Saturday, November 23, 2024

ಹೊಸ ವರ್ಷಕ್ಕೆ 874 ಕಾರುಗಳಿಗೆ ಬಿತ್ತು ಬೆಂಕಿ..!

ಹೊಸ ವರ್ಷ ಅಂದರೇನು ಹಾಗೆ ಅಲ್ಲಿ ಹೊಸ ಭರವಸೆಗಳು, ಸಂತಸ, ನಗು. ಹೀಗೆ ಸಂಭ್ರಮದ ವಾತವರಣವೇ ನಿರ್ಮಾಣವಾಗಿರುತ್ತದೆ, ಹೊಸ ವರ್ಷದ ಮೊದಲ ದಿನ ಎಲ್ಲರು ಖುಷಿಯಿಂದ ಕಳೆಯೋದಕ್ಕೆ ಇಷ್ಟ ಪಡ್ತಾರೆ. ಹೀಗಾಗಿನೆ ಕೆಲವು ಕಡೆಗಳಲ್ಲಿ ಹೊಸ ವರ್ಷ ಬಂತು ಅಂದ್ರೆ, ಹೊಸ ವರ್ಷಾಚರಣೆಗೆ ಬರದ ಸಿದ್ಧತೆಗಳನ್ನ ಮಾಡಿಕೊಂಡಿರುತ್ತಾರೆ. ಈ ಒಂದು ದಿನದ ಆಚರಣೆಗಾಗಿ ವಿವಿಧ ಖಾದ್ಯಗಳು, ಕೇಕ್​ಗಳು, ಮಧ್ಯ, ಹಾಗು ಹಲವು ಪಾರ್ಟಿಗಳನ್ನ ಆಯೋಜನೆ ಮಾಡಲಾಗುತ್ತದೆ. ಈ ಮೂಲಕ ಎಲ್ಲರು ಖುಷಿಯಿಂದ ಹಾಗು ಸಂಸತಸದಿಂದ ಹೊಸ ವರ್ಷವನ್ನ ಬರ ಮಾಡಿಕೊಳ್ಳುತ್ತಾರೆ. ಇನ್ನು ಶುಭಾಶಯಗಳ ವಿನಿಮಯ ಕೂಡ ಹಾಗೆ, ಹಲವರು ಮೆಸೆಜ್​ಗಳ ಮೂಲಕ, ತಮ್ಮ ಆತ್ಮೀಯರಿಗೆ ಕರೆ ಮಾಡಿ ಅಥವಾ ಭೇಟಿಯಾಗಿ ತಿಳಿಸುತ್ತಾರೆ. ಮತ್ತೆ ಕೆಲವರು ಪಟಾಕಿಯನ್ನ ಸಿಡಿಸಿ ಸಂಭ್ರಮಿಸುವ ಜೊತೆಗೆ ಎಲ್ಲರೊಂದಿಗೆ ಶುಭಾಷಯಗಳನ್ನ ವಿನಿಮಯ ಮಾಡಿಕೊಳ್ಳುತ್ತಾರೆ. ಆದರೆ ಫ್ರಾನ್ಸ್​ನಲ್ಲಿ ಮಾತ್ರ ವಿಚಿತ್ರ ಆಚರಣೆಯೊಂದು ಜಾರಿಯಲ್ಲಿದ್ದು, ಈ ಆಚರಣೆಯಿಂದಾಗಿ ಜನರು ಹೊಸ ವರ್ಷವನ್ನ ಆಚರಿಸೋದಕ್ಕೂ ಭಯ ಪಡ್ತಾರೆ.

