ನವದೆಹಲಿ : ಒಮೈಕ್ರಾನ್ ರೂಪಾಂತರವು ಜಗತ್ತಿನಲ್ಲಿ ಮತ್ತೆ ಕೊರೊನಾ ಆತಂಕಕ್ಕೆ ಕಾರಣವಾಗಿದ್ದು, ಭಾರತದ ಅನೇಕ ರಾಜ್ಯಗಳಲ್ಲಿಯೂ ಒಮೈಕ್ರಾನ್ನಿಂದಾಗಿ, ಪ್ರಕರಣಗಳಲು ಬಹಳ ಹೆಚ್ಚಳವಾಗಿದೆ.
ಇದರ ನಡುವೆ, ಕೊರೊನಾ ಹೊಸ IHU ರೂಪಾಂತರವು ಫ್ರಾನ್ಸ್‌ನಲ್ಲಿ ಕಂಡುಬಂದಿದೆ. ಒಮೈಕ್ರಾನ್ಗಿಂತ ಹೆಚ್ಚು ರೂಪಾಂತರವಾಗಿದೆ ಈ ವೈರಸ್ . ಫ್ರಾನ್ಸ್‌ನಲ್ಲಿ 12 ಜನರು IHU ರೂಪಾಂತರದಿಂದ ಸೋಂಕಿಗೆ ಒಳಗಾಗಿದ್ದಾರೆಂದು ಮಾಹಿತಿ ತಿಳಿದು ಬಂದಿದೆ.
ಫ್ರೆಂಚ್ ನಗರವಾದ ಮಾರ್ಸಿಲ್ಲೆಯಲ್ಲಿ ಕಂಡುಬಂದಿರುವ IHU ರೂಪಾಂತರದಿಂದ ಸೋಂಕಿಗೆ ಒಳಗಾದ 12 ಜನರು ನವೆಂಬರ್ ಮಧ್ಯದಲ್ಲಿ ಆಫ್ರಿಕನ್ ದೇಶವಾದ ಕ್ಯಾಮರೂನ್‌ನಿಂದ ವಾಪಸ್ ಆಗಿದ್ದರು. ನಂತರ ವಿಮಾನ ನಿಲ್ದಾಣದಲ್ಲಿ ಅವರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿತ್ತು, ಆಗ ಅವರ ರಿಪೋರ್ಟ್ ಪಾಸಿಟಿವ್ ಎಂದು ಬಂದಿತು.
ಪರೀಕ್ಷೆಯಲ್ಲಿ ಧನಾತ್ಮಕ ಮತ್ತು ಆಫ್ರಿಕನ್ ದೇಶದಿಂದ ಹಿಂತಿರುಗಿದ ಕಾರಣ ಈ ಜನರನ್ನು ಮೊದಲು ಒಮೈಕ್ರಾನ್ ಶಂಕಿತರೆಂದು ಪರಿಗಣಿಸಲಾಗಿತ್ತು. ಈ ಎಲ್ಲಾ 12 ಜನರ ಮಾದರಿಗಳ ಜೀನೋಮ್ ಅನುಕ್ರಮವನ್ನು ಪರೀಕ್ಷೆ ಮಾಡಲಾಯಿತು.