Wednesday, January 22, 2025

ಸ್ಯಾಂಡಲ್​ವುಡ್​ಗೆ ‘ಗಂಡುಲಿ’ ಅಟ್ಯಾಕ್!

ಸ್ಯಾಂಡಲ್​ವುಡ್ ಅಂಗಳದಲ್ಲಿ ರಾಜಾಹುಲಿ, ಹೆಬ್ಬುಲಿ, ಪಡ್ಡೆಹುಲಿ ಆಯ್ತು. ಈಗ ಗಂಡುಲಿ ಸದ್ದು ಮಾಡೋಕೆ ಸಜ್ಜಾಗಿದೆ. ಯೆಸ್.. ಗಂಡುಲಿ ಅನ್ನೋ ಟೈಟಲ್​ನಲ್ಲಿ ಸಿನಿಮಾವೊಂದು ಮೂಡಿಬರ್ತಿದೆ. ಇದೊಂದು ಆ್ಯಕ್ಷನ್ ಥ್ರಿಲ್ಲರ್ ಚಿತ್ರವಾಗಿದ್ದು, ವಿನಯ್ ರತ್ನಸಿದ್ಧಿ ನಾಯಕರಾಗಿ ನಟಿಸೋದ್ರ ಜೊತೆಗೆ ಅವ್ರೇ  ಡೈರೆಕ್ಟ್ ಕೂಡ ಮಾಡಿದ್ದಾರೆ.

ಈ ಚಿತ್ರದಲ್ಲಿ ನಟಿ ಛಾಯಾ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ. ಹಿರಿಯ ನಟಿ ಸುಧಾ ನರಸಿಂಹರಾಜು ನಾಯಕನ ತಾಯಿ ಪಾತ್ರದಲ್ಲಿ ನಟಿಸಿದ್ದಾರೆ. ಜೊತೆಗೆ ಧರ್ಮೇಂದ್ರ ಅರಸ್, ರಾಮಣ್ಣ, ಸುಬ್ಬೇ ಗೌಡ್ರು ಹೀಗೆ ಕಲಾವಿದರ ದಂಡಿದೆ. ಸ್ಯಾಂಪಲ್ಸ್​ನಿಂದ ಗಮನ ಸೆಳೆದಿದ್ದ ಟೀಂ, ಆಡಿಯೋ ಲಾಂಚ್ ಮಾಡಿ ಸುದ್ದಿಯಾಗಿದೆ. ನಟಭಯಂಕರ ಪ್ರಥಮ್ ಗಂಡುಲಿ ಆಡಿಯೋ ಲಾಂಚ್ ಮಾಡಿ, ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ರವಿದೇವ್ ಸಂಗೀತದ ಈ ಚಿತ್ರ  ವಿಆರ್ ಫಿಲ್ಮ್ಸ್​ ಬ್ಯಾನರ್​ನಲ್ಲಿ ಮೂಡಿಬಂದಿದೆ.

RELATED ARTICLES

Related Articles

TRENDING ARTICLES