Monday, December 23, 2024

ಬಿಪಿನ್​​ ರಾವತ್ :​ ಸೇನಾ ಹೆಲಿಕಾಪ್ಟರ್ ಪತನದ ಸೀಕ್ರೆಟ್​ ಬಯಲು

ಬೆಂಗಳೂರು : ಸಶಸ್ತ್ರ ಸೇನಾಪಡೆಗಳ ಮೊದಲ ಮುಖ್ಯಸ್ಥ ಜನರಲ್​.ಬಿಪಿನ್‌ ರಾವತ್‌, ಅವರ ಪತ್ನಿ ಸೇರಿದಂತೆ 14 ಜನರ ಸಾವಿಗೆ ಕಾರಣವಾದ ಸೇನಾ ಹೆಲಿಕಾಪ್ಟರ್‌ ಅವಘಡಕ್ಕೆ ತಾಂತ್ರಿಕ ದೋಷ ಅಥವಾ ಒಳಸಂಚು ಕಾರಣವಲ್ಲ ಎಂದು ತಿಳಿದುಬಂದಿದೆ.

ಬದಲಿಗೆ ಕೆಟ್ಟ ವಾತಾವರಣವೇ ಈ ದುರ್ಘಟನೆಗೆ ಕಾರಣ ಎಂಬ ತೀರ್ಮಾನಕ್ಕೆ ತನಿಖಾ ತಂಡ ಬಂದಿದೆ. ಕೂನೂರು ಬಳಿ ನಡೆದ ಈ ಸೇನಾ ಹೆಲಿಕಾಪ್ಟರ್‌ ಅಪಘಾತದ ಕುರಿತು ರಚಿಸಲಾಗಿದ್ದ ಏರ್‌ ಮಾರ್ಷಲ್‌ ಮನ್ವೀಂದರ್​ ಸಿಂಗ್​ ನೇತೃತ್ವದ ತಂಡ, ತನಿಖೆ ಪೂರ್ಣಗೊಳಿಸಿದ್ದು, ಅದರ ವಿಸ್ತೃತ ಮಾಹಿತಿಯನ್ನು ಬುಧವಾರ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರಿಗೆ ನೀಡಿದೆ.

ಇದರಲ್ಲಿ ಜನರಲ್​​​ ರಾವತ್‌ ಸೇರಿದಂತೆ 13 ಸೇನಾ ಸಿಬ್ಬಂದಿ ಜತೆ ಸೂಳೂರಿನಿಂದ ಹೊರಟಿದ್ದ ರಷ್ಯಾ ನಿರ್ಮಿತ ಅವಳಿ ಇಂಜಿನ್‌ ಎಂ-17ವಿ5 ಹೆಲಿಕಾಪ್ಟರ್‌ ದುರಂತಕ್ಕೆ ಯಾವುದೇ ಒಳಸಂಚು ಅಥವಾ ತಾಂತ್ರಿಕ ದೋಷ ಕಾರಣವಿರಬಹುದು ಎಂಬ ಅಂಶಗಳನ್ನು ತನಿಖಾ ತಂಡ ನಿರಾಕರಿಸಿದೆ ಎಂದು ಮೂಲಗಳು ತಿಳಿಸಿವೆ.

RELATED ARTICLES

Related Articles

TRENDING ARTICLES