Wednesday, January 8, 2025

ಒಮೈಕ್ರಾನ್ ಹಳೇದಾಯ್ತು, ಕೊರೋನ ಹೊಸ ತಳಿ IHU ಬಂತು

ಪ್ಯಾರಿಸ್: ಕೊರೋನ ಇಡೀ ಜಗತ್ತಿನಲ್ಲಿ ಕಳೆದ ಎರಡು ವರ್ಷಗಳಿಂದ ತನ್ನ ಅಟ್ಟಹಾಸವನ್ನು ಮುಂದುವರೆಸುತ್ತಲೇ ಇದೆ. ಮೊದಲಿಗೆ ಕೋವಿಡ್ 19 ಎಂದು ಕರೆಯಲ್ಪಟ್ಟ ಇದು ನಂತರ ಡೆಲ್ಟಾ ಬೀಟಾ ಗಾಮಾ ಹೀಗೆ ಹಲವಾರು ರೂಪಗಳನ್ನು ಧರಿಸುತ್ತ ಜಗತ್ತನ್ನು ಸುತ್ತುತ್ತಿದೆ. ಇದರ ಹೊಚ್ಚ ಹೊಸ ತಳಿ ಒಮೈಕ್ರಾನ್ ಈಗ ತಿಂಗಳಿಂದ ಇಡೀ ಜಗತ್ತನ್ನು ಬೆಚ್ಚಿಬೀಳಿಸಿರುವುದು ಎಲ್ಲರಿಗೂ ಗೊತ್ತು. ಒಮೈಕ್ರಾನ್​ನ ಲಕ್ಷಣಗಳ ಬಗ್ಗೆ ಅದು ಜನರನ್ನು ಎಷ್ಟರ ಮಟ್ಟಿಗೆ ಕಾಡಲಿದೆ ಎಂಬುದರ ಬಗ್ಗೆ ವಿಜ್ಷಾನಿಗಳು ಇನ್ನಷ್ಟೇ ಅಧ್ಯಯನ ನಡೆಸಿದ್ದಾರೆ. ಅವರ ಅಧ್ಯಯನ ಮುಗಿಯುವ ಮೊದಲೇ ಕೊರೋನ ಈಗ ಮತ್ತೊಂದು ಹೊಸ ರೂಪದಲ್ಲಿ ಕಾಣಿಸಿಕೊಂಡಿದೆಯೆಂದು ವರದಿಯಾಗಿದೆ.

ಕೊರೋನ ವೈರಸ್​ನ ಹೊಸ ರೂಪಾಂತರವನ್ನು ಕಂಡುಹಿಡಿದಿರುವುದು ಫ್ರೆಂಚ್ ಸಂಶೋಧಕರು. ಇದು ಮಧ್ಯ ಆಫ್ರಿಕಾದ ಕ್ಯಾಮರೂನ್​ನಿಂದ ಬಂದಿರಬಹುದು ಎಂದು ಹೇಳಲಾಗಿದೆ. ಇದನ್ನು ತಾತ್ಕಾಲಿಕವಾಗಿ IHU ಎಂದು ಕರೆಯಲಾಗಿದೆ. B.1.640.2 ಹೆಸರಿನ ವಂಶಾವಳಿಯ ಹೊಸ ರೂಪಾಂತರಿ ತಳಿ ಇದಾಗಿದ್ದು, ಇದು ಈಗಾಗಲೇ ಫ್ರಾನ್ಸ್​ನಲ್ಲಿ 12 ಜನರಲ್ಲಿ ಕಾಣಿಸಿಕೊಂಡಿದೆ ಎಂದು ತಜ್ಷರು  ಹೇಳಿದ್ದಾರೆ. ಈ ತಳಿಯಲ್ಲಿ 46 ರೂಪಾಂತರಗಳು ಆಗಿದ್ದು, 37 ಅಳಿಸುವಿಕೆಗಳೂ ಸಹ ಆಗಿವೆ ಎಂದು ತಜ್ಷರು ಹೇಳಿದ್ದಾರೆ.

RELATED ARTICLES

Related Articles

TRENDING ARTICLES