Monday, December 23, 2024

ಪಿಸ್ತಾ ಸೇವನೆಯಿಂದ ದೇಹಕ್ಕೆ ಆಗುವ ಹಲವು ಲಾಭಗಳು

ಚಳಿಗಾಲದಲ್ಲಿ ಪಿಸ್ತಾ ತಿನ್ನುವುದರಿಂದ ಬಹಳ ಉಪಯೋಗವಾಗುತ್ತದೆ ಎಂದು ವೈದ್ಯರು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. ಅಲ್ಲದೇ ಪಿಸ್ತಾವನ್ನು ದಿನನಿತ್ಯ ಸೇವಿಸುವುದರಿಂದ ದೇಹಕ್ಕೆ ಉಂಟಾಗುವ ಹಲವು ಕಾಯಿಲೆಗಳನ್ನು ತಡೆಗಟ್ಟಬಹುದು. ಪಿಸ್ತಾದಲ್ಲಿ ಹಲವು ಅಂಶಗಳನ್ನು ಒಳಗೊಂಡಿದೆ. ಉದಾಹರಣೆಗೆ ಸ್ಯಾಚುರೇಟೆಡ್ ಕೊಬ್ಬಿನಾಮ್ಲಗಳು, ಬಹು ಅಪರ್ಯಾಪ್ತ ಕೊಬ್ಬಿನಾಮ್ಲಗಳು, ಲಿನೋಲಿಕ್ ಆಮ್ಲ, ಪ್ರೋಟೀನ್, ವಿಟಮಿನ್​ಗಳು, ಕ್ಯಾಲ್ಸಿಯಂ, ಪೊಟ್ಯಾಸಿಯಮ್, ಮೆಗ್ನೀಸಿಯಮ್ ಮತ್ತು ಫೈಬರ್​ಗಳ ಗುಣಗಳನ್ನೊಳಗೊಂಡಿದೆ.

ಪಿಸ್ತಾ ತಿನ್ನುವುದರಿಂದ ದೇಹಕ್ಕೆ ಅಗತ್ಯವಾದ ಅನೇಕ ಪೋಷಕಾಂಶಗಳು ಸಿಗುತ್ತವೆ. ಹಾಗೂ ಮುಖ್ಯವಾಗಿ ಚಳಿಗಾಲದಲ್ಲಿ ಪಿಸ್ತಾ ತಿನ್ನುವುದರಿಂದ ಹಲವು ರೋಗಗಳಿಂದ ದೂರ ಉಳಿಯಬಹುದು.
ರಕ್ತದ ಕೊರತೆ ನೀಗಿಸುತ್ತದೆ

ಪಿಸ್ತಾದಲ್ಲಿ ವಿಟಮಿನ್ ಬಿ6 ಸಮೃದ್ಧವಾಗಿದ್ದು, ಇದು ರಕ್ತ ಪರಿಚಲನೆ ಸುಧಾರಿಸುತ್ತದೆ. ಹಾಗೂ ಹಿಮೋಗ್ಲೋಬಿನ್ ಮಟ್ಟವನ್ನು ಕೂಡ ಉತ್ತಮ ಮಾಡುತ್ತದೆ.

ಮಧುಮೇಹ ರೋಗಿಗಳಿಗೆ ಉತ್ತಮ :

ಪಿಸ್ತಾ ಸೇವನೆಯು ಮಧುಮೇಹ ರೋಗಿಗಳಿಗೆ ಬಹಳ ಪ್ರಯೋಜನಕಾರಿಯಾಗಿದೆ.ಪಿಸ್ತಾದಲ್ಲಿರುವ ಅನೇಕ ಅಂಶಗಳು ಮಧುಮೇಹವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ.

ಕಣ್ಣಿನ ಆರೋಗ್ಯ :

ಇದರಲ್ಲಿರುವ ಲುಟೀನ್ ಮತ್ತು ಕ್ಸಾಂಥೈನ್ ಎಂಬ ಆ್ಯಂಟಿಆಕ್ಸಿಡೆಂಟ್‌ಗಳು ಕಣ್ಣಿಗೆ ಹಿತಕರವಾಗಿವೆ. ಇದು ಕಣ್ಣಿನ ಕಾಂತಿಯನ್ನು ಅಧಿಕ ಮಾಡಲು ಉಪಕಾರಿಯಾಗಿದೆ.

ಹೃದಯ ಆರೋಗ್ಯ : 

ಪಿಸ್ತಾದಲ್ಲಿರುವ ಪೋಷಕಾಂಶಗಳು ಹೃದಯ ಸಂಬಂಧಿ ಕಾಯಿಲೆಗಳಿಂದ ನಿಮ್ಮನ್ನು ರಕ್ಷಿಸುತ್ತವೆ. ಇದನ್ನು ತಿನ್ನುವುದರಿಂದ ಕಡಿಮೆ ಸಾಂದ್ರತೆಯ ಲಿಪೊಪ್ರೋಟೀನ್ ಕಡಿಮೆಯಾಗುತ್ತದೆ. ಇದು ಹೃದಯ ಸಂಬಂಧಿ ಕಾಯಿಲೆಗಳನ್ನು ದೂರವಿಡುತ್ತದೆ.

ತೂಕ ಇಳಿಕೆ :

ತೂಕ ನಷ್ಟಕ್ಕೆ ಆಹಾರದಲ್ಲಿ ಪಿಸ್ತಾವನ್ನು ಸೇರಿಸಿ. ನೀವು ಇದನ್ನು ಲಘು ಆಹಾರದ ರೂಪದಲ್ಲಿ ತಿನ್ನಬಹುದು. ಇದರಿಂದ ಜಂಕ್ ಫುಡ್ ತಿನ್ನುವ ಉತ್ಸಾಹ ಕಡಿಮೆಯಾಗುತ್ತದೆ. ಪಿಸ್ತಾದಲ್ಲಿ ಪೊಟ್ಯಾಸಿಯಮ್, ಮೆಗ್ನೀಸಿಯಮ್ ಮತ್ತು ವಿಟಮಿನ್‌ಗಳು ಸಮೃದ್ಧವಾಗಿವೆ. ಇದು ದೇಹದಲ್ಲಿನ ಕ್ಯಾಲ್ಸಿಯಂ ಕೊರತೆಯನ್ನು ಪೂರೈಸುತ್ತದೆ ಮತ್ತು ಮೂಳೆಗಳನ್ನು ಬಲಪಡಿಸುತ್ತದೆ.

ಕುಮುದ ಗೌಡ, ಪವರ್​ ಟಿವಿ

RELATED ARTICLES

Related Articles

TRENDING ARTICLES