ಶ್ರೀರಾಮ್ ಸಂಸ್ಥೆಯನ್ನ ಸಂಪರ್ಕಿಸಿದ್ದಾರೆ. ಅವರ ಜೊತೆ ಚರ್ಚಿಸಿ, ಮನೆಯನ್ನ ತಜ್ಞರು ಸರ್ವೇ ಮಾಡಿದ ಬಳಿಕ ಮನೆಯನ್ನ ಅನಾಮತ್ತಾಗಿ 6 ಅಡಿ ಮೇಲಕ್ಕೇತ್ತರಿಸುತ್ತಿದ್ದಾರೆ. ಕಳೆದೊಂದು ತಿಂಗಳಿನಿಂದ ಈ ಕಾಮಗಾರಿ ನಡೆಸಲಾಗುತ್ತಿದ್ದು, ಮನೆ ಎಲ್ಲಿಯೂ ಕೂಡ ಬಿರುಕು ಬೀಳದಂತೆ ನೋಡಿಕೊಳ್ಳಲಾಗುತ್ತಿದೆ. ಕಿಟಕಿ, ಬಾಗಿಲು, ಪ್ರಮುಖ ಭಾಗಗಳಲ್ಲಿ ಸಿಮೆಂಟ್ ಇಟ್ಟಿಗೆ ಮತ್ತು ಜ್ಯಾಕ್ಗಳನ್ನು ಬಳಸಿ, ಇಡೀ ಮನೆಗೆ ಎಲ್ಲಿಯೂ ಹಾನಿಯಾಗದಂತೆ, ಮೇಲಕ್ಕೆತ್ತಲಾಗುತ್ತಿದೆ. ಈ ವಿಷಯ ತಿಳಿದ ಸುತ್ತಮುತ್ತಲಿನ ಊರಿನವರು ಆಶ್ಚರ್ಯ ಪಡುತ್ತಿದ್ದಾರೆ.
ನೆಕಲಒಟ್ಟಿನಲ್ಲಿ, ಇದೇ ಮೊದಲ ಬಾರಿಗೆ ಶಿವಮೊಗ್ಗದಲ್ಲಿ ಈ ರೀತಿಯ ಬೆಳವಣಿಗೆಯೊಂದು ನಡೆಯುತ್ತಿದ್ದು, ಹಲವಾರು ವರ್ಷಗಳ ಹಿಂದೆ ಕಟ್ಟಲಾಗಿರುವ ಮನೆಯೊಂದನ್ನು ಯಾವುದೇ ತೊಂದರೆಯಾಗದಂತೆ, ಮೇಲಕ್ಕೆತ್ತುತ್ತಿರುವುದು ವಿಶೇಷವಾಗಿದ್ದು, ಜನರಿಗೆ ಕುತೂಹಲಕಾರಿಯಾಗಿದೆ.
ಗೋ.ವ. ಮೋಹನಕೃಷ್ಣ, ಪವರ್ ಟಿವಿ, ಶಿವಮೊಗ್ಗ.