Monday, February 24, 2025

ರಾಜ್ ಬಿ ಶೆಟ್ಟಿಗೆ ಕರೆ ಮಾಡಿ ಕಾಲೆಳೆದ ಶಿವಣ್ಣ

ಬೆಂಗಳೂರು : ಹ್ಯಾಟ್ರಿಕ್ ಹೀರೋ ಶಿವರಾಜ್​​ ಕುಮಾರ್, ರಾಜ್ ಬಿ ಶೆಟ್ಟಿಗೆ ಸರ್ಪ್ರೈಸ್ ಕರೆ ಮಾಡಿದ್ದಾರೆ. ಮಾಸ್ ಸ್ಟೈಲ್‌ನಲ್ಲೇ ರಾಜ್ ಶೆಟ್ಟಿ ಅವರ ಕಾಲೆಳೆದಿದ್ದಾರೆ.

ಮಂಗಳಾದೇವಿ ಗುಂಗಲ್ಲಿರುವ ರಾಜ್ ಕೂಡ ತಮ್ಮನ್ನು ಬಿಟ್ಟುಕೊಡದೇ ಸರಿಯಾಗಿಯೇ ಉತ್ತರ ಕೊಟ್ಟಿದ್ದಾರೆ. ಗರುಡ ಗಮನ ವೃಷಭ ವಾಹನ’ ಓಟಿಟಿಯಲ್ಲಿ ಬಿಡುಗಡೆಗೆ ಸಿದ್ಧವಾಗುತ್ತಿದೆ. ಜೀ5ನಲ್ಲಿ ತೆರೆಕಾಣುತ್ತಿರುವ ಚಿತ್ರದ ಪ್ರಚಾರ ಹಾಗೂ ರಿಲೀಸ್ ದಿನಾಂಕವನ್ನು ವಿಭಿನ್ನವಾಗಿ ವೀಕ್ಷಕರ ಮುಂದಿಡಲಾಗಿದೆ.

ಈಗಾಗಲೇ ಜೀ5ಲ್ಲಿ ಬಿಡುಗಡೆಯಾಗಿರುವ ‘ಭಜರಂಗಿ 2’ ದಾಖಲೆ ಮಾಡಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಈ ಸಂತಸದಲ್ಲಿರುವ ಶಿವಣ್ಣ ರಾಜ್ ಬಿ ಶೆಟ್ಟಿಗೆ ಕರೆ ಮಾಡಿದ್ದಾರೆ. ರಾಜ್ ಹಾಗೂ ಸಂಭಾಷಣೆಯ ಮೂಲಕ ಜೀ5 ‘ಗರುಡ ಗಮನ’ದ ಬಿಡುಗಡೆ ದಿನಾಂಕ ಘೋಷಿಸಿದೆ. ಈಗಾಗಲೇ ಥಿಯೇಟರ್​ನಲ್ಲಿ ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯೆ ಪಡೆದ ಚಿತ್ರ ಜನವರಿ 13ರಿಂದ ಓಟಿಟಿ ಯಲ್ಲಿ ಪ್ರಸಾರವಾಗಲಿದೆ.

RELATED ARTICLES

Related Articles

TRENDING ARTICLES