ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಕಠಿಣ ನಿಯಮಗಳನ್ನು ಜಾರಿಗೊಳಿಸಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಇದು ಕೊವಿಡ್ ಲಾಕ್ಡೌನ್, ಕೊವಿಡ್ ಕರ್ಫ್ಯೂ ಅಲ್ಲ. ಇದು ಬಿಜೆಪಿ ಕರ್ಫ್ಯೂ, ಬಿಜೆಪಿಯ ಲಾಕ್ಡೌನ್ ಅಂತ ಹೇಳಿದ್ದಾರೆ.
ರಾಜಕಾರಣ ಮಾಡಲು ಈಗ ಟಫ್ ಆಗುತ್ತಿದೆ. ತಮ್ಮ ರಾಜಕಾರಣಕ್ಕಾಗಿ ಟಫ್ ರೂಲ್ಸ್ ತಂದಿದ್ದಾರೆ. ಮೆರವಣಿಗೆ ಮಾಡಬೇಡಿ, ಪ್ರತಿಭಟನೆ ಮಾಡಬೇಡಿ ಅಂದಿದ್ದಾರೆ. ನಾವು ಮೆರವಣಿಗೆ ಮಾಡಲ್ಲ, ನೀರಿಗಾಗಿ ನಡೆಯುತ್ತೇವೆ ಅಂತ ಡಿಕೆಶಿ ತಿಳಿಸಿದ್ದಾರೆ. ನಾವು ಕುಡಿಯುವ ನೀರಿಗಾಗಿ ನಡೆಯುತ್ತೇವೆ. ನಾವು ವಾಕ್ ಫಾರ್ ವಾಟರ್ ಮಾಡುತ್ತೇವೆ. ಅವರಿಗೂ ಕಾವೇರಿ ನೀರು ಕುಡಿಸುತ್ತೇವೆ. ವರ್ತಕರು, ವ್ಯಾಪಾರಿಗಳ ಮೇಲೆ ಗದಾಪ್ರಹಾರ ಮಾಡುತ್ತಿದ್ದಾರೆ. ರಾಜಕಾರಣ, ನಮ್ಮ ಮೇಲಿನ ದ್ವೇಷಕ್ಕೆ ವೀಕೆಂಡ್ ಲಾಕ್ಡೌನ್ ಜಾರಿಗೊಳಿಸಿದ್ದಾರೆ ಅಂತ ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಶಿವಕುಮಾರ್ ಹೇಳಿಕೆ ನೀಡಿದ್ದಾರೆ.