ತ್ರಿಷೂರ್ (ಕೇರಳ): ಕೇರಳದ ತ್ರಿಷೂರ್ನಲ್ಲಿ ಪೊಲೀಸ್ ಅಧಿಕಾರಿಯೊಬ್ಬ ಮಧ್ಯ ಸೇವಿಸಿ ಕಾರು ಓಡಿಸಿದ್ದಲ್ಲದೆ ಬೈಕ್ಗೆ ಗುದ್ದಿ ಅಪಘಾತವನ್ನೂ ಸಹ ಮಾಡಿರುವ ಘಟನೆ ನಡೆದಿದೆ. ಸೋಮವಾರ ಮಧ್ಯರಾತ್ರಿಯವರೆಗೂ ಪಾರ್ಟಿಯೊಂದರಲ್ಲಿ ಪಾಲ್ಗೊಂಡಿದ್ದ ಎಎಸ್ಐ ಪ್ರಶಾಂತ್ ಸಖತ್ ಮಧ್ಯ ಸೇವಿಸಿ, ಕಾರಿನಲ್ಲಿ ಮರಳುತ್ತಿರುವಾಗ ಬೈಕ್ಗೆ ಗುದ್ದಿ ಅಪಘಾತ ಮಾಡಿದ್ದಾರೆ.
ಕಾರ್ ಗುದ್ದಿದ ರಭಸಕ್ಕೆ ಬೈಕಿನಲ್ಲಿದ್ದ ಇಬ್ಬರಿಗೂ ಗಂಭೀರವಾದ ಗಾಯಗಳಾಗಿವೆ. ಅವರನ್ನು ಸಮೀಪದ ಆಸ್ಪತ್ರೆಗೆ ಸೇರಿಸಲಾಗಿದೆ. ಅಪಘಾತ ಭೀಕರವಾಗಿತ್ತು ಎಂದು ಸ್ಥಳೀಯರು ಹೇಳಿದ್ದಾರೆ. ವೇಗವಾಗಿ ಕಾರು ಚಾಲನೆ ಮಾಡುತ್ತಿದ್ದ ಎಎಸ್ಐ ಅಪಘಾತವಾದರೂ ಕಾರು ನಿಲ್ಲಿಸಿಲ್ಲ. ಸುಮಾರು ಒಂದು ಕಿಲೋಮಿಟರ್ ನಂತರ ಚಾಲಕನ ನಿಯಂತ್ರಣ ಕಳೆದುಕೊಂಡ ನಂತರ ಕಾರು ನಿಂತಿದೆ. ಸ್ಥಳೀಯರು ಪೊಲೀಸರಿಗೆ ಸುದ್ದಿ ಮುಟ್ಟಿಸಿದ ನಂತರ ಪೊಲೀಸರು ಎಎಸ್ಐ ಪ್ರಶಾಂತ್ನನ್ನು ಬಂಧಿಸಿ ಕ್ರಮ ಕೈಗೊಂಡಿದ್ದಾರೆ.