Monday, November 25, 2024

ಮೇಕೆದಾಟು ವಿಳಂಬಕ್ಕೆ ಅಸಲಿ ಕಾರಣವೇನು ?

ಇತ್ತೀಜಿಗೆ ಮೇಕೆದಾಟು ಯೋಜನೆಯ ಬಗ್ಗೆ ಹಲವು ಕಡೆ ಪ್ರತಿಭಟನೆ,ಪಾದಯಾತ್ರೆಗಳು ನಡಿತಾಯಿದೆ. ಅದರಲ್ಲೂ ಪಕ್ಷಗಳು ಈ ಮೇಕೆ ದಾಟು ಯೋಜನೆಗೆ ಹೋರಾಟವನ್ನು ನಡೆಸುತ್ತಾ ಇದೆ. ಹಾಗಾದರೆ ಏನಿದು ಮೇಕೆದಾಟು ಯೋಜನೆ ಎಂದು ಜನರ ಕುತೂಹಲವನ್ನು ಕೆರಳಿಸಿವೆ.

ಮೇಕೆದಾಟು ಕರ್ನಾಟಕ ರಾಜ್ಯದ ರಾಮನಗರದ ಜಿಲ್ಲೆಯ ಕನಕಪುರ ತಾಲೂಕಿನ ದಕ್ಷಣ ಭಾಗದಲ್ಲಿ ದಟ್ಟವಾದ ಅರಣ್ಯದ ನಡುವೆ ಕಾವೇರಿ ನದಿ ಪಾತ್ರದಲ್ಲಿರುವ ಒಂದು ಪ್ರೇಕ್ಷಣೀಯ ವಿಹಾರ ಸ್ಧಳ , ಬೆಂಗಳೂರಿನಿಂದ 90 ಕಿ.ಮೀ ದೂರದಲ್ಲಿದೆ. ಬೆಂಗಳೂರಿನ ದಕ್ಷಿಣಕ್ಕೆ ಸಾತನೂರು ಮಾರ್ಗವಾಗಿ 113 ಕಿ.ಮೀ . ಕನಕಪುರದಿಂದ ಸಾತನೂರು , ಆಲಹಳ್ಳಿ , ಉಯ್ಯಂಬಳ್ಳಿ ಮಾರ್ಗವಾಗಿ ದಕ್ಷಿಣದಲ್ಲಿ 40 ಕಿಮೀ ದೂರದಲ್ಲಿದೆ. ಕನ್ನಡ ಭಾಷೆಯಲ್ಲಿ ಮೇಕೆ ಹಾರುವಷ್ಟು ಸ್ಧಳ ಇರುವುದರಿಂದ ಇದನ್ನು ಮೇಕೆದಾಟು ಎಂದು ಕರೆಯುತ್ತಾರೆ.

ಮೇಕೆದಾಟು ಡ್ಯಾಂ ವಿವಾದವೇನು ?

ಕಾವೇರಿ ನದಿ ನೀರಿನ ಹಂಚಿಕೆ ವಿವಾದವಾಗಿ ಕರ್ನಾಟಕ ಹಾಗೂ ತಮಿಳುನಾಡಿನ ನಡುವೆ ದಶಕಗಳ ಕಾಲ ಹೊಗೆಯಾಡುತ್ತಿದ್ದ ವಿವಾದಕ್ಕೆ ಸುಪ್ರೀಂ ಕೋರ್ಟ್​ ಬ್ರೇಕ್ ಹಾಕಿದ ಬೆನ್ನಲ್ಲೇ, ಇದೀಗ ಮೇಕೆದಾಟು ವಿವಾದ ಭುಗಿಲೆದ್ದಿದೆ. ಕರ್ನಾಟಕ , ತಮಿಳುನಾಡು ಹಾಗೂ ಕೇರಳ ರಾಜ್ಯ ಹಾಗೂ ಪುದುಚೇರಿ ಕೇಂದ್ರಾಡಳಿತ ಪ್ರದೇಶಕ್ಕೆ ಈಗಾಗಲೇ ಕಾವೇರಿ ನೀರು ಹಂಚಿಕೆ ಮಾಡಲಾಗಿದೆ. ಹೀಗಾಗಿ ಕೇರಳ ರಾಜ್ಯ ಹಾಗೂ ಪುದುಚೇರಿ ಕೇಂದ್ರಾಡಳತ ಪ್ರದೇಶಗಳಿಗೆ ಈಗಾಗಲೇ ಕಾವೇರಿ ನೀರು ಹಂಚಿಕೆ ಮಾಡಲಾಗಿದೆ. ತಮ್ಮ ಪಾಲಿನ ನೀರನ್ನು ಬಳಸಿಕೊಳ್ಳುವ ಕುರಿತಾಗಿ ಆಯಾ ಸರ್ಕಾರಗಳು ವಿವಿಧ ಯೋಜನೆಗಳನ್ನು ರೂಪಿಸುತ್ತಿವೆ.

ಮೇಕೆದಾಟು ಬಳಿ ಅಣೆಕಟ್ಟು ನಿರ್ಮಿಸಬೇಕೆಂದು 1948ರಿಂದಲೇ ಹಲವು ಸರ್ಕಾರಗಳು ಪ್ರಯತ್ನಿಸುತ್ತಾ ಬಂದಿದೆ.1956ರಲ್ಲಿ ರಾಜ್ಯ ಪುನರ್ ವಿಂಗಡಣೆ ಬಳಿಕವೂ ಯೋಜನೆ ಕುರಿತು ಚರ್ಚೆಗಳು ನಡೆದಿದ್ದವು. ಆದರ 1960ರ ಬಳಿಕ ಕಾವೇರಿ ವಿವಾದ ಮುಗಿಲೆದ್ದಾಗ ಈ ಯೋಜನೆಗಳು ಸರ್ಕಾರಗಳು ಮರೆತೇ ಹೋಗಿದ್ದವು. ಅಂತಿಮವಾಗಿ ಕಾವೇರಿ ನದಿ ನೀರಿನ ಹಂಚಿಕೆಯಾದ ಬಳಿಕ ಮತ್ತೆ ಕರ್ನಾಟಕ ಸರ್ಕಾರ ಜಾರಿಗೆ ತರುವ ಮನಸ್ಸು ಮಾಡಿದೆ.

RELATED ARTICLES

Related Articles

TRENDING ARTICLES