Thursday, December 19, 2024

‘ಹರೀಶ ವಯಸ್ಸು 36’ ಚಿತ್ರದಲ್ಲಿ ಅಪ್ಪು ಕೊನೆಯ ಹಾಡು

ಬೆಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಬಹುತೇಕ ಹೊಸ ಪ್ರತಿಭೆಗಳೇ ಸೇರಿ ನಿರ್ಮಿಸಿರುವ ಚಿತ್ರ ‘ಹರೀಶ ವಯಸ್ಸು 36’. ಈ ಸಿನಿಮಾಗೆ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಟೈಟಲ್ ಸಾಂಗ್ ಒಂದನ್ನು ಹಾಡಿದ್ದರು.

ಸ್ಯಾಂಡಲ್‌ವುಡ್‌ನಲ್ಲಿ ಸಂಗೀತ ನಿರ್ದೇಶಕನಾಗಿ ಗುರುತಿಸಿಕೊಂಡಿರುವ ಗುರುರಾಜ್ ಜ್ಯೇಷ್ಠ ‘ಹರೀಶ ವಯಸ್ಸು 36’ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದಿದ್ದಾರೆ. ಇದರೊಂದಿಗೆ ಇದೇ ಮೊದಲ ಬಾರಿಗೆ ನಿರ್ದೇಶನ ಮಾಡಿದ್ದಾರೆ. ಹಾಸ್ಯ ಪ್ರಧಾನ ಕಥೆ ಹೊಂದಿರುವ ಈ ಚಿತ್ರದ ಹೈಲೈಟ್ ಅಂದರೆ, ಈ ಚಿತ್ರದಲ್ಲಿ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರು ಟೈಟಲ್‌ಸಾಂಗ್‌ನ್ನು ಹಾಡಿದ್ದಾರೆ. ಅಪ್ಪು ಹಾಡಿದ ಈ ಶೀರ್ಷಿಕೆ ಹಾಡನ್ನು ಚಿತ್ರತಂಡ ಪತ್ರಿಕಾಗೋಷ್ಟಿ ನಡೆಸಿ ಪ್ರದರ್ಶನ ಮಾಡಿದೆ. ವಿಶೇಷ ಅಂದರೆ, ಇದು ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಹಾಡಿದ ಕೊನೆಯ ಹಾಡು.

 ಈ ಚಿತ್ರದಲ್ಲಿ ಹರೀಶನಿಗೆ ನಾಯಕಿಯಾಗಿ ರಂಗಭೂಮಿ ಕಲಾವಿದೆ ಶ್ವೇತಾ ಅರೆಹೊಳೆ ನಟಿಸಿದ್ದಾರೆ. ಇವರ ಜೊತೆ ರೋಹಿಣಿ ಜಗರಾಮ್, ಪ್ರಶಾಶ್ ತೂಮಿನಾಡು, ರಕ್ಷಣ್ ಮಡೂರ್, ಶೋಭಾ ಶೆಟ್ಟಿ, ಮಂಜುಳ ಜನಾರ್ದನ್ ಹೀಗೆ ಸಾಕಷ್ಟು ತಾರಾ ಬಳಗ ಈ ಚಿತ್ರದಲ್ಲಿದೆ. ದಕ್ಷಿಣ ಕನ್ನಡ ಜಿಲ್ಲೆಯ ಗುರುವಾಯನಕೆರೆ ಹಾಗೂ ಮಂಗಳೂರಿನ ಸುಂದರ ತಾಣಗಳಲ್ಲಿ ಹರೀಶ ವಯಸ್ಸು 36 ಸಿನಿಮಾ ಚಿತ್ರೀಕರಣ ಮಾಡಲಾಗಿದೆ.

RELATED ARTICLES

Related Articles

TRENDING ARTICLES