Thursday, December 26, 2024

ಒಂದೂವರೆ ಸಾವಿರಕ್ಕೆ ಕತ್ತು ಕೊಯ್ದ ಹಂತಕರು

ಬೆಂಗಳೂರು:  ಅವರೆಲ್ಲ ಇನ್ನು ಮೀಸೆ ಚಿಗುರದ ಯುವಕರ ಗುಂಪು. ಎಲ್ಲಾ ಸಣ್ಣ ಪುಟ್ಟ ವ್ಯವಹಾರ, ಶೋಕಿಗೆ ಮೊಬೈಲ್‌ ಶಾಪ್ ಅಂತ ಕಡೆ ಕೆಲಸ, ಬರೊ ಹಣದಲ್ಲಿ ಮೋಜು ಮಸ್ತಿ.. ಸಣ್ಣ ಮೊತ್ತದ ಹಣಕಾಸಿನ ವಿಚಾರಕ್ಕೆ ಆರಂಭವಾದ ಗಲಾಟೆ, ಮೂರನೆಯವನ ಕೊನೆಯಲ್ಲಿ ಅಂತ್ಯವಾದ ಸುದ್ದಿ ಇಲ್ಲಿದೆ.

ಅದು ಕೋಣನ ಕುಂಟೆಯ ಎಕೆ ಕಾಲೊನಿ ಮೇಯಿನ್ ರೋಡ್. 8 ಗಂಟೆಯಾಗ್ತಾ ಇದ್ದಂತೆ ಇನ್ನು ಮುಖದ ಮೇಲೆ ಮೀಸೆ ಚಿಗುರದ ಪಡ್ಡೆ ಹುಡುಗರ ಕಿರಿಕ್ಕ್ ಸ್ಟಾರ್ಟ್​ ಆಗಿತ್ತು. ಹಾಕಿಸ್ಟಿಕ್, ದೊಣ್ಣೆ ತಂದ ಪುಂಡರ ಗುಂಪು ಹುಡಗನೋಬ್ಬನಿಗೆ ಚೆನ್ನಾಗಿ ಥಳಿಸಿ ಎಸ್ಕೇಪ್ ಆಗಿತ್ತು. ಹೊಡೆತ ತಿಂದು ಆಸ್ಪತ್ರೆ ಸೇರಿದ್ದ ಯುವಕ ಇಂದು ಮಸಣ ಸೇರಿದ್ದಾನೆ. ಇದಕ್ಕೇಲ್ಲಾ ಕಾರಣ ಗೊತ್ತಾ? ಜಸ್ಟ್ 1500 ರೂಪಾಯಿ ಮ್ಯಾಟರ್.

ಅದು ಕೊಣನಕುಂಟೆಯ ಮೊಬೈಲ್ ಶಾಪ್​ನಲ್ಲಿ ಬಿಜಾಪುರದ ಮೆಹಬೂಬ್ ಕೆಲಸ ಮಾಡ್ಕೊಂಡಿದ್ದ. ಇನ್ನು ಜಸ್ಟ್ 19 ವರ್ಷದ ಯುವಕ. ಬಂದವನೇ ಲೋಕಲ್ ಹುಡ್ಗರ ಜೊತೆ ಚೆನ್ನಾಗಿಯೇ ಲಿಂಕ್ ಇಟ್ಕೊಂಡಿದ್ದ. ಕೊಲೆಯಾದ ಮೇಹಬೂಬ್ ಕೆಲಸ ಮಾಡ್ತ ಇದ್ದ ಮೊಬೈಲ್ ಅಂಗಡಿ ಮುಂಭಾಗದಲ್ಲಿ ನೆನ್ನೆ ದಿನ ಮಣಿಕಂಠ ಮತ್ತು ಲಲಿತ್ ಎಂಬುವನಿಗೆ ದುಡ್ಡಿಗಾಗಿ ಕಿರಿಕ್ಕ್ ಸ್ಟಾಟ್ ಆಗಿತ್ತು. ಆಗ ಎಂಟ್ರಿಯಾದವನೇ ಈ ಕೊಲೆಯಾದ ಮೆಹಬೂಬ್! ಎಷ್ಟಾದ್ರೂ ಲಲಿತ್ ಸ್ನೇಹಿತ ಅಲ್ವೇ, ಅದಕ್ಕಾಗಿ ಇಬ್ಬರ ಜಗಳ ಬಿಡಿಸಿದ್ದ. ಲಲಿತ್ ಗೆಳೆಯನಾಗಿದ್ದರಿಂದ ಮಣಿಕಂಠನಿಗೆ ವಾರ್ನಿಂಗ್ ಮಾಡಿ ಕಳಿಸಿದ್ದ. ಅದೇ ನೋಡಿ ಅಮಾಯಕನಾಗಿ ಬಂದ ಮೇಹಬೂಬ್ ಮರ್ಡರ್ ಆಗಲು ಪ್ರಮುಖ ಕಾರಣ..

