ಚೀನ: ಚೀನಾ ದೇಶದಲ್ಲಿ ವಿಯೆಟ್ನಾಂನಿಂದ ಆಮದಾಗುವ ಹಣ್ಣುಗಳಲ್ಲಿ ಕೊರೊನಾವೈರಸ್ ಕುರುಹುಗಳು ಪತ್ತೆಯಾದ ನಂತರ ಚೀನಾದ ಅಧಿಕಾರಿಗಳು ಹಲವಾರು ಸೂಪರ್ ಮಾರ್ಕೆಟ್ ಗಳನ್ನು ಲಾಕ್ ಮಾಡಲಾಗಿದೆ. ಝೆಜಿಯಾಂಗ್ ಮತ್ತು ಜಿಯಾಂಗ್ಕ್ಸಿಪ್ರಾಂತ್ಯಗಳ ಕನಿಷ್ಠ ಒಂಬತ್ತು ನಗರಗಳು ವಿಯೆಟ್ನಾಂನಿಂದ ಆಮದು ಮಾಡಿಕೊಂಡ ಡ್ರ್ಯಾಗನ್ ಹಣ್ಣಿನಲ್ಲಿ ಕೊರೊನಾ ವೈರಸ್ ಮಾದರಿ ಪತ್ತೆಯಾಗಿದೆ ಎನ್ನಲಾಗ್ತಿದೆ. ಡ್ರ್ಯಾಗನ್ ಹಣ್ಣಿನಲ್ಲಿ ಕೊರೋನಾ ವೈರಸ್ ಪತ್ತೆಯ ಹಿನ್ನಲೆಯಲ್ಲಿ, ಅಧಿಕಾರಿಗಳು ಆಮದು ಮಾಡಿದ ಆಹಾರ ಉತ್ಪನ್ನಗಳ ತುರ್ತು ತಪಾಸಣೆಯನ್ನು ಪ್ರಾರಂಭಿಸಿದ್ದಾರೆ. ಆಹಾರದಿಂದ ಕೊರೊನಾ ವೈರಸ್ ಹರಡಿರುವ ಬಗ್ಗೆ ಯಾವುದೇ ಪುರಾವೆಗಳಿಲ್ಲದಿದ್ದರೂ ಹಣ್ಣು ಖರೀದಿದಾರರನ್ನು ಸ್ವಯಂ ಕ್ವಾರಂಟೈನ್ ಮಾಡಲು ಸೂಚಿಸಿದ್ದಾರೆ.
ಡಿಸೆಂಬರ್ ಕೊನೆಯ ವಾರದಲ್ಲಿ ಕೋವಿಡ್-19 ಕುರುಹುಗಳು ಪತ್ತೆಯಾಗುತ್ತಿದ್ದಂತೆ ಚೀನಾ ಈ ಹಿಂದೆ ವಿಯೆಟ್ನಾಂನಿಂದ ಆಮದು ಮಾಡಿಕೊಂಡ ಡ್ರ್ಯಾಗನ್ ಹಣ್ಣಿನ ಮೇಲೆ ಜನವರಿ ೨೬ ರವರೆಗೆ ನಿಷೇಧ ಹೇರಿತ್ತು. ಚೀನಾಕ್ಕೆ ಡ್ರ್ಯಾಗನ್ ಹಣ್ಣುಗಳನ್ನು ಕಳುಹಿಸುವ ಲ್ಯಾಂಗ್ ಸನ್ ಪ್ರಾಂತ್ಯದ ಹುಯು ನ್ಘಿ ಬಾರ್ಡರ್ ಗೇಟ್ ಮೇಲೆ ನಿಷೇಧವನ್ನು ಹೇರಲಾಯಿತು. ಕಂಟೇನರ್ ಟ್ರಕ್ ಗಳನ್ನು ಮರಳಿ ಕಳುಹಿಸಿದ್ದರಿಂದ ಅಧಿಕಾರಿಗಳು ತಾನ್ ಥಾನ್ ಎಂಬ ಮತ್ತೊಂದು ಗಡಿ ಗೇಟ್ ನಿಂದ ಡ್ರ್ಯಾಗನ್ ಹಣ್ಣನ್ನು ಆಮದು ಮಾಡುವುದನ್ನು ನಿಷೇಧಿಸಿದ್ದಾರೆ. ಕೋವಿಡ್-19 ಪ್ರಕರಣಗಳ ಹೆಚ್ಚಳದ ನಡುವೆ ಚೀನಾ ವು ಕ್ಸಿಯಾನ್ ನಗರದೊಂದಿಗೆ ಕೊರೊನಾ ವೈರಸ್ ಅಲೆಯೊಂದಿಗೆ ಲಾಕ್ ಡೌನ್ ನಲ್ಲಿ ಹೋರಾಡುತ್ತಿದೆ. ಮೂರು ಕೋವಿಡ್-19 ಪ್ರಕರಣಗಳು ಪತ್ತೆಯಾದ ನಂತರ ಹೆನಾನ್ ಪ್ರಾಂತ್ಯದ ಯುಝೌ ನಗರವು ಲಾಕ್ ಡೌನ್ ಗೆ ಒಳಗಾದ ಕೊನೆಯ ನಗರವಾಗಿದೆ.