Thursday, January 23, 2025

ಐಸಿಸಿ ಮಹಿಳಾ ವಿಶ್ವಕಪ್ 2022 : ಮಿಥಾಲಿ ರಾಜ್ ಭಾರತ ತಂಡದ ನಾಯಕಿ

ಐಸಿಸಿ ಮಹಿಳಾ ಏಕದಿನ ವಿಶ್ವಕಪ್ 2022ಕ್ಕೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಗುರುವಾರ ಭಾರತ ಮಹಿಳಾ ತಂಡದ 15 ಆಟಗಾರರ ಹೆಸರನ್ನು ಪ್ರಕಟ ಮಾಡಿದೆ.

ಬಿಸಿಸಿಐಯಿಂದ ಕೆಲ ಅಚ್ಚರಿ ಆಯ್ಕೆ ನಡೆದಿದ್ದು, ಮಿಥಾಲಿ ರಾಜ್ ನಾಯಕಿಯಾಗಿದ್ದಾರೆ. ಹರ್ಮನ್ ಪ್ರೀತ್ ಕೌರ್ ಉಪ ನಾಯಕಿಯಾದರೆ, ಸ್ಟಾರ್ ಬ್ಯಾಟರ್ ಜಮಿಯಾ ರೊಡ್ರಿಗಸ್ ಮತ್ತು ಸ್ಟಾರ್ ಬೌಲರ್ ಶಿಖಾ ಪಾಂಡೆ ಅವರನ್ನು ಕೈಬಿಟ್ಟಿದ್ದು ಅಚ್ಚರಿ ಮೂಡಿಸಿದೆ.

ಕನ್ನಡತಿ ರಾಜೇಶ್ವರಿ ಗಾಯಕ್ವಾಡ್​ಗೆ ಸ್ಥಾನ ನೀಡಲಾಗಿದೆ. ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಇದೇ ಮಾರ್ಚ್​ 4 ರಿಂದ ಆರಂಭವಾಗಲಿದ್ದು ಏಪ್ರಿಲ್ 3 ರ ವರೆಗೆ ನ್ಯೂಜಿಲೆಂಡ್​ನಲ್ಲಿ ನಡೆಯಲಿದೆ.

RELATED ARTICLES

Related Articles

TRENDING ARTICLES