Friday, November 1, 2024

ಇಂದು ಸಿಎಂ ನೇತೃತ್ವದಲ್ಲಿ ಕ್ಯಾಬಿನೆಟ್ ಸಭೆ : ಕೋವಿಡ್ ತಡೆಗೆ ಮಹತ್ವದ ನಿರ್ಧಾರ..?

ಬೆಂಗಳೂರು : ರಾಜ್ಯದಲ್ಲಿ ಕೊರೋನಾ ಕಂಟ್ರೋಲ್​​ಗೆ ಈಗಾಗ್ಲೆ ಸರ್ಕಾರ ಟಫ್ ರೂಲ್ಸ್ ಜಾರಿ ಮಾಡಿ ಆದೇಶಿಸಿದೆ. ದಿನ ದಿನಕ್ಕೂ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗ್ತಿರೋದ್ರಿಂದ ಸರ್ಕಾರ ಮತ್ತಷ್ಟು ಕಠಿಣಾತಿ ಕಠಿಣ ರೂಲ್ಸ್ ಜಾರಿ ಬಗ್ಗೆ ಚಿಂತನೆ ನಡೆಸಿದ್ದು ಈ ಬಗ್ಗೆ ಇಂದು ಸಿಎಂ ನೇತೃತ್ವದಲ್ಲಿ ಮಹತ್ವದ ಸಚಿವ ಸಂಪುಟ ಸಭೆ ನಡೆಯಲಿದೆ. ಮಧ್ಯಾಹ್ನ12 ಗಂಟೆಗೆ ನಡೆಯಲಿರೋ ಸಚಿವ ಸಂಪುಟ ಸಭೆಯಲ್ಲಿ ಮೂರನೇ ಅಲೆಯಿಂದ ಪಾರಾಗುವ ಬಗ್ಗೆ ಮಹತ್ವದ ಚರ್ಚೆ ಮಾಡಲಾಗುತ್ತದೆ.

ಜಿಲ್ಲೆಗಳಲ್ಲಿ ಸೋಂಕು ಹರಡದಂತೆ ಕ್ರಮ ಕೈಗೊಳ್ಳಲು ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಮತ್ತು ಉಸ್ತುವಾರಿಗಳಿಗೆ ಸೂಚನೆ ನೀಡುಲಿದ್ದು ಗಡಿ ಜಿಲ್ಲೆಗಳ ಉಸ್ತುವಾರಿ ಸಚಿವರಿಗೆ ಹೆಚ್ಚು ಜವಾಬ್ದಾರಿ ನೀಡೋ ಸಾಧ್ಯತೆ ಇದೆ.

ಇನ್ನು ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂ ಬಗ್ಗೆ ಇಂದಿನ ಕ್ಯಾಬಿನೆಟ್ ಸಭೆಯಲ್ಲಿ ಸಚಿವರ ಅಭಿಪ್ರಾಯ ಸಂಗ್ರಹ ಮಾಡೋ ಮೂಲಕ ಸೋಂಕು ಮತ್ತಷ್ಟು ಉಲ್ಬಣಗೊಂಡ್ರೆ ಏನೆಲ್ಲಾ ಕ್ರಮ ಕೈಗೊಳ್ಳಬೇಕು ಅನ್ನೋದ್ರ ಬಗ್ಗೆಯೂ ಸಚಿವರಿಂದ ಅಭಿಪ್ರಾಯ ಕಲೆಹಾಕಲಾಗುತ್ತದೆ. ಪ್ರಮುಖವಾಗಿ ಈ ಸಭೆಯಲ್ಲಿ ಸಚಿವರು ಕಾಂಗ್ರೆಸ್ ಪಾದಯಾತ್ರೆ ಬಗ್ಗೆಯೂ ಚರ್ಚೆ ಮಾಡಲಿದ್ದಾರೆ ಪಾದಯಾತ್ರೆಗೆ ಹೆಚ್ಚು ಜನ ಸೇರಿದ್ರೆ, ಏನಾದ್ರೂ ಕ್ರಮ ಕೈಗೊಳ್ಳಬೇಕು ಅನ್ನೋದ್ರ ಬಗ್ಗೆಯೂ ಇಂದೇ ನಿರ್ಧಾರವಾಗುತ್ತದೆ.

RELATED ARTICLES

Related Articles

TRENDING ARTICLES