ಫ್ರಾನ್ಸ್​ ಅಂದರೆ ಅದು ಪ್ರವಾಸಿಗರ ಸ್ವರ್ಗ, ಅಲ್ಲಿನ ಪ್ರಕೃತಿ ಸೌಂದರ್ಯ, ಪಾರಂಪರಿಕ ಕಟ್ಟಡಗಳು, ಆಧುನಿಕ ನಗರ, ಐಫೆಲ್​ ಟವರ್​, ಸೇರಿದ ಹಾಗೆ ಒಂದಕ್ಕೊಂದು ಅಧ್ಬುತವಾದ ನಯನ ಮನೋಹರವಾದ ಸೌಂದರ್ಯವನ್ನ ಹೊಂದಿರುವ ರಾಷ್ಟ್ರ, ಇಲ್ಲಿನ ಸಾಕಷ್ಟು ಜನರು ಅತ್ಯಾಧುನಿಕ ಬದುಕನ್ನ ಇಷ್ಟ ಪಡೋದರ ಜೊತೆಗೆ, ನಾಸ್ತಿಕ ವಾದವನ್ನ ಬಹುತೇಕರು ಒಪ್ಪುತ್ತಾರೆ. ಆದರೆ ಇಂತಹ ಫ್ರಾನ್ಸ್​ನಲ್ಲೂ ಹಲವು ವರ್ಷಗಳಿಂದ ಕೆಲ ವಿಚಿತ್ರ ಆಚರಣೆಗಳಿವೆ, ಆ ಕೆಲ ಆಚರಣೆಗಳು ಜನ ಸಮಾನ್ಯರಿಗೆ ಸದಾ ತೊಂದರೆಯನ್ನ ನಿಡುತ್ತಲೇ ಇರುತ್ತದೆ. ಇಂತಹದ್ದೆ ಒಂದು ವಿಚಿತ್ರ ಆಚರಣೆಯಿಂದ ಫ್ರಾನ್ಸ್​ನಲ್ಲಿ ಕೆಲ ಜನರು ಹಲವು ದಶಕಗಳಿಂದ ಹೊಸ ವರ್ಷ ಆಚರಿಸೋದನ್ನೇ ಬಿಟ್ಟಿದ್ದಾರಂತೆ, ಕೆಲವರಂತು ಹೊಸ ವರ್ಷ ಬಂತು ಅಂದ್ರೆ, ಯಾಕಪ್ಪ ಹೊಸ ವರ್ಷ ಬಂತು ಅಂತ ಭಯ ಬೀಳುತ್ತಾರೆ, ಆ ಆಚರಣೆಯ ಹೆಸರು ‘ಕಾರ್​ ಬರ್ನಿಂಗ್​ ಟ್ರೆಡಿಷನ್



ಹೌದು, ನಿಮಗೆ ಈ ವಿಚಾರ ಕೇಳಿ ಆಶ್ಚರ್ಯ ಆಗ್ತಾ ಇರಬಹುದು, ಆದರೆ ಇದು ನಿಜ, 1990 ರಿಂದ ಈ ಆಚರಣೆ ಜಾರಿಯಲ್ಲಿದ್ದು, 90ರ ದಶಕದಿಂದ ಇಲ್ಲಿಯವರೆಗು ಹೊಸ ವರ್ಷದ ದಿನ ಕಾರುಗಳಿಗೆ ಬೆಂಕಿ ಹಾಕುವುದು ಫ್ರಾನ್ಸ್​ನ ವಿವಾದಾತ್ಮಕ ಸಂಪ್ರದಾಯವಾಗಿ ಬೆಳೆದು ಬಂದಿದೆ. ಇದೀಗ ಈ ವರ್ಷವೂ ಸುಮಾರು 874 ಕಾರುಗಳಿಗೆ ಬೆಂಕಿ ಹಾಕಿರುವ ಫ್ರಾನ್ಸ್​ನ ಯುವಕರ ಬಗ್ಗೆ ಎಲ್ಲೇಡೆ ಆಕ್ರೋಶ ವ್ಯಕ್ತವಾಗ್ತಾ ಇದೆ, ಸುಟ್ಟ ವಾಹನಗಳನ್ನ ಕಸದ ತೊಟ್ಟಿಗಳಿಗೆ ಹಾಗು ಗುಜುರಿಗಳಿಗೆ ಹಾಕಿರುವುದಾಗಿ ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು ಈ ಆಚರಣೆಯಲ್ಲಿ ಸುಮಾರು 30ಕ್ಕೂ ಹೆಚ್ಚು ಜನ ಪೊಲೀಸರಿಗೆ ಗಾಯಗಳಾಗಿದ್ದು, ಅವರನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ, ಈ ವಿವಾದಾತ್ಮಕ ಆಚರಣೆಯ ಬಳಿಕ ಸುಮಾರು 441 ಜನರನ್ನ ಬಂಧಿಸಲಾಗಿದೆ ಅಂತ ಪೊಲೀಸರು ಹೇಳ್ತಾ ಇದ್ದಾರೆ.

