Sunday, January 19, 2025

ಪವರ್ ಪ್ರವೇಶಿಸಿದ ‘ಪವರ್’ಫುಲ್ ಪ್ರತಿಭೆ ರಾಘವ್ ಸೂರ್ಯ

ಬೆಂಗಳೂರು: ರಾಕೇಶ್ ಶೆಟ್ಟಿಯವರ ದಕ್ಷ ನಾಯಕತ್ವದಲ್ಲಿ ನಂಬರ್ ಒನ್ ಆಗುವತ್ತ ಮುನ್ನುಗ್ಗುತ್ತಿರುವ ಪವರ್ ಟಿವಿಯ ಬಳಗಕ್ಕೆ ಇಂದು ಮತ್ತೊಬ್ಬ ಪ್ರತಿಭಾವಂತ ಸಂಪಾದಕರ ಸೇರ್ಪಡೆಯಾಯಿತು. ಕನ್ನಡಿಗರಿಗೆ ಈಗಾಗಲೇ ತಮ್ಮ ಪ್ರತಿಭೆಯಿಂದ ಚಿರಪರಿಚಿತರಾಗಿರುವ ರಾಘವ್ ಸೂರ್ಯ ಅವರೆ ಇಂದು ಪವರ್ ಟಿವಿಗೆ ಸೇರ್ಪಡೆಯಾದ ‘ಪವರ್​’ಫುಲ್ ಪ್ರತಿಭೆ. ರಾಘವ್ ಸೂರ್ಯರವರನ್ನು ಪವರ್ ಟಿವಿಗೆ ಎಂ.ಡಿ.ರಾಕೇಶ್ ಶೆಟ್ಟಿಯವರು ಪುಷ್ಪಗುಚ್ಛ ನೀಡಿ ಸ್ವಾಗತಿಸಿದರು.

ಪವರ್ ಟಿವಿಯ ಸಂಪಾದಕೀಯ ಸಲಹೆಗಾರರಾದ ರವೀಂದ್ರ ರೇಷ್ಮೆ, ನಿರ್ದೇಶಕರಾದ ಮಧು ಹಾಗೂ​ ಜಯಪ್ರಕಾಶ್ ನಾಗತಿಹಳ್ಳಿ, ಮೆಂಟರ್ ಮುಂತಾದ ಹಿರಿಯರು ಮತ್ತು ವಿಭಾಗದ ಮುಖ್ಯಸ್ಥರು ರಾಘವ್ ಸೂರ್ಯರವರನ್ನು ಸ್ವಾಗತಿಸಿದರು. ಪ್ರತಿಭಾವಂತರಿಂದ ಕೂಡಿರುವ ಪವರ್ ಟಿವಿ ಮುಂದಿನ ದಿನಗಳಲ್ಲಿ ಇನ್ನೂ ಪವರ್ ಫುಲ್ ಆಗುವುದರಲ್ಲಿ ಸಂಶಯವಿಲ್ಲ, ರಾಘವ ಸೂರ್ಯರವರ ಸೇರ್ಪಡೆಯಿಂದ ಪವರ್​ ಟಿವಿ ಮತ್ತಷ್ಟು ಶಕ್ತಿ ಪಡೆಯಲಿದೆ ಎಂದು ರೇಷ್ಮೆಯವರು ಅಭಿಪ್ರಾಯ ವ್ಯಕ್ತಪಡಿಸಿದರು.

ಸತತ 15 ವರ್ಷಗಳ ಮಾಧ್ಯಮ ಸೇವೆಯಿಂದ ಕರುನಾಡಿಗೆ ಚಿರಪರಿಚಿತರಾಗಿರುವ ರಾಘವ ಸೂರ್ಯ, ಮುಂದಿನ ಮಾಧ್ಯಮ ಪ್ರಯಾಣ‘ಕ್ಕೆ ಪವರ್​ ಟಿವಿ ಆಯ್ಕೆ ಮಾಡಿಕೊಂಡಿರುವುದ ಸಂತಸದ ವಿಷಯ. ಇನ್ನು ಮುಂದೆ ಸಹಸಂಪಾದಕರಾಗಿ ರಾಘವ ಸೂರ್ಯ ನಿಮ್ಮ ಮುಂದೆ ತೆರೆಯ ಮೇಲೆ ಪವರ್​ಫುಲ್​ ಆಗಿ ಮಿಂಚಲಿದ್ದಾರೆ. ರಾಘವ ಸೂರ್ಯ, ವೆಲ್​ಕಮ್​ ಟು ಪವರ್​ ಫ್ಯಾಮಿಲಿ.

ಓಂ, ಪ್ರಣೂತ್, ಪವರ್ ಟಿವಿ

RELATED ARTICLES

Related Articles

TRENDING ARTICLES