Thursday, December 26, 2024

ಕಿವೀಸ್​ಗೆ ಮಣಿಸಿದ ಕ್ರಿಕೆಟ್ ಶಿಶು ಬಾಂಗ್ಲಾ

ಮೌಂಟ್ ಮಂಗುಯಿ (ನ್ಯೂಜಿಲೆಂಡ್): ನ್ಯೂಜಿಲೆಂಡ್ ತಲುಪಿರುವ ಬಾಂಗ್ಲಾದೇಶ ತಂಡ ಗೆಲುವಿನೊಂದಿಗೆ ಟೆಸ್ಟ್ ಸರಣಿಯಲ್ಲಿ ಶುಭಾರಂಭ ಮಾಡಿದೆ. ಮೌಂಟ್ ಮಂಗುಯಿಯಲ್ಲಿ ನಡೆದ ಸರಣಿಯ ಮೊದಲ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾದೇಶ 8 ವಿಕೆಟ್‌ಗಳಿಂದ ನ್ಯೂಜಿಲೆಂಡ್ ತಂಡವನ್ನು ಸೋಲಿಸುವ ಮೂಲಕ ಐತಿಹಾಸಿಕ ಗೆಲುವು ಸಾಧಿಸಿದೆ.

ಬಾಂಗ್ಲಾದೇಶ ತಂಡವು ಕಿವೀಸ್ ತಂಡವನ್ನು ಟೆಸ್ಟ್ ಪಂದ್ಯದಲ್ಲಿ ಸೋಲಿಸಿದ್ದು ಇದೇ ಮೊದಲು. ಈ ಸೋಲಿನ ಮೊದಲು, ಆತಿಥೇಯ ತಂಡವು ಇಲ್ಲಿಯವರೆಗೆ ತವರಿನಲ್ಲಿ ಯಾವುದೇ ಸ್ವರೂಪದಲ್ಲಿ ಬಾಂಗ್ಲಾದೇಶದ ವಿರುದ್ಧ ಸೋತಿರಲಿಲ್ಲ. ಈ ಜಯದಿಂದ ಬಾಂಗ್ಲಾದೇಶ ಎರಡು ಟೆಸ್ಟ್‌ಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಇದುವರೆಗೂ ಕ್ರಿಕೆಟ್ ಶಿಶುಗಳೆಂದೇ ಪರಿಗಣಿಸಲ್ಪಡುವ ಬಾಂಗ್ಲಾದೇಶ ತಂಡವು ಅತ್ಯಂತ ಪ್ರಭಲವಾದ ನ್ಯೂಜಿಲೆಂಡ್ ತಂಡವನ್ನು ಸೋಲಿಸಿರುವುದು ಕ್ರಿಕೆಟ್​ನಲ್ಲಿ ಏನು ಬೇಕಾದರೂ ಆಗಬಹುದು ಎನ್ನುವುದಕ್ಕೆ ಉದಾಹರಣೆಯಂತಿದೆ.

RELATED ARTICLES

Related Articles

TRENDING ARTICLES