ಗಲಾಟೆಯಾಗುತ್ತಿದ್ದಂತೆ ಸ್ಥಳದಿಂದ ಕಾಲ್ಕಿತ್ತಿದ್ದ ಮಣಿಕಂಠ ಏರಿಯಾದಲ್ಲಿದ್ದ ಪುಡಿ ಹುಡ್ಗರನ್ನ ಸೇರಿಸಿಕೊಂಡು ರಾತ್ರಿ ಬಂದಿದ್ದ. ಮೇಹಬೂಬು ಇದ್ದ ರೂಮ್ಗೆ ಬಂದ ಮಣಿಕಂಠ ಅಂಡ್ ಟೀಮ್ ಹಾಕಿ ಸ್ಟೀಕ್ ದೊಣ್ಣೆ ಹಿಡಿದು ಕೋಣನಕುಂಟೆಯ ಮೈನ್ ರೋಡ್​ನಲ್ಲಿ ಮನಸ್ಸೋ ಇಚ್ಛೆ ಮೇಹಬೂಬ್​ಗೆ ಥಳಿಸಿದ್ರು. ತೀವ್ರವಾಗಿ ಗಾಯಗೊಂಡಿದ್ದ ಮೇಹಬೂಬ್​ನನ್ನು ಕೀಮ್ಸ್ ಗೆ ದಾಖಲಿಸಿದ್ರೂ ಚಿಕಿತ್ರೆ ಫಲಕಾರಿಯಾಗದೆ ಇಂದು ಪ್ರಾಣ ಬಿಟ್ಟಿದ್ದಾನೆ.

ಇದೀಗ ಪ್ರಕರಣ ದಾಖಲಿಸಿಕೊಂಡಿರುವ ಕೋಣನಕುಂಟೆ ಪೊಲೀಸರು ಮಣಿಕಂಠ ಅಂಡ್ ಟೀಮ್ ನ 13 ಕ್ಕೂ ಹೆಚ್ಚು ಜನ ಆರೋಪಿಗಳನ್ನ ಪತ್ತೆ ಹಚ್ಚಿದ್ದಾರೆ. ಒಟ್ಟಿನಲ್ಲಿ ಜಸ್ಟ್ 1500 ಕ್ಕೆ ನಡೆದ ಈ ಕಿರಿಕ್ಕ್ ನಲ್ಲಿ ಎರೆಡು ಟೀಮ್ ಗಳು ಕೂತು ಮಾತಾನಾಡಿದ್ದರೆ ಒಂದು ಅಮಾಯಕ ಜೀವ ಉಳಿಯುತ್ತಿತ್ತು. ಜೊತೆಗೆ ಇನ್ನು ಮೀಸೆ ಚಿಗುರದ ಹುಡುಗರು ಅಂದರ್ ಆಗಿ ಮುದ್ದೆ ಮುರಿಯುವ ಪರಿಸ್ಥಿತಿ ಬರುತ್ತಿರಲಿಲ್ಲಾ. ಆತುರದವನಿಗೆ ಬುದ್ದಿ ಮಟ್ಟ ಅನ್ನುವಾಗೆ ಈ ಪುಂಡರ ಪುಂಡಾಟದಿಂದ ಸತ್ತನ ಕುಟುಂಬ ಕಣ್ಣಿರು ಸುರಿಸುವಂತಾಗಿದೆ.

ಚಂದ್ರಶೇಖರ್ ಕ್ರೈಂ ಬ್ಯೂರೋ ಪವರ್ ಟಿವಿ

RELATED ARTICLES

Related Articles

TRENDING ARTICLES