Friday, November 22, 2024

ಕೊರೋನಾ ಎಫೆಕ್ಟ್​​ : ಜಿಲ್ಲೆಯ ಗಡಿ ಭಾಗದಲ್ಲಿ ಕಠಿಣ ಕ್ರಮ

ವಿಜಯಪುರ : ಜಿಲ್ಲೆಯ ಗಡಿ ಭಾಗದಲ್ಲಿ ತಪಾಸಣೆ ವೇಳೆ ಕೋವಿಡ್ ಪಾಸಿಟಿವ್ ಪತ್ತೆ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಗಡಿಯಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ವಿಜಯಪುರ ಜಿಲ್ಲೆಯಲ್ಲಿ 11 ಕಡೆಗಳಲ್ಲಿ ಚೆಕ್ ಪೋಸ್ಟ್ ನಿರ್ಮಾಣ ಮಾಡಲಾಗಿದೆ.

ತಿಕೋಟಾ ತಾಲೂಕಿನಲ್ಲಿ 3, ಚಡಚಣ ತಾಲೂಕಿನಲ್ಲಿ 6, ಇಂಡಿ ತಾಲೂಕಿನಲ್ಲಿ 2 ಚೆಕ್ ಪೋಸ್ಟ್ ನಿರ್ಮಾಣ ಮಾಡಲಾಗಿದೆ. ತಿಕೋಟಾ ತಾಲೂಕಿನ ಕನಮಡಿ, ಯತ್ನಾಳ್, ಸಿದ್ದಾಪೂರ. ಚಡಚಣ ತಾಲೂಕಿನ ಧೂಳಖೇಡ, ಉಮರಜ್, ಉಮರಾಣಿ, ಶಿರಾಡೋಣ, ಕನಕನಾಳ, ಚಡಚಣ. ಇಂಡಿ ತಾಲೂಕಿನ ಹಿಂಗಣಿ, ಅಗರಖೇಡ್ ಗಡಿಯಲ್ಲಿ ಚೆಕ್ ಪೋಸ್ಟ್ ನಿರ್ಮಾಣ ಮಾಡಲಾಗಿದ್ದು, ಮಹಾರಾಷ್ಟ್ರದಿಂದ ರಾಜ್ಯಕ್ಕೆ ಆಗಮಿಸುವವರ ಮೇಲೆ ನಿಗಾ ಇಡಲಾಗಿದೆ.

ಎರಡು ದಿನದ ಮುಂಚೆಯ ನೆಗೆಟಿವ್ ರಿಪೋರ್ಟ್ ಇದ್ದರೆ ಮಾತ್ರ ಗಡಿ ಪ್ರವೇಶಕ್ಕೆ ಅನುಮತಿ ನೀಡಲಾಗುತ್ತಿದ್ದು, ಮಹಾರಾಷ್ಟ್ರದಿಂದ ರಾಜ್ಯಕ್ಕೆ ಬರಬೇಕಾದರೆ ಎರಡು ದಿನದ ಮುಂಚೆಯ ನೆಗೆಟಿವ್ ವರದಿ ಹಾಗೂ ವ್ಯಾಕ್ಸಿನೇಷನ್ ರಿಪೋರ್ಟ ಕಡ್ಡಾಯ ಮಾಡಲಾಗಿದೆ. ರಿಪೊರ್ಟ ಇಲ್ಲದೇ ಬರುತ್ತಿರುವವರನ್ನು ವಾಪಸ್ ಕಳುಹಿಸಲಾಗುತ್ತಿದೆ. ಜಿಲ್ಲೆಯ 11 ಗಡಿಯಲ್ಲಿ ಕಂದಾಯ, ಆರೋಗ್ಯ ಹಾಗೂ ಪೋಲಿಸ್ ಸಿಬ್ಬಂದಿಗಳ ನಿಯೋಜನೆ ಮಾಡಲಾಗಿದೆ.

RELATED ARTICLES

Related Articles

TRENDING ARTICLES