ಅಷ್ಟಕ್ಕೂ ಹೊಸ ವರ್ಷಕ್ಕೆ ಕಾರು ಸುಡುವ ಸಂಪ್ರದಾಯ ಆರಂಭವಾಗಿದ್ದು 90ರ ದಶಕದಲ್ಲಿ, ಈ ಅವಧಿಯಲ್ಲಿ ಫ್ರಾನ್ಸ್​ನಲ್ಲಿ ಸಾಕಷ್ಟು ಸಮಸ್ಯೆಗಳು ತಲೆದೂರಿದ್ದವು, ಅಪರಾಧ ಚಟುವಟಿಕೆಗಳು ಹೆಚ್ಚಾಗಿದ್ದವು, ಬಡತನ ಸಮಸ್ಯೆ, ಆಹಾರದ ಕೊರತೆ, ರೇಸಿಸಂ ಸೇರಿದ ಹಾಗೆ ಹಲವು ಸಮಸ್ಯೆಗಳು ಫ್ರಾನ್ಸ್​ನ ಅಸಮತೋಲನಕ್ಕೆ ಕಾರಣವಾಗಿತ್ತು, ಆದರೂ ಕೂಡ ಫ್ರಾನ್ಸ್​​ ತನ್ನಲ್ಲಿ ಏನು ಸಮಸ್ಯೆಯೇ ಇಲ್ಲ ಅನ್ನೋ ಹಾಗೆ ತೋರಿಸಿಕೊಳ್ಳುತ್ತಿತ್ತು, ಇದೇ ಅವಧಿಯಲ್ಲಿ ಫ್ರಾನ್ಸ್​ನಲ್ಲಿ ಹೊಸ ಹೋರಾಟ ಶುರುವಾಗಿತ್ತು. ಅದುವೇ ವೇತನ ತಾರತಮ್ಯದ ವಿರುದ್ಧದ ಹೋರಾಟ, ಈ ಹೋರಾಟ ಕೇವಲ ಹೋರಾಟವಾಗಿದರೆ ಇವತ್ತು ಇಷ್ಟು ಅನಾಹುತಗಳಿಗೆ ಕಾರಣವಾಗ್ತಾ ಇರ್ಲಿಲ್ಲ, ಆದರೆ, ವೇತನ ತಾರತಮ್ಯದ ವಿರುದ್ಧ ಹೋರಾಡೋದಕ್ಕೆ ಅಲ್ಲಿನ ಯುವಕರು ಹಿಡಿದ ಮಾರ್ಗವೇ ಇವತ್ತು ಹೊಸ ಆಚರಣೆಯನ್ನ ಹುಟ್ಟು ಹಾಕಿದೆ. 1990ರಲ್ಲಿ ವೇತನ ತಾರತಮ್ಯದ ವಿರುದ್ಧ ಹೊಸ ವರ್ಷದಂದು ಹೋರಾಟ ಮಾಡುತ್ತಿದ್ದ ಯುವಕರ ಗುಂಪು, ಐಷಾರಾಮಿ ಕಾರುಗಳಿಗೆ ಬೆಂಕಿ ಹಚ್ಚಿತ್ತು. ಇದಾದ ಬಳಿಕ ಕಾರು ಕಳೆದು ಕೊಂಡ ಮಾಲಿಕರು ನಮಗೆ ಹೊಸ ವರ್ಷ ಕೆಟ್ಟದಾಗಿ ಆರಂಭವಾಗಿದೆ ಅಂತ ಹೇಳಿಕೆಯನ್ನ ನೀಡಿದ್ರು, ಹೀಗಾಗಿ ಇದನ್ನೆ ಸಂಸ್ಕೃತಿಯಾಗಿ ಪರಿವರ್ತಿಸಿದ ಈ ಯುವಕರ ಗುಂಪು, ಪ್ರತಿ ಹೊಸ ವರ್ಷದಂದು ಕಾರುಗಳಿಗೆ ಬೆಂಕಿ ಹಚ್ಚುವುದನ್ನ ಮುಂದುವರೆಸಿಕೊಂಡು ಬಂದಿದೆ.

