ಹಾಂಕಾಂಗ್: ಹಾಂಕಾಂಗ್ ಕೋವಿಡ್ 19 ಬಂದಾಗಿನಿಂದಲೂ ತುಂಬ ಎಚ್ಚರಿಕೆಯಿಂದ ಅದನ್ನು ನಿಭಾಯಿಸುತ್ತಿದೆಯೆಂದೇ ಹೇಳಬಹುದು. ಕಳೆದೆರಡು ವರ್ಷಗಳಲ್ಲಿ ಇಡೀ ಜಗತ್ತೇ ಕೋವಿಡ್ನಿಂದ ಒದ್ದಾಡುವಾಗ ಹಾಂಕಾಂಗ್ ಮಾತ್ರ ಅದರಿಂದ ತನ್ನ ನಾಗರಿಕರು ಒದ್ದಾಡದಂತೆ ಎಚ್ಚರಿಕೆ ವಹಿಸಿತ್ತು. ಈಗ ಇಡೀ ಜಗತ್ತನ್ನು ಕೋವಿಡ್ ರೂಪಾಂತರಿ ಒಮೈಕ್ರಾನ್ ಆವರಿಸಿಕೊಂಡು ಪುನಃ ಜಗತ್ತು ಸಂಕಷ್ಟದಲ್ಲಿರುವಾಗ ಹಾಂಕಾಂಗ್ ಮಾತ್ರ ತನ್ನ ದೇಶದಲ್ಲಿ ಒಂದೂ ಕೊರೋನ ಪ್ರಕರಣ ಬರದಂತೆ ಜಾಗ್ರತೆ ವಹಿಸುತ್ತಿದೆ.
ಅದಕ್ಕಾಗಿ ಅದು ಈಗ ಇಡೀ ಹಾಂಕಾಂಗ್ ನಗರಕ್ಕೆ ಬೀಗ ಹಾಕುತ್ತಿದೆ. ಅಂದರೆ ಬೇರೆ ಎಲ್ಲಿಂದಲೂ ಕೊರೋನದ ಅಥವ ಒಮೈಕ್ರಾನ್ ಸಂಕ್ರಮಿತರು ಹಾಂಕಾಂಗ್ನಲ್ಲಿ ನುಸುಳದಂತೆ ವಿಮಾನಯಾನವನ್ನೇ ರದ್ದುಗೊಳಿಸಿದೆ. ಒಮೈಕ್ರಾನ್ ಪ್ರಕರಣಗಳಿಂದ ಹಾಂಕಾಂಗನ್ನು ರಕ್ಷಿಸಲು 8 ದೇಶಗಳಿಂದ ಬರುವ ವಿಮಾನಗಳಿಗೆ ನಿಷೇಧ ಹೇರಲಾಗಿದೆ. ಹಾಗೆ ಹಾಂಕಾಂಗ್ಗೆ ವಿಮಾನಯಾನ ನಿಷೇಧಗೊಂಡ ದೇಶಗಳಲ್ಲಿ ಭಾರತ ಸಹ ಒಂದು.