ಬೆಂಗಳೂರು: ಕೋವಿಡ್-19 ಹೆಚ್ಚಳ ಹಿನ್ನೆಲೆ ಸರ್ಕಾರ ರಾಜ್ಯದೆಲ್ಲೆಡೆ ವೀಕೆಂಡ್ ಕಫ್ರ್ಯೂ ಜಾರಿಗೊಳಿಸಿರುವುದಕ್ಕಾಗಿ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹೌದು, ತಮ್ಮದೇ ಸರಕಾರ ಮಾಡಿರುವ ರೂಲ್ಸ್ಗೆ ಕರ್ನಾಟಕದ ಬಿಜೆಪಿಯ ಉನ್ನತ ಮುಖಂಡರಾದ ಈಶ್ವರಪ್ಪ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಈಶ್ವರಪ್ಪ, ಬೆಂಗಳೂರಿನಲ್ಲಿ ಕೊರೊನಾ ಜಾಸ್ತಿ ಇರೋದು ಹೌದು, ನಾನು ಇಲ್ಲ ಅಂತಾ ಹೇಳಿಲ್ಲ. ರಾಜ್ಯದ ಎಲ್ಲಾ ಕಡೆಯೂ ಇದು ಇಲ್ಲ. ಕೆಲವೆಡೆ 2-3-4-5 ಈ ರೀತಿ ಇದೆ. ಜಾಸ್ತಿ ಅಂದರೆ 10 ರವರೆಗೆ ಈ ಪ್ರಕರಣಗಳಿವೆ. ನಾಳೆ ಸಚಿವ ಸಂಪುಟ ಸಭೆ ನಡೆಯಲಿದ್ದು, ಬೆಂಗಳೂರಿನಲ್ಲಿ ಕೋವಿಡ್ ನಿಯಂತ್ರಣ ಮಾಡುವುದು ಎಲ್ಲರ ಕರ್ತವ್ಯವಾಗಿದೆ. ಆದರೆ ರಾಜಧಾನಿಯಲ್ಲಿ ತುಂಬಾ ಜಾಸ್ತಿ ಇದೆ ಅಂದುಕೊಂಡು ಇಡೀ ರಾಜ್ಯಕ್ಕೆ ರೂಲ್ಸ್ ತರುವುದು ಸರಿನಾ ಅಂತಾ ಅನೇಕರು ನನಗೆ ಪ್ರಶ್ನೆ ಮಾಡ್ತಿದ್ದಾರೆ ಎಂದರು.