Sunday, January 19, 2025

ಉತ್ತಮ ಲೀಡ್​ಗೆ ಹೋರಾಡುತ್ತಿರುವ ಟೀಮ್ ಇಂಡಿಯಾ

ಜೊಹಾನ್ಸ್​ಬರ್ಗ್​: ದಕ್ಷಿಣ ಆಫ್ರಿಕ ಮತ್ತು ಭಾರತ ಮಧ್ಯೆ ನಡೆಯುತ್ತಿರುವ 2ನೇ ಟೆಸ್ಟ್ ಪಂದ್ಯದ 3ನೇ ದಿನವಾದ ಇಂದು ಭಾರತ 7 ವಿಕೆಟ್​ಗಳಿಗೆ 225 ರನ್ನುಗಳನ್ನು ಗಳಿಸಿದೆ. ನಿನ್ನೆಯ ದಿನದಾಟದ ಕೊನೆಯಲ್ಲಿ 2 ವಿಕೆಟ್​ಗಳನ್ನು ಕಳೆದುಕೊಂಡು ಆಟ ನಿಲ್ಲಿಸಿದ್ದ ಭಾರತ ಇಂದು ಆಟವನ್ನು ಮುಂದುವರೆಸಿ 4 ವಿಕೆಟ್​ಗಳನ್ನು ಕಳೆದುಕೊಂಡಿತು. ಇದೀಗ ಶಮಿ ಖಾತೆ ತೆರೆಯದೆ ಹಾಗೂ ವಿಹಾರಿ 10 ರನ್ನುಗಳೊಂದಿಗೆ ಆಟ ಮುಂದುವರೆಸಿದ್ದಾರೆ.

ಈ ಮಧ್ಯೆ ಬ್ಯಾಟ್ ಬೀಸುತ್ತಿರುವ ಠಾಕೂರ್ ಫೋರ್, ಸಿಕ್ಸ್​ಗಳನ್ನು ಎತ್ತುತ್ತ ಭಾರತದ ಸ್ಕೋರ್ ಬೋರ್ಡ್​ ಮೂವ್ ಮಾಡುತ್ತಿರುವುದು ಭಾರತದ ಪಾಳಯದಲ್ಲಿ ಸಂತಸವನ್ನುಂಟು ಮಾಡಿತ್ತು. ಆದರೆ ಸಿಕ್ಸರ್ ಎತ್ತುವ ಭರದಲ್ಲಿ ಠಾಕೂರ್ ಬೌಂಡರಿ ಲೈನ್​ನಲ್ಲಿ ಕ್ಯಾಚ್ ಕೊಟ್ಟು ನಿರ್ಗಮಿಸಿದರು. ಕೊನೆಯ ವರದಿಯಂತೆ ಭಾರತ 200 ರನ್ನುಗಳೊಂದಿಗೆ ಮುನ್ನಡೆಯನ್ನು ಸಾಧಿಸಿದೆ.

RELATED ARTICLES

Related Articles

TRENDING ARTICLES