Wednesday, January 22, 2025

ಇಂದು ಸಂಜೆ ಲಾಕ್​ಡೌನ್ ಭವಿಷ್ಯ ನಿರ್ಧಾವಾಗುತ್ತಾ ?

ಬೆಂಗಳೂರು : ರಾಜ್ಯದಲ್ಲಿ ಕೋವಿಡ್- 19 ಒಮಿಕ್ರಾನ್ ನಿಯಂತ್ರಣ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಸಂಜೆ 6:30 ಕ್ಕೆ ಸಿಎಂ ಬಸವರಾಜ್ ಮೊಮ್ಮಾಯಿ ನೇತೃತ್ವದಲ್ಲಿ ತಜ್ಞರ ಜೊತೆ ಮಹತ್ವದ ಸಭೆ ನಡೆಯಲಿದೆ.

ರಾಜ್ಯದಲ್ಲಿ ಕೋವಿಡ್ ನಿಯಂತ್ರಣಕ್ಕೆ ಮುಖ್ಯಮಂತ್ರಿ ಶಿಫಾರಸು ಕೇಳಿದ್ದಾರೆ. ತಜ್ಞರ ಸಮಿತಿ ಪರಿಸ್ಧಿತಿ,ಜಾರಿಗೆ ತರಬೇಕಿರುವ ನಿಯಮಗಳ ಬಗ್ಗೆ ಸಿಎಂ ವರದಿ ಈಗಾಗಲೇ ಒಪ್ಪಿಸಲಾಗಿದೆ. ಸಭೆಯಲ್ಲಿ ಲಾಕ್​ಡೌನ್ ಭವಿಷ್ಯ ವಿರ್ಧಾರವಾಗುತ್ತಿರುವ ಸಾಧ್ಯತೆಗಳಿವೆ ಎನ್ನಲಾಗುತ್ತದೆ. ಇಂದು ಇನ್ನೊಮ್ಮೆ ತಜ್ಞರ ಅಭಿಪ್ರಾಯ ಪಡೆದ ನಂತರ ಗುರುವಾರ ಕ್ಯಾಬಿನೆಟ್ ನಲ್ಲಿ ಚರ್ಚೆ ನಡೆಸಿ ನಿರ್ಧಾರ ಪ್ರಕಟಿಸಲಿದ್ದಾರೆ.

ಸಾರ್ವಜನಿಕ ಸಾರಿಗೆ 50% ಕಾರ್ಯಾಚರಣೆ ಅವಕಾಶ, ಬಸ್,ಮೆಟ್ರೋದಲ್ಲಿ 50% ಸೀಟು ತುಂಬಲು ಮಾತ್ರ ಅವಕಾಶ, ಕಾರ್ಖಾನೆಗಳು , ಐಟಿ-ಬಿಟಿ ಕಂಪನಿಗಳಿಗೆ 50% ಕಾರ್ಯಾಚರಣೆ ಅಥವಾ ವರ್ಕ್​ ಫ್ರಮ್ ಹೋಂಗೆ ಸೂಚಿಸಲಾಗಿದೆ. ಬೆಂಗಳೂರು ನಗರಕ್ಕೆ ಪ್ರತ್ಯೇಕ ಮಾರ್ಗ ಸೂಚಿ ಜಾರಿಗೊಳಿಸುವ ಸಾಧ್ಯತೆ ಇದೆ. ಹಾಗೆನೇ ಸಿಲಿಕಾನ್ ಸಿಟಿ ಸೆಮಿ ಲಾಕ್​ಡೌನ್ ಮಾಡುವ ಸಾಧ್ಯತೆ ಇದೆ.

RELATED ARTICLES

Related Articles

TRENDING ARTICLES