ಆದರೆ, ಈ ವಿವಾದಾತ್ಮಕ ಸಂಸ್ಕೃತಿ ಅತೀ ಹೆಚ್ಚು ಸುದ್ದಿ ಮಾಡಿದ್ದು ಅಂದರೆ ಅದು 2005ರಲ್ಲಿ. 2005ರಲ್ಲಿ ಸುಮಾರು 9 ಸಾವಿರ ಕಾರಿಗೆ ಯುವಕರ ಗುಂಪು ಬೆಂಕಿ ಹಚ್ಚಿತ್ತು, ಅದು ಅವತ್ತಿನ ಅಂತರಾಷ್ಟ್ರೀಯ ಮಾಧ್ಯಮದಲ್ಲಿ ಬಹುದೊಡ್ಡ ಸುದ್ದಿಯಾಗಿತ್ತು, ಜೊತೆಗೆ ಈ ಘಟನೆ ಫ್ರಾನ್ಸ್​ನಲ್ಲಿ ಹೊಸ ದಂಗೆಯ ಮುನ್ಸೂಚನೆಯನ್ನ ನೀಡಿತ್ತು. ಆದರೆ, ಅಷ್ಟರಲ್ಲೇ ಕಾರ್ಯೋನ್ಮುಖರಾದ ಫ್ರಾನ್ಸ್​ನ ಪೊಲೀಸರು ಎಲ್ಲಾ ರೀತಿಯ ಪ್ರತಿಭಟನೆಗಳನ್ನ ನಿರ್ಬಂಧಿಸಿ, ಪರಿಸ್ಥಿತಿಯನ್ನ ಶಾಂತಗೊಳಿಸಿದ್ದರು, ಆದರೂ ಕೂಡ ಪ್ರತೀ ವರ್ಷ ಕಾರಿಗೆ ಬೆಂಕಿ ಹಚ್ಚುವ ಪ್ರಕರಣಗಳು ಮಾತ್ರ ವರ್ಷ-ವರ್ಷ ಪತ್ತೆಯಾಗುತ್ತಲೇ ಇದೆ. 2019 ರಲ್ಲಿ ಈ ಸಂಪ್ರದಾಯದ ಹೆಸರಿನಲ್ಲಿ 1,316 ಕಾರುಗಳನ್ನು ಸುಟ್ಟು ಹಾಕಲಾಗಿತ್ತು, 2020 ರಲ್ಲಿ ಕೊವಿಡ್​ ಕಾರಣದಿಂದ ಅಂಕಿಅಂಶಗಳನ್ನ ಸರ್ಕಾರ ಬಿಡುಗಡೆ ಮಾಡಿರಲಿಲ್ಲ, ಆದರೆ ಈ ವರ್ಷ 874 ಕಾರುಗಳಿಗೆ ಮತ್ತೆ ಬಂಡುಕೋರರು ಬೆಂಕಿ ಹಚ್ಚಿದ್ದಾರೆ.

ಒಟ್ಟಾರೆಯಾಗಿ ಈ ಘಟನೆ ಫ್ರಾನ್ಸ್​ನ ಜನರ ಆಕ್ರೋಶಕ್ಕೆ ಕಾರಣವಾಗಿದ್ದು, ಬೆಂಕಿಗೆ ಆಹುತಿಯಾದ ಕಾರುಗಳನ್ನ ಕಂಡು ಮಾಲೀಕರು ಬೇಸರ ವ್ಯಕ್ತ ಪಡಿಸಿದ್ದು, ಪೊಲೀಸರ ವಿರುದ್ಧ ಆಕ್ರೋಶವನ್ನ ವ್ಯಕ್ತಪಡಿಸುತ್ತಿದ್ದಾರೆ, ಮುಂದಿನ ದಿನಗಳಲ್ಲಿ ಕಾರಿಗೆ ಬೆಂಕಿ ಹಚ್ಚಿದವರನ್ನ ಪತ್ತೆ ಹಚ್ಚಿ, ಇನ್ನು ಮುಂದೆ ಈ ರೀತಿ ಸಮಸ್ಯೆ ಆಗದಂತೆ ಎಚ್ಚರ ವಹಿಸು ಕೊಳ್ಳುತ್ತೇವೆ ಅಂತ ಸ್ಥಳೀಯ ಸರ್ಕಾರಗಳು ಹೇಳುತ್ತಿವೆ. ಹಾಗಾಗಿ ಮುಂದಿನ ವರ್ಷವಾದ್ರು ಈ ವಿಚಿತ್ರ ಸಂಪ್ರದಾಯಕ್ಕೆ ಬ್ರೇಕ್​ ಬೀಳುತ್ತಾ ಅನ್ನೋದನ್ನ ಕಾದು ನೋಡಬೇಕಾಗಿದೆ.

RELATED ARTICLES

Related Articles

TRENDING ARTICLES