Sunday, January 19, 2025

ಶಬರಿಮಲೆಗೆ ಭೇಟಿ ನೀಡಿದ ಮೊದಲ ಮಹಿಳೆ ಬಿಂದು ಅಮ್ಮಿಣಿ ಮೇಲೆ ಹಲ್ಲೆ

2019ರಲ್ಲಿ ಶಬರಿಮಲೆ ಪ್ರವೇಶಿಸಿ ಪ್ರಾರ್ಥನೆ ಸಲ್ಲಿಸಿದ 10 ರಿಂದ 50 ವಯೋಮಾನದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಬಿಂದು ಅಮ್ಮಿಣಿ ಮೇಲೆ ಕೋಝಿಕ್ಕೋಡ್ ಬೀಚ್‌ನಲ್ಲಿ ಅಪರಿಚಿತ ವ್ಯಕ್ತಿಯೊಬ್ಬರು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ನ್ಯಾಯಾಲಯದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಝಿಕ್ಕೋಡ್ ಉತ್ತರ ಬೀಚ್‌ಗೆ ಆಗಮಿಸಿದ್ದಾಗ ಅಪರಿಚಿತ ವ್ಯಕ್ತಿಗಳು ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಕಾರ್ಯಕರ್ತೆ ಹೇಳಿದ್ದಾರೆ. ದಾಳಿಯ ದೃಶ್ಯಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಇದರಲ್ಲಿ ಅಮ್ಮಿಣಿ ಮೇಲೆ ವ್ಯಕ್ತಿ ಹಲ್ಲೆ ಮಾಡಿರುವುದನ್ನು ಕಾಣಬಹುದಾಗಿದೆ. ಘಟನೆಗೆ ಸಂಬಂಧಿಸಿದಂತೆ ವೆಲ್ಲಾಯಿಲ್ ಪೊಲೀಸರು ಐಪಿಸಿ ಸೆಕ್ಷನ್ 509 ಮತ್ತು 323 ಅಡಿಯಲ್ಲಿ ದೂರು ದಾಖಲಿಸಿದ್ದಾರೆ.

ಈ ಘಟನೆಯ ಸ್ವಲ್ಪ ಮೊದಲು, ಕೆಲವು ವ್ಯಕ್ತಿಗಳು ಶಬರಿಮಲೆಗೆ ಭೇಟಿ ನೀಡಿದ ಬಿಂದು ಅಮ್ಮಿಣಿಯೇ ನೀವು ಎಂದು ಕೇಳಿದ್ದಾರೆ, ನಂತರ ಆಕೆಯನ್ನ ಗೇಲಿ ಮಾಡಿದರು ಎಂದು ಅಮ್ಮಿಣಿ ಹೇಳಿಕೆ ನೀಡಿದ್ದಾರೆ.

RELATED ARTICLES

Related Articles

TRENDING ARTICLES