Sunday, January 19, 2025

ಭಾರತದ ಬೌಲರ್​ಗಳನ್ನು ಕಾಡುತ್ತಿರುವ ದಕ್ಷಿಣ ಆಫ್ರಿಕ ಟೇಲ್ಎಂಡರ್ಸ್

ಜೊಹಾನ್ಸ್​ಬರ್ಗ್​: ದಕ್ಷಿಣ ಆಫ್ರಿಕಾ ಮತ್ತು ಭಾರತ ಆಡುತ್ತಿರುವ 2ನೇ ಟೆಸ್ಟ್ ಪಂದ್ಯದ ಎರಡನೇ ದಿನದಾಟದಲ್ಲಿ ದಕ್ಷಿಣ ಆಫ್ರಿಕ ಭಾರತದ 202ರನ್ನುಗಳನ್ನು ಹಿಂದಿಕ್ಕಿ ಮುಂದೆ ಸಾಗಿದೆ. ಭಾರತದ ಬೌಲರ್​ಗಳು ತಮ್ಮ ಶಕ್ತಿಮೀರಿ ಪ್ರಯತ್ನಿಸಿದರೂ ದಕ್ಷಿಣ ಆಫ್ರಿಕಾವನ್ನು 202ರೊಳಗೆ ಆಲೌಟ್ ಮಾಡಲು ಅವರಿಂದ ಸಾಧ್ಯವಾಗಲಿಲ್ಲ. ಆದರೆ ಶಮಿ 2 ವಿಕೆಟ್​ಗಳನ್ನು ಹಾಗೂ ಠಾಕೂರ್  16 ಓವರ್​ಗಳಲ್ಲಿ 56ರನ್ನುಗಳನ್ನು ನೀಡಿ 5 ವಿಕೆಟ್​ಗಳನ್ನು ಪಡೆದು ದಕ್ಷಿಣ ಆಫ್ರಿಕಾವನ್ನು 200ರ ಗಡಿಯ ಮುನ್ನವೇ ಆಲೌಟ್ ಮಾಡುವ ಆಸೆ ಹುಟ್ಟಿಸಿದರು.

ಆದರೆ ನಂತರ ದಕ್ಷಿಣ ಆಫ್ರಿಕಾದ ಟೇಲ್​ಎಂಡರ್ಸ್ ಬ್ಯಾಟ್ಸ್​ಮೆನ್​ಗಳು ಭಾರತದ ಆ ಆಸೆಗೆ ತಣ್ಣೀರೆರಚಿದರು. 8 ವಿಕೆಟ್​ಗಳಿಗೆ 217ರನ್ನುಗಳನ್ನು ಗಳಿಸಿ ದಕ್ಷಿಣ ಆಫ್ರಿಕ ಆಡುತ್ತಿದೆ. ಜಾನ್​ಸೆನ್ 9 ರನ್​ಗಳನ್ನು ಗಳಿಸಿ ಆಡುತ್ತಿದ್ದರೆ, ಆಲಿವರ್ ಖಾತೆ ತೆರೆಯದೆ ಟೀಮ್ ಇಂಡಿಯಾ ಬೌಲರ್​ಗಳನ್ನು ಕಾಡುತ್ತಿದ್ದಾರೆ.

RELATED ARTICLES

Related Articles

TRENDING ARTICLES