ಜೊಹಾನ್ಸ್ಬರ್ಗ್: ಭಾರತ ಮತ್ತು ದಕ್ಷಿಣ ಆಫ್ರಿಕ ನಡುವಿನ 2ನೇ ಟೆಸ್ಟ್ ಪಂದ್ಯದ 3ನೇ ದಿನದಾಟದಲ್ಲಿ ಭಾರತ ತನ್ನ ಎರಡನೇ ಇನ್ನಿಂಗ್ಸ್ನಲ್ಲಿ 266 ರನ್ನುಗಳನ್ನು ಗಳಿಸಿ ಆಲೌಟ್ ಆಯಿತು. ಭಾರತದ ಪರ ಎರಡನೇ ಇನ್ನಿಂಗ್ಸ್ನಲ್ಲಿ ಅರ್ಧಶತಕದ ಗಡಿಯನ್ನು ಕೇವಲ ಇಬ್ಬರು ಮಾತ್ರ ದಾಟಿದರು. ಅಜಿಂಕ್ಯ ರಹಾನೆ 58 ರನ್ನುಗಳನ್ನು ಗಳಿಸಿದರೆ, ಚೇತೆಶ್ವರ್ ಪೂಜಾರ 53 ರನ್ನುಗಳನ್ನು ಗಳಿಸಿದರು.
ದಕ್ಷಿಣ ಆಫ್ರಿಕಾ ಗೆಲುವಿಗೆ 240 ರನ್ನುಗಳನ್ನು ಗಳಿಸಬೇಕಿದೆ. ದಕ್ಷಿಣ ಆಫ್ರಿಕ ತನ್ನ ಎರಡನೇ ಇನ್ನಿಂಗ್ಸ್ನಲ್ಲಿ ವೇಗದ ಆಟಕ್ಕೆ ಒತ್ತು ನೀಡಿದೆ. ನಿಧಾನಗತಿಯ ಆಟದಿಂದ ವಿಕೆಟ್ ಕಳೆದುಕೊಳ್ಳುವುದರ ಜೊತೆಗೆ ರನ್ನುಗಳೂ ಸಹ ಆಗದಿರುವುದು ಎರಡೂ ತಂಡಗಳ ಗಮನಕ್ಕೆ ಬಂದಿರುವುದರಿಂದ ದಕ್ಷಿಣ ಆಫ್ರಿಕ ವೇಗದ ಆಟದಿಂದ ಪಂದ್ಯವನ್ನು ಗೆಲ್ಲಲು ಯೋಜಿಸಿದೆ. ಟೆಸ್ಟ್ ಪಂದ್ಯದ ಇನ್ನೂ 2 ದಿನಗಳು ಬಾಕಿಯಿದ್ದು ಓವರಿಗೆ ಕೇವಲ ಒಂದು ರನ್ನುಗಳನ್ನು ಗಳಿಸುತ್ತ ಹೋದರೂ ದಕ್ಷಿಣ ಆಫ್ರಿಕ ಗೆಲ್ಲುತ್ತದೆ. ಆದ್ದರಿಂದ ಭಾರತಕ್ಕೆ ಡ್ರಾ ಮಾಡಿಕೊಳ್ಳಲು ಯಾವುದೇ ಅವಕಾಶವಿಲ್ಲ. ದಕ್ಷಿಣ ಆಫ್ರಿಕಾದ ಎಲ್ಲ ವಿಕೆಟ್ಗಳನ್ನು ಕಿತ್ತಿ ಗೆಲುವು ಸಾಧಿಸುವುದೊಂದೆ ಭಾರತದ ಮುಂದಿರುವ ಆಯ್ಕೆ. ಚಹ ವಿರಾಮದ ವೇಳೆ ದಕ್ಷಿಣ ಆಫ್ರಿಕ ವಿಕೆಟ್ ನಷ್ಟವಿಲ್ಲದೆ 7 ಓವರ್ಗಳಲ್ಲಿ 34 ರನ್ನುಗಳನ್ನು ಗಳಿಸಿತ್ತು.