Wednesday, January 22, 2025

ತೆಂಗಿನಕಾಯಿ ಕಳ್ಳ ಸಿಕ್ಕಿಬಿದ್ದ

ತುಮಕೂರು: ತೆಂಗಿನ ಕಾಯಿ ಕದ್ದವನಿಗೆ ಕಂಬಕ್ಕೆ ಕಟ್ಟಿ ಹಾಕಿ ಹಲ್ಲೆ ಮಾಡಿದ ಘಟನೆ ತುರುವೇಕೆರೆ ತಾಲೂಕಿನ ತಾವರೆಕೆರೆ ಗ್ರಾಮದಲ್ಲಿ ನಡೆದಿದೆ.

ರಾಜು ಎಂಬುವವರ ತೋಟದ ತೆಂಗಿನ ಕಾಯಿ ಕದ್ದ ಹರೀಶ್ , ಕಳ್ಳತನ ಮಾಡುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಕಳ್ಳನನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ಹಾಕಿ ಹಿಗ್ಗಾಮುಗ್ಗಾ ತೋಟದ ಮಾಲೀಕ ರಾಜು ದೊಣ್ಣೆಯಿಂದ ಹಲ್ಲೆಯನ್ನು ಮಾಡಿದ್ದಾನೆ.

ಈಗಾಗಲೇ ಹಲ್ಲೆ ಮಾಡಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು , ತುರುವೇಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

Related Articles

TRENDING ARTICLES