ಮಹಿಳೆಯರ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಗೆ ಆಯ್ಕೆಯಾಗಿರುವ ತಂಡದಲ್ಲಿ ಕರ್ನಾಟಕದ ವನಿತೆ ಸ್ಥಾನ ಗಿಟ್ಟಿಸಿದ್ದಾಳೆ. ಹೌದು, ಅನುಭವಿ ಸ್ಪಿನ್ನರ್ ಆಗಿರುವ ರಾಜೇಶ್ವರಿ ಗಾಯಕವಾಡ್ ಭಾರತ ತಂಡದಲ್ಲಿ ಸ್ಥಾನ ಗಿಟ್ಟಿಸಿದ ಕರ್ನಾಟಕದ ಮಹಿಳೆ. ತಂಡದ ಕ್ಯಾಪ್ಟನ್ ಮಿಥಾಲಿ ರಾಜ್ ಆಗಿದ್ದು, ಹರ್ಮನ್ ಪ್ರಿತ್ಕೌರ್ ವೈಸ್ಕ್ಯಾಪ್ಟನ್ ಆಗಿದ್ದಾರೆ. ಮುಂದಿನ ತಿಂಗಳು ನ್ಯೂಜಿಲೆಂಡ್ನಲ್ಲಿ ನಡೆಯುವ ಏಕದಿನ ಸರಣಿ ಪಂದ್ಯಗಳಿಗೂ ಇದೇ ತಂಡ ಇರಲಿದೆ. ಮಾರ್ಚ್ 4 ರಿಂದ 13ರವರೆಗೆ ಈ ವಿಶ್ವಕಪ್ ಟೂರ್ನಿ ನ್ಯೂಜೆಲೆಂಡ್ನಲ್ಲಿ ನಡೆಯಲಿದೆ.
15 ಜನರ ತಂಡದಲ್ಲಿ ಅಗ್ರ ಬ್ಯಾಟ್ಸ್ಮನ್ ಆಗಿದ್ದ ಜೆಮಿಯಾ ರಾಡ್ರಿಗಸ್ ಹಾಗೂ ಫಾಸ್ಟ್ ಬೌಲರ್ ಶಿಖಾ ಪಾಂಡೆಯವರನ್ನು ಕೈಬಿಡಲಾಗಿದೆ. ಎಡಗೈ ಬ್ಯಾಟ್ಸ್ಮನ್ ಯಾಷ್ಟಿಕಾ ಭಾಟಿಯಾ ಅವರನ್ನು ತಂಡಕ್ಕೆ ಸೇರ್ಪಡೆಗೊಳಿಸಿಕೊಳ್ಳಲಾಗಿದೆ. ವೇಗದ ಬೌಲರ್ಗಳಾದ ಮೇಘನಾ ಸಿಂಗ್ ಹಾಗೂ ರೇಣುಕಾಸಿಂಗ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.