ಬೆಳಗಾವಿ : ನಾಡದ್ರೋಹಿ ಎಂಇಎಸ್ ಮುಖಂಡನಿಗೆ ಕಪ್ಪು ಮಸಿ ಬಳಿದಿದ್ದ ಕನ್ನಡ ಹೋರಾಟಗಾರರಿಗೆ ಬಿಡುಗಡೆ ಭಾಗ್ಯವೇ ಸಿಕ್ಕಿಲ್ಲ. ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಬೇಕು ಎಂದು ಆಗ್ರಹಿಸಿ ಪುಂಡರು ಮಹಾಮೇಳ ಆಯೋಜಿಸಿದ್ದರು.
ಕನ್ನಡ ಪರ ಹೋರಾಟಗಾರರು ಎಂಇಎಸ್ ಮುಖಂಡ ದೀಪಕ್ ದಳವಿ ಮುಖಕ್ಕೆ ಮಸಿ ಬಳಿದಿದ್ದರು. ಈ ಸಂಬಂಧ ಕರ್ನಾಟಕ ನವ ನಿರ್ಮಾಣ ಸೇನೆ ಮುಖಂಡ ಸಂಪತ್ಕುಮಾರ ದೇಸಾಯಿ, ಅನಿಲ್, ನಾಗಯ್ಯ ಸೇರಿ ನಾಲ್ವರು ಅರೆಸ್ಟ್ ಆಗಿದ್ದರು. ಎಂಇಎಸ್ ಪುಂಡರು ಕೊಟ್ಟ ಸುಳ್ಳು ದೂರಿನನ್ವಯ ಕನ್ನಡ ಕಟ್ಟಾಳುಗಳ ಬಂಧನವಾಗಿದ್ದು, ಮಸಿ ಬಳಿದ ಕನ್ನಡ ಹೋರಾಟಗಾರ ಮೇಲೆ ಕೊಲೆ ಯತ್ನದ ಕೇಸ್ ದಾಖಲಿಸಿದ್ದರು. ಕಳೆದ 23 ದಿನಗಳಿಂದ ಹಿಂಡಲಗಾ ಜೈಲಿನಲ್ಲಿ ಇರುವ ಕನ್ನಡ ಹೋರಾಟಗಾರರು ಜಾಮೀನಿಗಾಗಿ ಪರದಾಡುತ್ತಿದ್ದಾರೆ. ಅರೆಸ್ಟ್ ಆದ ಕನ್ನಡ ಹೋರಾಟಗಾರರನ್ನ ಬಿಡುಗಡೆ ಮಾಡುವಂತೆ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ನಡೆಯುತ್ತಿದೆ.