Sunday, January 19, 2025

2ನೇ ಟೆಸ್ಟ್: ಭಾರತಕ್ಕೆ ಸೋಲು

ಜೊಹಾನ್ಸ್​ಬರ್ಗ್​: ಭಾರತ ಮತ್ತು ದಕ್ಷಿಣ ಆಫ್ರಿಕಾ ಮಧ್ಯೆ ನಡೆದ 2ನೇ ಟೆಸ್ಟ್ ಪಂದ್ಯದಲ್ಲಿ ಭಾರತ 4ನೆಯ ದಿನವೆ ಸೋಲನ್ನೊಪ್ಪಿಕೊಂಡಿತು. ಭಾರತ ತನ್ನ ಎರಡನೇ ಇನ್ನಿಂಗ್ಸ್​ನಲ್ಲಿ ಒಡ್ಡಿದ್ದ 240 ರನ್ನುಗಳ ಸವಾಲನ್ನು 3 ರನ್ನುಗಳನ್ನು ಕಳೆದುಕೊಂಡು ಮಾಡಿದ ದಕ್ಷಿಣ ಆಫ್ರಿಕ 7 ವಿಕೆಟ್​ಗಳ ಸುಲಭ ಜಯವನ್ನು ಗಳಿಸಿತು. ದಕ್ಷಿಣ ಆಫ್ರಿಕಾದ ಈ ಗೆಲುವಿನಿಂದ 3 ಟೆಸ್ಟ್ ಪಂದ್ಯಗಳ ಈ ಸರಣಿಯಲ್ಲಿ ಎರಡೂ ದೇಶಗಳು ಈಗ ಒಂದೊಂದು ಪಂದ್ಯಗಳನ್ನು ಗೆದ್ದು ಸಮಬಲ ಸಾಧಿಸಿವೆ. ಜನವರಿ 11ರಂದು 3ನೆಯ ಟೆಸ್ಟ್ ಪಂದ್ಯ ಕೇಪ್​ಟೌನ್​ನಲ್ಲಿ ನಡೆಯಲಿದೆ.

ದಕ್ಷಿಣ ಆಫ್ರಿಕ ಪರ ಡೀನ್ ಎಲ್ಗರ್ 96 ರನ್ನುಗಳನ್ನು ಹೊಡೆದು ತಂಡಕ್ಕೆ ಆಪದ್ಬಾಂಧವರಾಗಿ ನಿಲ್ಲುವುದರ ಜೊತೆಗೆ ಅಜೇಯರಾಗಿ ಉಳಿದರು. ರಸಿ ವನ್ ಡೆನ್ ಹುಸೆನ್ 40 ರನ್ನುಗಳನ್ನು ಗಳಿಸಿ ಅಜೇಯರಾಗಿ ಉಳಿದರು.

RELATED ARTICLES

Related Articles

TRENDING ARTICLES