ಪಂಜಾಬ್: ಪ್ರಧಾನಿ ಮೋದಿ ಹುಸೇನಿವಾಲಾದಲ್ಲಿರುವ ರಾಷ್ಟ್ರೀಯ ಹುತಾತ್ಮರ ಸ್ಮಾರಕಕ್ಕೆ ಭೇಟಿ ನೀಡಲು ಬಟಿಂಡಾಗೆ ಬಂದಿಳಿದರು. ಅವರನ್ನು ಅಲ್ಲಿಂದ ಹೆಲಿಕ್ಯಾಪ್ಟರ್ನಲ್ಲಿ ಕರೆದೊಯ್ಯಬೇಕಾಗಿತ್ತು. ಆದರೆ ಮಳೆ ಹಾಗೂ ಕೆಟ್ಟ ಹವಾಮಾನದ ಕಾರಣದಿಂದಾಗಿ ಅವರು 20 ನಿಮಿಷಗಳ ಕಾಲ ಕಾಯಬೇಕಾಯಿತು. ಆದರೆ ಹವಾಮಾನ ಸುಧಾರಿಸದಾದಾಗ ಅವರು ಸ್ಮಾರಕಕ್ಕೆ ರಸ್ತೆಯ ಮುಖಾಂತರ ಹೋಗುವ ನಿರ್ಧಾರ ಕೈಗೊಂಡರು. ಎರಡು ಗಂಟೆಗಳಿಗೂ ಹೆಚ್ಚು ಸಮಯವನ್ನು ಈ ರಸ್ತೆ ಪ್ರಯಾಣ ತೆಗೆದುಕೊಳ್ಳಬಹುದೆಂದು ಅಂದಾಜಿಸಿ, ಪಂಜಾಬ್ನ ಪೊಲೀಸರ ಅಗತ್ಯ ಭದ್ರತಾ ವ್ಯವಸ್ಥೆಯ ಧೃಡೀಕರಣದ ನಂತರ ಅಲ್ಲಿಂದ ಹೊರಟರು.
ಸ್ಮಾರಕದಿಂದ ಸುಮಾರು 30 ಕಿ.ಮಿ ದೂರದಲ್ಲಿ ಪ್ರಧಾನಿ ಬೆಂಗಾವಲು ಪಡೆ ಮೇಲ್ಸೇತುವೆಯನ್ನು ತಲುಪಿದಾಗ, ಅಲ್ಲಿ ಪ್ರತಿಭಟನಾಕಾರರು ತಡೆಯೊಡ್ಡಿದ್ದರು. ಹೀಗಾಗಿ 20 ನಿಮಿಷಗಳ ಕಾಲ ಫ್ಲೈಓವರ್ನಲ್ಲಿ ಸಿಲುಕಿದ ಮೋದಿ ಕಾರ್ಯಕ್ರಮವನ್ನು ರದ್ದುಗೊಳಿಸಿ ಅಲ್ಲಿಂದ ಹಿಂದಿರುಗಿದರು. ಗೃಹಸಚಿವಾಲಯವು ಇದಕ್ಕೆ ಪಂಜಾಬ್ ಸರಕಾರನೆ. ಕಾರಣ ಎಂದು ಆರೋಪಿಸಿದೆ.
ಏರ್ಪೋರ್ಟ್ಗೆ ಬಂದ ಮೋದಿ ಅಲ್ಲಿ ಪಂಜಾಬ್ ಸಿಎಂ ಅನ್ನು ಮಾತಿನಲ್ಲೇ ಕುಟುಕಿದರು. ನಾನು ಇಲ್ಲಿಂದ ಜೀವಂತವಾಗಿ ಹಿಂತಿರುಗುತ್ತಿದ್ದೇನೆ. ಅದಕ್ಕಾಗಿ ನಿಮ್ಮ ಸಿಎಂಗೆ ಧನ್ಯವಾದ ಹೇಳಿಬಿಡಿ ಎಂದು ವ್ಯಂಗ್ಯವಾಗಿ ಹೇಳಿದ ಮೋದಿ ಅಲ್ಲಿಂದ ಮರಳಿದರು. ಪಂಜಾಬ್ನಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿರುವುದನ್ನು ನಾವಿಲ್ಲಿ ಸ್ಮರಿಸಬಹುದು. ಪ್ರಧಾನಿ ಭದ್ರತೆಯಲ್ಲಿ ಅತಿ ದೊಡ್ಡ ಲೋಪವಾಗಿದೆ ಎಂದು ಬಿಜೆಪಿ ಉನ್ನತ ನಾಯಕರು ಹೇಳಿದರೆ, ಪಂಜಾಬ್ ಮುಖ್ಯಮಂತ್ರಿ ಚೆನ್ನಿ ಯಾವುದೇ ಭದ್ರತಾ ಲೋಪವಾಗಿಲ್ಲ ಎಂದಿದ್ದಾರೆ.