Sunday, May 19, 2024

ರಾಜ್ಯ ಸರ್ಕಾರದ ವಿರುದ್ಧ ಹೋಟೆಲ್ ಉದ್ಯಮಿಗಳ ಅಸಮಾಧಾನ

ಬೆಂಗಳೂರು : ನೈಟ್ ಕರ್ಫ್ಯೂ, ವೀಕ್ ಎಂಡ್ ಕರ್ಫ್ಯೂ ಹಾಗೂ ಶೇಕಡ 50 ರಷ್ಟು ಸೇವೆ ವಿಚಾರವಾಗಿ ಹೋಟೆಲ್ ಅಸೋಸಿಯೇಷನ್ ಅಸಮಾಧಾನಗೊಂಡಿದೆ. ಈ ಬಗ್ಗೆ ಬೆಂಗಳೂರು ಹೋಟೆಲ್ ಅಸೋಸಿಯೇಷನ್ ಅಧ್ಯಕ್ಷ ಪಿಸಿ ರಾವ್ ಹೇಳಿದ್ದಾರೆ.

ಈ ನಿರ್ಬಂಧ ಸಂಪೂರ್ಣ ಅವೈಜ್ಞಾನಿಕವಾಗಿದ್ದು ಹೋಟೆಲ್, ಬಾರ್ ಹಾಗೂ ರೆಸ್ಟೋರೆಂಟ್​​​ಗಳಿಗೆ ಆರ್ಥಿಕ ಹೊರೆ ಸೃಷ್ಟಿಯಾಗಿದೆ. ರೆಸಾರ್ಟ್ ಹಾಗೂ ಪ್ರವಾಸೋದ್ಯಮ ಆಧಾರಿತ ಸೇವೆಗಳಿಗೆ ಬಹುದೊಡ್ಡ ಹೊಡೆತವಾಗಿದೆ. ಮೂರನೇ ಅಲೆ ಅಷ್ಟೇನೂ ಹಾನಿಕರವಾಗಿರೋದಿಲ್ಲ ಎಂದು ತಜ್ಞರು ತಿಳಿಸಿದ್ದಾರೆ. ಹಾಗಿದ್ದರು ಸರ್ಕಾರ ಅನಗತ್ಯವಾಗಿ ಈ ರೀತಿಯ ನಿಯಮಗಳನ್ನು ಹಾಕುವ ಮೂಲಕ ಹೋಟೆಲ್ ಉದ್ಯಮ ಬಹಳ ಸಂಕಷ್ಟಕ್ಕೆ ಸಿಲುಗಿದ್ದು, ಮತ್ತೊಮ್ಮೆ ಈ ನಿರ್ಬಂಧನೆಗಳ ಬಗ್ಗೆ ಆಲೋಚಿಸಬೇಕೆಂದು ಮನವಿಯನ್ನು  ಮಾಡಿದ್ದಾರೆ.

RELATED ARTICLES

Related Articles

TRENDING ARTICLES