Monday, December 23, 2024

ಇಂದು 60ರ ದಶಕದ ದಿಗ್ಗಜ ಕ್ಯಾಪ್ಟನ್ ಪಟೌಡಿ ಜನ್ಮದಿನ

ಇಂದು ಪಟೌಡಿ ಜನ್ಮದಿನ. ಪಟೌಡಿ ಹುಟ್ಟಿದ್ದು ಜನವರಿ 5, 1941.  ಯಾರು ಈ ಪಟೌಡಿ ಎಂದು ಇಂದಿನ ಯುವಜನತೆ ಕೇಳಬಹುದು. ಪಟೌಡಿ ಪೂರ್ಣ ಹೆಸರು ಮೊಹಮ್ಮದ್ ಮನ್ಸೂರ್ ಅಲಿಖಾನ್ ಸಿದ್ದಿಕಿ ಪಟೌಡಿ ಎಂದು. ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಅದ್ಭುತ ಹೆಸರಾಗಿರುವ ಪಟೌಡಿ 60ರ ದಶಕದಲ್ಲಿ ಟೀಮ್ ಇಂಡಿಯಾ ಕ್ಯಾಪ್ಟನ್ ಆಗಿದ್ದ ಪಟೌಡಿ ತಮ್ಮ 21ನೆಯ ವಯಸ್ಸಿನಲ್ಲೇ ಟೆಸ್ಟ್​ಗೆ ಪದಾರ್ಪಣೆ ಮಾಡಿದ್ದರು. ಇವರ ತಾತ ಭೋಪಾಲದ ನವಾಬರಾಗಿದ್ದರಿಂದ ಪಟೌಡಿಯೂ ನವಾಬರೆಂದೇ ಹೆಸರಾದರು.

ಭಾರತ ತಂಡದ ಅತಿ ಯಶಸ್ವಿ ಕ್ಯಾಪ್ಟನ್ ಎನಿಸಿಕೊಂಡ ಪಟೌಡಿ ಒಂದು ಕಣ್ಣನ್ನು ಕಳೆದುಕೊಂಡಿದ್ದರು. ಆದರೆ ಅದು ಅವರ ಆಟಕ್ಕೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಂಡಿದ್ದರು. ಪಟೌಡಿ ಅಂದಿನ ಹಿಂದಿ ಸಿನಿಮಾರಂಗದ ಯಶಸ್ವಿ ನಾಯಕಿಯಾಗಿದ್ದ ಶರ್ಮಿಳಾ ಟ್ಯಾಗೋರ್​ರನ್ನು 1968ರಲ್ಲಿ ಮದುವೆಯಾದರು. ಇಂದು ಯಶಸ್ವಿ ಬಾಲಿವುಡ್ ನಾಯಕರಲ್ಲೊಬ್ಬನಾಗಿರುವ ಸೈಫ್ ಅಲಿ ಖಾನ್ ಪಟೌಡಿಯ ಮಗ. ಪಟೌಡಿ ಇಫ್ತೆಕಾರ್ ಅಲಿ ಖಾನ್​ಅವರ ಮಗನಾಗಿದ್ದು, ಅವರೂ ಸಹ ಒಳ್ಳೆಯ ಕ್ರಿಕೆಟರ್ ಆಗಿದ್ದರು. ಇಂದು ಪಟೌಡಿ ಬದುಕಿದ್ದರೆ ಅವರಿಗೆ 81 ವರ್ಷ ವಯಸ್ಸಾಗಿರುತ್ತಿತ್ತು.

46 ಟೆಸ್ಟ್ ಪಂದ್ಯಗಳನ್ನು ಆಡಿದ್ದ ಪಟೌಡಿ 6 ಶತಕಗಳನ್ನು  ಹಾಗೂ 17 ಅರ್ಧಶತಕಗಳನ್ನು ಗಳಿಸಿದ್ದರು. ಅವರು ತಮ್ಮ ಕ್ರಿಕೆಟ್ ಜೀವನದಲ್ಲಿ ಗಳಿಸಿದ ಅತ್ಯಧಿಕ ಸ್ಕೋರ್ ಎಂದರೆ 203 ರನ್ನುಗಳು. ಈ ಇನ್ನಿಂಗ್ಸ್​ನಲ್ಲಿ ಅವರು ನಾಟೌಟ್ ಆಗಿ ಉಳಿದಿದ್ದರು.

RELATED ARTICLES

Related Articles

TRENDING ARTICLES