Saturday, January 18, 2025

2ನೇ ಟೇಸ್ಟ್; 4ನೇ ದಿನದಾಟದಲ್ಲಿ ಭಾರತಕ್ಕೆ ಮಳೆಯ ವರ

ಜೊಹಾನ್ಸ್​ಬರ್ಗ್​: ದಕ್ಷಿಣ ಆಫ್ರಿಕಾದ ಜೊಹಾನ್ಸ್​ಬರ್ಗ್​ನಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕ ನಡುವೆ ನಡೆದಿರುವ ಎರಡನೇ ಕ್ರಿಕೆಟ್ ಟೆಸ್ಟ್​ನಲ್ಲಿ ದಕ್ಷಿಣ ಆಫ್ರಿಕಾಗೆ ಗೆಲ್ಲುವ ಅವಕಾಶ ಹೆಚ್ಚಾಗಿದೆ. ಮೂರನೆ ದಿನದಾಟದಲ್ಲಿ ಭಾರತ ತನ್ನ ಎರಡನೇ ಇನ್ನಿಂಗ್ಸ್​ ಮುಕ್ತಾಯಗೊಳಿಸಿ ದಕ್ಷಿಣ ಆಫ್ರಿಕಾ ಗೆಲುವಿಗೆ 240 ರನ್ನುಗಳ ಟಾರ್ಗೇಟ್ ನೀಡಿತ್ತು. ಅದಕ್ಕೆ ಉತ್ತರವಾಗಿ ದಕ್ಷಿಣ ಆಫ್ರಿಕ 3ನೇ ದಿನದಾಟದ ಕೊನೆಯಲ್ಲಿ ಕೇವಲ 2 ವಿಕೆಟ್ ಕಳೆದುಕೊಂಡು ನೂರು ರನ್ನುಗಳನ್ನು ಗಳಿಸಿ ಗೆಲುವಿನತ್ತ ಮುಖ ಮಾಡಿತ್ತು.

ಇಂದು ನಾಲ್ಕನೆಯ ದಿನ ಭಾರತಕ್ಕೆ ಪಂದ್ಯವನ್ನು ಗೆಲ್ಲಲು ಕೇವಲ 140 ರನ್ನುಗಳಲ್ಲಿ ದಕ್ಷಿಣ ಆಫ್ರಿಕಾದ 8 ವಿಕೆಟ್​ಗಳನ್ನು ಔಟ್ ಮಾಡುವ ಅಸಾಧ್ಯ ಸವಾಲು ಎದುರಾಗಿತ್ತು. ಇಲ್ಲವೆ ದಕ್ಷಿಣ ಆಫ್ರಿಕಾವನ್ನು ಎರಡು ದಿನಗಳ ಕಾಲ 140 ರನ್ ಮಾಡದಿರುವಂತೆ ಕಟ್ಟಿ ಹಾಕಬೇಕಾಗಿತ್ತು. ಇವೆರಡೂ ಸಹ ಭಾರತದ ಪಾಲಿಗೆ ಅಸಾಧ್ಯ ಸವಾಲೆ ಆಗಿದ್ದವು. ಭಾರತ ಸೋಲಿನ್ನು ತಪ್ಪಿಸಿಕೊಳ್ಳಲು ಪವಾಡವೇ ನಡೆಯಬೇಕಾಗಿತ್ತು. ಹೌದು, ಇಂದು ನಾಲ್ಕನೆಯ ದಿನ ಜೊಹಾನ್ಸ್​ಬರ್ಗ್​ನಲ್ಲಿ ಅಂಥ ಪವಾಡ ನಡೆದಿದೆ. ಇಲ್ಲಿ ಮಳೆಯ ಕಾರಣ ನಾಲ್ಕನೆಯ ದಿನದಾಟ ಇನ್ನೂ ಶುರುವಾಗಿಲ್ಲ. ಭಾರತವೇನಾದರೂ ಈ ಸೋಲಿನಿಂದ ತಪ್ಪಿಸಿಕೊಂಡು ಪಂದ್ಯ ಡ್ರಾ ಆಗಬೇಕಾದರೆ ಮಳೆ ಇಂದು ಹಾಗೂ ನಾಳೆ ಸತತವಾಗಿ ಬರಬೇಕು. ಈ ಪವಾಡ ಮಾತ್ರ ಭಾರತವನ್ನು ಸೋಲಿನಿಂದ ತಪ್ಪಿಸಬಲ್ಲದು.

ಓಂಪ್ರಕಾಶ್ ನಾಯಕ್, ಪವರ್ ಟಿವಿ

 

RELATED ARTICLES

Related Articles

TRENDING ARTICLES