Thursday, January 23, 2025

ದಳಪತಿಗಳ ಮಸ್ತ್ ಮಸ್ತ್ ಡ್ಯಾನ್ಸ್!

ಕೆ.ಆರ್.ಪೇಟೆ: ಜನತಾದಳದ ಬೇರು ಎನಿಸಿಕೊಂಡ ಮಂಡ್ಯ ಜಿಲ್ಲೆಯಲ್ಲಿ ದಳದ ಕಾರ್ಯಕರ್ತರು ಮಾಡಿರುವ ಡ್ಯಾನ್ಸ್ ಈಗ ವೈರಲ್ ಆಗುವುದರ ಜೊತೆಗೆ ವಿವಾದಕ್ಕೂ ಸಹ ಗುರಿಯಾಗಿದೆ. ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆಯಲ್ಲಿ ನಡೆದಿರುವ ಈ ಘಟನೆಯ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.
ಕೆ.ಆರ್.ಪೇಟೆ ತಾಲೂಕಿನ ಜೆಡಿಎಸ್ ಮುಖಂಡರು ಈ ಸಾಮೂಹಿಕ ಡ್ಯಾನ್ಸ್ ಮಾಡಿದ್ದಾರೆ ಎನ್ನಲಾಗಿದೆ. ಇದರಲ್ಲಿ ಮಹಿಳೆಯರು ಸಹ ಭಾಗವಹಿಸಿರುವುದು ಎಲ್ಲರ ಹುಬ್ಬೇರಿಸುವಂತೆ ಮಾಡಿದೆ. ದಳದ ಮುಖಂಡರೊಬ್ಬರ ಮನೆಯಲ್ಲಿ ಈ ಡ್ಯಾನ್ಸ್ ಪಾರ್ಟಿ ನಡೆದಿದೆ ಎನ್ನಲಾಗಿದೆ. ಹೆಚ್.ಟಿ.ಮಂಜು ನೇತೃತ್ವದಲ್ಲಿ ಈ ಪಾರ್ಟಿ ನಡೆದಿದ್ದು, ಇವರು ಮುಂದಿನ ಕೆ.ಆರ್.ಪೇಟೆ MLA ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಒಟ್ಟಿನಲ್ಲಿ ದಳದ ಮುಖಂಡರ ಈ ನೃತ್ಯ ದಳಪತಿಗಳಿಗೆ ಮುಜುಗರವನ್ನುಂಟು ಮಾಡೋದರಲ್ಲಿ ಸಂಶಯವಿಲ್ಲ.

RELATED ARTICLES

Related Articles

TRENDING ARTICLES