Friday, December 20, 2024

ನಿವೃತ್ತ ಯೋಧನಿಗೆ ಆತ್ಮೀಯ ಸ್ವಾಗತ

ಗದಗ: 17 ವರ್ಷಗಳ ಕಾಲ ಭಾರತದ ಭದ್ರತಾ ಪಡೆಯಲ್ಲಿ ಸೈನಿಕರಾಗಿ ದೇಶಸೇವೆ‌‌ ಸಲ್ಲಿಸಿ‌‌ ಸ್ವಯಂ ನಿವೃತ್ತಿ ಪಡೆದು ಬಂದ ಗದಗನ ಯೋಧರೊಬ್ಬರನ್ನ ಕುಟುಂಬದ ಸದಸ್ಯರು ಆತ್ಮೀಯವಾಗಿ ಸ್ವಾಗತಿಸಿಕೊಂಡರು. ದೇಶದ ಭದ್ರತಾ ಪಡೆಯಲ್ಲಿ ಏರ್ ಡಿಫೆನ್ಸ್ ಆಗಿ ಸೇವೆ ಸಲ್ಲಿಸಿದ್ದ ರಾಬರ್ಟ ಹಳ್ಳಿ ಇವರನ್ನ ಕುಟುಂಬಸ್ಥರು ಗದಗನ ರೈಲ್ವೆ ನಿಲ್ದಾಣದಲ್ಲಿ ಯೋಧನ ಪತ್ನಿ, ಹಾಗೂ ಮಕ್ಕಳು ಕುಟುಂಬ‌ ಸಮೇತ ಬರಮಾಡಿಕೊಂಡರು.

ಈ ವೇಳೆ ಯೋಧನ ಪುಟ್ಟ ಮಕ್ಕಳು ವೆಲ್ ಕಮ್ ಟು‌ ಪಪ್ಪಾ ಅನ್ನೋ ಚಿತ್ರಪಟ ಹಿಡಿದುಕೊಂಡು ತಂದೆಯನ್ನು ಸ್ವಾಗತಿಸಿದ ದೃಶ್ಯ ತಂದೆ ಮಕ್ಕಳ ಪ್ರೀತಿಗೆ ಸಾಕ್ಷಿಯಾಗಿತ್ತು. 2004 ರಲ್ಲಿ ಸೇನೆಗೆ ಸೇರಿದ್ದ ರಾಬರ್ಟ್​ ಅವರು, ನಾಸಿಕ್, ಪಂಜಾಬ್, ಜಮ್ಮು ಕಾಶ್ಮೀರ, ರಾಜಸ್ಥಾನ, ಅಸ್ಸಾಮ್, ದೆಹಲಿ ಹೀಗೆ ಹಲವಾರು ಕಡೆ ಸೇವೆ ಸಲ್ಲಿಸಿ ಇದೀಗ ನಿವೃತ್ತಿ‌ ಪಡೆದು ತಮ್ಮ ತವರೂರಿಗೆ ಮರಳಿರುವದು ಕುಟುಂಬ ಸದಸ್ಯರಲ್ಲಿ ಹಾಗೂ ಸ್ನೇಹಿತರಲ್ಲಿ ಅಪಾರ ಸಂತೋಷ ಮೂಡಿಸಿದೆ.

RELATED ARTICLES

Related Articles

TRENDING ARTICLES