“ಮುಗುಳ್ನಗೆ” ಇದನ್ನು ಮಂದಹಾಸ, ಕಿರು ನಗೆ, ಮಂದಸ್ಮಿತ, ತೆಳು ನಗೆ, ಪ್ರಸನ್ನತೆ ಮುಂತಾದ ರೀತಿಯಲ್ಲಿ ಗುರುತಿಸಬಹುದು.
• ಮುಗುಳ್ನಗೆಗೆ ಮಾಂತ್ರಿಕ ಶಕ್ತಿಯಿದೆ.
• ಅರೋಗ್ಯ ವರ್ಧನೆಗೆ ಒಳ್ಳೆಯದು.
• ಮುಖದ ಅಂದ ಹೆಚ್ಚಿಸುವಲ್ಲಿ ಸಹಕಾರಿ.
• ಸಂತಸ – ಸಂಭ್ರಮ – ಸಂತೃಪ್ತಿಯ ಸಂಗಮವಿದು.
• ಆರೋಗ್ಯದ ಮೌಲ್ಯಮಾಪನವಿದು.
• ನಿಮ್ಮ ಆಯಸ್ಸನ್ನು ಹೆಚ್ಚಿಸುತ್ತದೆ.
ನಾನೂ ಅಂದ
ಯಾವುದರಿಂದ?
ಮುಗುಳ್ನಗೆಯಿಂದ.
ಅರಳಿರೆ ಮುಖಾರವಿಂದ;
ಸುದೀರ್ಘ ಜೀವನದಾನಂದ;
ಸುಖೀ ಬಾಳಿಗದು ಮಕರಂದ.
ಇದು ನಾನು ಬರೆದ ಒಂದು ಚುಟುಕ. ನೆನಪಿಸಿಕೊಡಾಗಲೆಲ್ಲ ಮತ್ತೆ ಖುಷಿ ನೀಡುತ್ತದೆ.
ಲಿಯೋನಾರ್ಡೋ ಡಾವಿಂಚಿಯ ‘ಮೊನಾಲಿಸಾ’ ಚಿತ್ರಕಲೆಯನ್ನು ಮುಗುಳ್ನಗೆ ಉಳ್ಳ ಚಿತ್ರ ಎಂದು ಗುರುತಿಸಲಾಗಿದೆ.
ನನಗೆ ಪ್ರಿಯವಾದ ಕೆಲವು ವಾಕ್ಯಗಳು:
* Smile – It improves your Face Value.
* A man without Smile should not open a Shop – Chinese Proverb.
* Miles & Miles of Smiles.
* You are not completely dressed without a Smile.
* ಸೌಂದರ್ಯ ಶಕ್ತಿಯಾದರೆ, ಮುಗುಳ್ನಗೆ ಖಡ್ಗವಿದ್ದಂತೆ – ಶೇಕ್ಸ್ ಪಿಯರ್
ಈಗಿನಿಂದ ನಿಮ್ಮ ಮುಖ ಮುಗುಳ್ನಗೆಯನ್ನು ಸದಾ ಹೊಂದಿರಲಿ. ಮುಗುಳ್ನಗೆ ಎಂದರೆ ನಿಮಗೆ ಏನನ್ನಿಸುತ್ತದೆ? ಆಲೋಚಿಸಿ.
ನಿಮಗೆ ಶುಭವಾಗಲಿ.
ಜಯಪ್ರಕಾಶ್ ನಾಗತಿಹಳ್ಳಿ
ಮೆಂಟರ್, ಪವರ್ ಟಿವಿ