Thursday, December 19, 2024

ಚಿರತೆ ಬದುಕಿಗೆ ‘ಮುಳ್ಳಾ’ದ ಹಂದಿ..!

ಚಾಮರಾಜನಗರ : ಮುಳ್ಳುಹಂದಿಯನ್ನ ಬೇಟೆಯಾಡಲು ಹೋಗಿ ಚಿರತೆ ಮರಿಯೊಂದು ಸಾವನ್ನಪ್ಪಿದ ಘಟನೆ ಚಾಮರಾಜನಗರ ಜಿಲ್ಲೆಯಲ್ಲಿರುವ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ನಡೆದಿದೆ.

ಮುಳ್ಳುಹಂದಿಯನ್ನು ಬೇಟೆಯಾಡಿ ಬಾಯಿಗೆಲ್ಲಾ ಮುಳ್ಳು ಚುಚ್ಚಿಸಿಕೊಂಡು ಚಿರತೆಮರಿ ಸಾವನ್ನಪ್ಪಿದೆ. ಗುಂಡ್ಲುಪೇಟೆ ಬಫರ್ ಜೋನ್ ವಲಯದ ಬೋಗಯ್ಯನಹುಂಡಿ ಗ್ರಾಮದ ಗುರುಸ್ವಾಮಪ್ಪ ಎಂಬವರಿಗೆ ಸೇರಿದ ಜಮೀನಿನಲ್ಲಿ 8 ತಿಂಗಳ ಚಿರತೆ ಮರಿಯ ಕಳೆಬರ ಪತ್ತೆಯಾಗಿತ್ತು. 20 ದಿನಗಳ ಹಿಂದೆ ಮೃತಪಟ್ಟಿರುವ ಶಂಕೆ ಇದ್ದು, ಮೃತ ಚಿರತೆಯ ಎಲ್ಲಾ ಉಗುರುಗಳು, ಹಲ್ಲುಗಳು ಹಾಗೂ ಇತರ ಅಂಗಾಂಗಳು ಸುರಕ್ಷಿತವಾಗಿವೆ.

ಸಂಭವ ಸ್ಥಳಕ್ಕೆ ಬಂಡೀಪುರ ಅರಣ್ಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆಯನ್ನ ನಡೆಸಿದ್ದಾರೆ. ಚಿರತೆಯು ಮೃತಪಟ್ಟಿದ್ದ ಸ್ಥಳದ ಪಕ್ಕದಲ್ಲಿ ಮುಳ್ಳಂದಿಯ ಮುಳ್ಳುಗಳು ಹಾಗೂ ಇತರೆ ಭಾಗಗಳು ಪತ್ತೆಯಾಗಿವೆ. ಶವಪರೀಕ್ಷೆ ವೇಳೆ ಹೊಟ್ಟೆಯೊಳಗೆ ಹಾಗೂ ಬಾಯಿಯ ಭಾಗಗಳಲ್ಲೂ ಮುಳ್ಳುಗಳಿರುವುದನ್ನ ಪತ್ತೆಹಚ್ಚಲಾಗಿದೆ.

RELATED ARTICLES

Related Articles

TRENDING ARTICLES