Wednesday, January 22, 2025

ವಿಭಿನ್ನ ಶೀರ್ಷಿಕೆಯಲ್ಲಿ ಮೂಡಿಬಂದ ಡಿ ಎನ್​ ಎ ಚಿತ್ರ

ಬೆಂಗಳೂರು : ಸ್ಯಾಂಡಲ್​​ವುಡ್​ನಲ್ಲಿ ಇತ್ತೀಚೆಗೆ ವಿಭಿನ್ನ ಚಿತ್ರಕತಥೆಯ ಸಿನಿಮಾಗಳು ಹೆಚ್ಚು ಹೆಚ್ಚಾಗಿ ಮೂಡಿಬರ್ತಿವೆ. ಇದೀಗ DNA ಅನ್ನೋ ಟೈಟಲ್​​ನಲ್ಲಿ ಚಿತ್ರತಂಡವೊಂದು ಸಿನಿಮಾ ಮಾಡಿದೆ.

ಇದೊಂದು ಥ್ರಿಲ್ಲರ್ ಜಾನರ್ ಸಿನಿಮಾ ಆಗಿದ್ದು, ಪ್ರಕ್ಷರಾಜ್ ಮೇಹು ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಮತ್ತು ನಿರ್ದೇಶನ ಮಾಡಿದ್ದಾರೆ. ಹೊಸ ಪ್ರತಿಭೆಗಳಾದ ರೋಜನ್ ನಾರಾಯಣ್,ಎಸ್ತರ್ ನರೋನ ,ಯಮುನ,ನೀನಾಸಂ ಶ್ವೇತ ಕಾಣಿಸಿಕೊಂಡಿದ್ದು ಅಚ್ಯುತ್ ಕುಮಾರ್ ,ಮಾಸ್ಟರ್ ಆನಂದ್ ಪುತ್ರ ಕೃಷ್ಣ ಹಾಗೂ ಪ್ರಕಾಶ್ ರಾಜ್ ಮೇರು ಪುತ್ರ ದೃವ ಆಗಿ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ.

ಡಿ 4 ,DNA ಚಿತ್ರದ ಪತ್ರಿಕಾ ಘೋಷ್ಟಿಯಲ್ಲಿ ತುಳಸಿ ಗೋವಿಂದ ಗೌಡ ಪದ್ಮಶ್ರೀ ಪುರಸ್ಕೃತರು ಚಿತ್ರದ ಹಾಡುಗಳನ್ನ ಬಿಡುಗಡೆ ಮಾಡಿದರು. ಸದ್ಯ ಸಿನಿಮಾದ ಟ್ರೈಲರ್ ಹಾಗೂ ಸಾಂಗ್ಸ್ ಸಾಕಷ್ಟು ನಿರೀಕ್ಷೆಗಳನ್ನು ಮೂಡಿಸ್ತಿದೆ.ಯೋಗರಾಜ್ ಭಟ್, ಜಯಂತ ಕಾಯ್ಕಿಣಿ ಸಾಹಿತ್ಯ ಹಾಗೂ ಚೇತನ್ ಕೃಷ್ಣ ಈ ಚಿತ್ರಕ್ಕೆ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.

ಮಾತೃಶ್ರೀ ಎಂಟರ್‌ಪ್ರೈಸಸ್ ಬ್ಯಾನರ್ ಅಡಿಯಲ್ಲಿ ಮೈಲಾರಿ ಎಂ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.ಡಿ 7ರಂದು ತೆರೆ ಕಾಣಬೇಕಿದ್ದ ಈ ಚಿತ್ರ ರಾಜ್ಯದ ವೀಕೆಂಡ್ ಕರ್ಪೂ ಜಾರಿಯಾಗಿರುವುದರಿಂದಾಗಿ ಮುಂದೂಡಲಾಗಿದೆ.

RELATED ARTICLES

Related Articles

TRENDING ARTICLES