Wednesday, January 22, 2025

ಕೊರೋನಾ ಕೇಸ್​ ಹೆಚ್ಚಳ; ಚೀನಾದಲ್ಲಿ ಲಾಕ್​ಡೌನ್ ಘೋಷಣೆ

ಚೀನಾ : ಕೇವಲ ಮೂರು ಪ್ರಕರಣಗಳು ಪತ್ತೆಯಾಗಿದ್ದ, ಚೀನಾದ ನಗರದಲ್ಲಿ ಸಂಪೂರ್ಣ ಲಾಕ್‌ಡೌನ್‌ ಮಾಡಲಾಗಿದೆ. ಚೀನಾದ ನಗರವೊಂದರಲ್ಲಿ ಮತ್ತೆ ಲಕ್ಷಣ ರಹಿತ ಮೂರು ಕೊರೋನಾ ಪ್ರಕರಣಗಳು ವರದಿಯಾಗಿದ್ದು, ಆ ನಗರವನ್ನು ಸಂಪೂರ್ಣ ಲಾಕ್ ಡೌನ್ ಮಾಡಲಾಗಿದೆ.

ಕೊರೋನಾ ಆರಂಭದಿಂದಲೂ ಝೀರೋ ಕೋವಿಡ್ ವಿಧಾನವನ್ನು ಚೀನಾ ಅನುಸರಿಸಿಕೊಂಡಿದೆ. ಆದ್ರೂ ಸಹ ಮಂಗಳವಾರ 175 ಹೊಸ ಕೊರೋನಾ ಪ್ರಕರಣಗಳು ಕಂಡುಬಂದಿವೆ.ಇತ್ತೀಚೆಗೆ ಪತ್ತೆಯಾಗುತ್ತಿರುವ ಕೊರೋನಾ ಕೇಸ್ ಗಳಿಂದ ಬೆಚ್ಚಿಬಿದ್ದಿರುವ ಚೀನಿ ಸರ್ಕಾರ, ಗಡಿಗಳನ್ನು ಮುಚ್ಚಿದೆ ಮತ್ತು ದೇಶದ ಹಲವು ಭಾಗಗಳಲ್ಲಿ ಲಾಕ್‌ಡೌನ್ ವಿಧಿಸಿದೆ. 1.3 ಕೋಟಿ ಜನಸಂಖ್ಯೆಯನ್ನು ಹೊಂದಿರುವ ಶಾಂಕ್ಸಿ ನಗರವನ್ನ ಸುಮಾರು ಎರಡು ವಾರಗಳ ಕಾಲ ಲಾಕ್‌ಡೌನ್‌ ಮಾಡಲಾಗಿದೆ.

RELATED ARTICLES

Related Articles

TRENDING ARTICLES