Wednesday, January 22, 2025

ತಮಿಳುನಾಡು ಮಾಜಿ ಸಚಿವ ಅಂದರ್​

ಹಾಸನ: ಭ್ರಷ್ಟ ರಾಜಕಾರಣಿಗಳು ಇಂದು ಎಲ್ಲೆಂದರಲ್ಲಿ ವಿಝ್ರಂಬಿಸುತ್ತಿದ್ದಾರೆ. ಹಾಗೆ ನೋಡಿದರೆ ರಾಜಕಾರಣದಲ್ಲಿ ಭ್ರಷ್ಟಾಚಾರ ಸಾಮಾನ್ಯ, ಅದರಲ್ಲೇನೂ ತಪ್ಪಿಲ್ಲ ಎಂದು ಮೊನ್ನೆ ಮೊನ್ನೆ ಬಿಜೆಪಿ ಸಂಸದರೊಬ್ಬರು, 15 ಲಕ್ಷ ರೂಪಾಯಿಗಳ ಲಂಚ ತೆಗೆದುಕೊಂಡ ಗ್ರಾಮ ಪಂಚಾಯಿತ್ ಅದ್ಯಕ್ಷನ ವಿಷಯದಲ್ಲಿ ಹೇಳಿದ್ದು ನಿಮ್ಮ ನೆನಪಿನಲ್ಲಿರಬಹುದು.

ಇದೀಗ ಹಾಸನದಲ್ಲಿ ತಮಿಳುನಾಡು ಮಾಜಿ ಸಚಿವರೊಬ್ಬರನ್ನು ನಗರದ ಡಿ.ಸಿ. ಕಚೇರಿಯೆದುರು ತಮಿಳುನಾಡು ಪೊಲೀಸರು ಬಂಧಿಸಿದ್ದಾರೆ. ಎಐಎಡಿಎಂಕೆ ಪಕ್ಷದ ಮಾಜಿ ಸಚಿವ ರಾಜೇಂದ್ರ ಬಾಲಾಜಿ ಪೊಲೀಸರ ವಶವಾಗಿದ್ದಾರೆ. 3 ಕೋಟಿ ರೂ ವಂಚನೆ ಆರೋಪದಡಿ ದೂರು ದಾಖಲಾಗಿತ್ತೆಂಬ ಮಾಹಿತಿ ಹಿನ್ನೆಲೆ ಕಳೆದ 20 ದಿನಗಳಿಂದ ಪೊಲೀಸರು ಇವರಿಗಾಗಿ ಹುಡುಕಾಟ ನಡೆಸುತ್ತಿದ್ರು. ಸದ್ಯ ಡಿಸಿ ಕಚೇರಿ ಮುಂಭಾಗ ಕಾರನ್ನು ಸುತ್ತುವರಿದು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

RELATED ARTICLES

Related Articles

TRENDING ARTICLES